Webdunia - Bharat's app for daily news and videos

Install App

ಮಾಮು ಟೀ ಅಂಗಡಿ ಚಿತ್ರಕ್ಕಾಗಿ ಬಿಪಾಶಾ ಕನ್ನಡಕ್ಕೆ?

Webdunia
ಸೋಮವಾರ, 31 ಮಾರ್ಚ್ 2014 (15:20 IST)
ಮುಂಬ ೈ: ಇದೇ ಮೊದಲ ಬಾರಿಗೆ ಕೃಷ್ಣ ಸುಂದರಿ ಬಿಪಾಶಾ ಕನ್ನಡಕ್ಕೆ ಆಗಮಿಸುತ್ತಿದ್ದಾರಂತೆ. ಹೀಗೊಂದು ಗಾಸಿಪ್ ಗಾಂಧಿನಗರದ ಮೂಲೆಮೂಲೆಗಳಲ್ಲಿ ಹರಡುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮಾಮು ಟೀ ಅಂಗಡಿಯಲ್ಲಿ ವಿಶೇಷ ಪಾತ್ರವೊಂದನ್ನು ಬಿಪಾಶಾ ಪೋಷಿಸಲಿದ್ದಾರೆ. ಈ ಚಿತ್ರದಲ್ಲಿ ಹಲವು ವಿಶೇಷಗಳಿವೆ. ಈಗಾಗಲೇ ಚಿತ್ರಕ್ಕೆ ಆರಂಭಕ್ಕೆ ಚಾಲನೆ ಸಿಕ್ಕಿದೆ. ಚಿತ್ರದ ಒಂದು ಹಾಡಿಗೆ ಶ್ರೀನಗರ ಕಿಟ್ಟಿ, ಅಜಯ್ರಾವ್, ನೆನಪಿರಲಿ ಪ್ರೇಮ್, ಯೋಗೀಶ್ ದನಿಗೂಡಿಸಲಿದ್ದಾರೆ. ಅಲ್ಲದೆ ಶ್ರೀನಗರ ಕಿಟ್ಟಿ, ಅಜಯ್ರಾವ್, ಪ್ರೇಮ್ ಹಾಗೂ ಪ್ರಜ್ವಲ್ ದೇವರಾಜ್ ಮಾಮು ಟೀ ಅಂಗಡಿ ಚಿತ್ರದ ಗೌರವ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಡಾನ್ಸ್ ಇಂಡಿಯಾ ಡಾನ್ಸ್, ಕಲರ್ಸ ಟಿವಿಯ ಜಲಕ್ ದಿಖಲಾ ಜ ಕಾರ್ಯಕ್ರಮದ ಖ್ಯಾತಿಯ ವರುಣ್ ಸಿಂಗಮ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಿಂದಿ ಚಿತ್ರರಂಗದಿಂದ ಕಾಜಲ್ ಅಥವಾ ಬಿಪಾಶಾ ಬಸು ಕನ್ನಡಕ್ಕೆ ಆಗಮಿಸುವ ಸಾಧ್ಯತೆಗಳಿವೆ. ಪರಮೇಶ್ ಈ ಚಿತ್ರದ ನಿದರ್ೇಶಕರು. ಜೀ ಟಿವಿಯ ಕಿವಿ ಮೇಲೆ ಫ್ಲವರ್ ಕಾರ್ಯಕ್ರಮದ ರುವಾರಿಯಾಗಿರುವ ಪರಮೇಶ್ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಅನುಭವವಿದ್ದವರು. ಈ ಚಿತ್ರ ನಾಲ್ಕು ಮಂದಿ ನಾಯಕರು ಹಾಗೂ ಮೂರು ನಾಯಕಿಯರ ಸುತ್ತುವ ಕಥೆ. ಟೀ ಅಂಗಡಿ ಬಳಿ ಗೆಳೆಯರು ಸೇರುವುದು, ಅಲ್ಲಿ ನಡೆಯುವ ಹರಟೆ, ಜಗಳ, ತಮಾಷೆ ಎಲ್ಲವೂ ಕಥೆಯಲ್ಲಿದೆಯಂತೆ. ವರುಣ್ ಸಿಂಗಮ್, ಅಭಿಶೇಕ್, ರಿತೇಶ್, ಮಹೇಶ್ ಜೊತೆ ನಾಯಕಿಯಾಗಿ ಸಂಗೀತ ಭಟ್, ರಾಶಿ ಸಿಂಗ್, ಅರ್ಚನಾ ಸಿಂಗ್ ಇದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments