ಮಣಿರತ್ನಂ ಚಿತ್ರದ ಕಾರ್ಯಗಳು ತುಸು ತಡವಾಗಿ ಇದ್ದರು ಸಹ ಕೊರಟಾಲ ಶಿವ ಅವರ ಸಿನಿಮಾದ ಕೆಲಸವು ಶೀಘ್ರವಾಗಿ ಆರಂಭ ಆಗಿದೆ. ಆದ್ರೆ ಮಹೇಶ್ ಬಾಬು ಒಂದರ ಹಿಂದೆ ಅನೇಕ ಚಿತ್ರಗಳಲಿ ಸಹಿ ಹಾಕಿದ ಕಾರಣ ಇದರಲ್ಲಿ ನಟಿಸುವ ಸಾಧ್ಯತೆ ತುಂಬಾ ಕಡಿಮೆ ಎಂದು ತಿಳಿಯಲಾಗಿತ್ತು.
ಅಂತಹ ಯಾವುದೇ ಸಂಗತಿ ನಡೆದಿಲ್ಲ.ಯುಟಿವಿಯ ದಕ್ಷಿಣದ ಮುಖ್ಯಸ್ಥ ಧನಂಜಯ್ ಕುಮಾರ್ ಅವರು ಕೊರಟಾಲ ಶಿವೂ ನಿರ್ದೇಶನದ ಚಿತ್ರವೂ ಸದ್ಯದಲ್ಲೇ ಆರಂಭ ಆಗುತ್ತದೆ ಎನ್ನುವ ಸಂಗತಿ ಟ್ವೀಟ್ ಮಾಡಿ ಹೇಳಿದ್ದಾರೆ. ಅದರಲ್ಲಿ ಈ ಚಿತ್ರದ ಕೆಲಸಗಳು ಜುಲೈ 15 ರಿಂದ ಆರಂಭ ಆಗುತ್ತದೆ ಎನ್ನುವ ಸಂಗತಿಯನ್ನು ತಿಳಿಸಲಾಗಿದೆ. ಈವರೆಗೂ ಪ್ರೀ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಈಗ ಉಳಿದ ಆರ್ಟಿಸ್ಟ್ ಗಳು ಮತ್ತು ಟೆಕ್ನಿಷಿಯನ್ಸ್ ಗಳ ಆಯ್ಕೆಯ ಕೆಲಸ ಆರಂಭ ಆಗಿದೆ.