Select Your Language

Notifications

webdunia
webdunia
webdunia
webdunia

ಮಾಸ್ಟರ್ ಬ್ಲಾಸ್ಟರ್ 200ನೇ ಮ್ಯಾಚ್ ನಲ್ಲಿ ವಾಂಖಡೆ ಸ್ಟೇಡಿಯಂ ನಲ್ಲಿ ಪೋಲಿ ಪೂನಂ ಬೆತ್ತಲೆ ಸೇವೆ?

ಮಾಸ್ಟರ್ ಬ್ಲಾಸ್ಟರ್ 200ನೇ ಮ್ಯಾಚ್ ನಲ್ಲಿ ವಾಂಖಡೆ ಸ್ಟೇಡಿಯಂ ನಲ್ಲಿ ಪೋಲಿ ಪೂನಂ ಬೆತ್ತಲೆ ಸೇವೆ?
, ಶನಿವಾರ, 16 ನವೆಂಬರ್ 2013 (12:28 IST)
PR
ಈಗ ಸಚಿನ್ ತೆಂಡೂಲ್ಕರ್ ಅವರ ನಿವೃತ್ತಿಯ ಬಗ್ಗೆ ಎಲ್ಲಾ ಕಡೆ ಸುದ್ದಿ. ಅವರ 200 ನೇ ಟೆಸ್ಟ್ ಗೆ ಸಂಬಂಧಿಸಿದಂತೆ ಹೊಸದಾದ ಅಲೆ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಜನರು ತಮ್ಮ ಟೀವಿ ಸೆಟ್ ಮುಂದೆ ಬಿಟ್ಟು ಎಲ್ಲೂ ಹೋಗದಂತಹ ವಾತಾವರಣ ಕಲ್ಪಿತವಾಗಿ. ಮುಂಬೈ ವಾಂಖಡೆ ಸ್ಟೇಡಿಯಂ ನಲ್ಲಿ ನಡೆಯುವ ಈ ಮ್ಯಾಚ್ ವೀಕ್ಷಿಸಲು ಗಣ್ಯಾತಿ ಗಣ್ಯರು ಬರುತ್ತಾರೆ. ಅವರದ್ದೇ ಆದ ಕಾಣಿಕೆಗಳನ್ನು ನೀಡಲು ಸಿದ್ಧ ರಾಗಿದ್ದಾರೆ ಎಂಬ ಬಗ್ಗೆ ಮಾಧ್ಯಮಗಳು ದಿನಕ್ಕೊಂದು ಹೊಸ ಹೊಸ ವಿಷಯಗಳನ್ನು ಪ್ರಸಾರ ಮಾಡುತ್ತಲೇ ಬಂದಿದೆ. ಈಗಿನ ಹೊಸ ಸುದ್ದಿ ಏನೆಂದರೆ ಬಾಲಿವುಡ್ ನ ಬಿಚ್ಚುಡುಗೆ ಸೆಕ್ಸಿ ಸುಂದರಿ ಪೂನಂ ಪಾಂಡೆ ವಾಂಖಡೆಯಲ್ಲಿ ಹೊಸದೊಂದು ಹವಾ ಸೃಷ್ಟಿ ಮಾಡುತ್ತಾಳೆ ಅಂತ ಬಿ ಟೌನ್ ಜನರ ಅನಿಸಿಕೆ ಆಗಿದೆ.

ಸದ್ಯಕ್ಕೆ ಈ ಪೋಲಿ ಪಾಂಡೆ ಕನ್ನಡ ಸಿನಿಮಾಒಂದರಲ್ಲಿ ನಟಿಸುತ್ತಿದ್ದಾಳೆ. ಇತ್ತೀಚೆಗೆ ಮರಣ ಹೊಂದಿದ ರಾಜೇಶ್ ಆ ಚಿತ್ರದ ನಾಯಕ.
ಚಿತ್ರದ ಹೆಸರು ಲವ್ ಈಸ್ ಪಾಯ್ಸನ್. ಈಕೆ ಇತ್ತೀಚೆಗೆ ಟ್ವೀಟ್ ಮಾಡುತ್ತಾ ತಾನು ವಾಂಖಡೆ ಸ್ಟೇಡಿಯಂ ನಲ್ಲಿ ಮಾಸ್ಟರ್ ಬ್ಲಾಸ್ಟರ್ ಮ್ಯಾಚ್ ನಲ್ಲಿ ಕಾಣುವ ರೀತಿ ಸಹ ದಾಖಲೆ ಆಗುತ್ತೆ ಎಂದು ಹೇಳಿದ್ದಾಳೆ. ಆಕೆ ಹೇಗೆ ಕಾಣ್ತಾಳೆ ಎನ್ನುವುದು ಎಲ್ಲರಿಗೂ ಗೊತ್ತು 2011ರಲ್ಲಿ ಭಾರತ ವಿಶ್ವಕಪ್ ಗೆದ್ದರೆ ತಾನು ಬೆತ್ತಲೆ ಆಗಿ ಎಲ್ಲರ ಮುಂದೆ ಬರ್ತೀನಿ ಎಂದಿದ್ದಳು. ಅದರಿಂದ ಆಕೆ ಬೆಳಗಾಗುವಷ್ಟರಲ್ಲೇ ಫೇಮಸ್. ಈ ಬಾರಿಯೂ ಸಚಿನ್ ಮ್ಯಾಚ್ ನಲ್ಲಿ ಬೆತ್ತಲೆ ಸೇವೆಗೆ ಸಿದ್ಧ ಆಗಿದ್ದಾಳೇಂತ ಕಾಣುತ್ತೇ ಪೋಲಿ ಪಾಂಡೆ. ಎಂತಹ ಬಾಡಿಗೆ ಶೋಕಿ ನೋಡಿ ಪಾಪ್ಯೂಲಾರಿಟಿಗೆ!

Share this Story:

Follow Webdunia kannada