Webdunia - Bharat's app for daily news and videos

Install App

ಮರಳಿ ಬಣ್ಣ ಹಚ್ಚಲಿರುವ ಮಾಜಿ ಭುವನ ಸುಂದರಿ ಸುಶ್ಮಿತಾ

Webdunia
ಸೋಮವಾರ, 31 ಮಾರ್ಚ್ 2014 (15:06 IST)
ಊರ್ಮಿಳಾ ಮಾಂತೋಡ್ಕರ್ ಮರಳಿ ಬಣ್ಣ ಹಚ್ಚುವ ಸುದ್ದಿ ಓದಿದ ಬೆನ್ನಲ್ಲೇ ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಅವರು ಕೂಡಾ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. 2010ರಲ್ಲಿ ತೆರೆಕಂಡ ನೋ ಪ್ರಾಬ್ಲಂ ಚಿತ್ರದ ಬಳಿಕ ಅವರು ಬೆಳ್ಳಿಪರದೆಯಿಂದ ನಾಪತ್ತೆಯಾಗಿದ್ದರು. ಈಗ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲು ತಯಾರಿ ನಡೆಸುತ್ತಿದ್ದಾರಂತೆ. ತಮ್ಮ ಮೋಹನ ನೋಟದಿಂದ ಪ್ರೇಕ್ಷಕರನ್ನು ಬೆರಗು ಮಾಡುವ ತೊಂಬತ್ತರ ದಶಕದ ಸೌಂದರ್ಯವತಿ ಸುಶ್ಮಿತಾ. ಈಕೆ ಮತ್ತೆ ಬೆಳ್ಳಿತೆರೆಗೆ ಮರಳುತ್ತಿರುವುದು ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆಯಂತೆ.

ತೆರೆ ಮೇಲೆ ಕಾಣಿಸಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಅವರು ಮೈತೂಕದತ್ತ ಗಮನ ಹರಿಸದೆ ಬಿಟ್ಟಿಲ್ಲ. ಈಗ 37ರ ಹರೆಯದಲ್ಲೂ ಅದೇ ಸೌಂದರ್ಯ ಕಾಪಾಡಿಕೊಂಡಿರುವ ಸುಶ್ಮಿತಾ ಸೇನ್ ಹೊಸ ಲುಕ್ನೊಂದಿಗೆ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳಲಿದ್ದಾರಂತೆ. ಇತ್ತೀಚೆಗೆ ಇಂಡಿಯನ್ ಇಂಟರ್ನ್ಯಾಶನಲ್ ಜ್ಯುವೆಲ್ಲರಿ ವೀಕ್ನಲ್ಲಿ ಪಾಲ್ಗೊಂಡಿದ್ದ ಅವರು ಚಿತ್ರರಂಗಕ್ಕೆ ಮರಳುತ್ತಿರುವ ಬಗ್ಗೆ ಸುಳಿವು ನೀಡಿದ್ದಾರೆ. ಈ ಮೂರು ವರ್ಷ ಸುಶ್ಮಿತಾ ಏನು ಮಾಡುತ್ತಿದ್ದಿರಬಹುದು ಎಂಬ ಪ್ರಶ್ನೆಯೇ. ಅವರು ತಮ್ಮ ಎರಡನೇ ದತ್ತು ಮಗು ಆಲಿಷಾರ ಆರೈಕೆಯಲ್ಲಿ ಬ್ಯುಸಿ ಆಗಿದ್ದರು. ಈಗ ಆಲಿಷಾಗೆ ಮೂರು ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಮರಳಿ ಬಣ್ಣ ಹಚ್ಚುವ ಆಸೆ ವ್ಯಕ್ತಪಡಿಸಿರುವ ಸುಶ್ಮಿತಾ ನಿರ್ಮಾಪಕರ ನಿರೀಕ್ಷೆಯಲ್ಲಿದ್ದೇನೆ ಎಂದಿದ್ದಾರೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

93 ದಿನದ ಬಳಿಕ ಜೈಲಿಂದ್ದ ಹೊರಬರುತ್ತಿದ್ದ ಹಾಗೇ ನನ್ನ ಹೋರಾಟ ಜೀವಂತ ಎಂದ ಲಾಯರ್ ಜಗದೀಶ್‌

ಎರಡನೇ ಮದುವೆ ವದಂತಿಗೆ ತೆರೆ ಎಳೆದ ನಟಿ ಮೇಘನಾ: ಚಿರು ಫೋಟೊ ಶೇರ್‌ ಮಾಡಿ ಹೇಳಿದ್ದೇನು

Rohit Basfore: ಸ್ನೇಹಿತರ ಜತೆ ಹೊರಗಡೆ ಹೋದ ಬಾಲಿವುಡ್ ನಟ ರೋಹಿತ್ ಬಾಸ್ಪೋರ್ ಶವವಾಗಿ ಪತ್ತೆ

Drugs Case: ಕೇರಳದ ಖ್ಯಾತ ರಾಪರ್ ವೇದನ್ ಅರೆಸ್ಟ್‌

ತಿರುಪತಿ ತಿಮ್ಮಪ್ಪನ ದರ್ಶನ್ ಪಡೆದ ನಟಿ ಆಶಿಕಾ ರಂಗನಾಥ್‌: ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್‌

Show comments