Select Your Language

Notifications

webdunia
webdunia
webdunia
webdunia

ಮನಮೋಹನ್ ಸಿಂಗ್ ವೇಶದಲ್ಲಿ ಬಾಲಿವುಡ್ ಚಿತ್ರ ಪ್ರಚಾರ

ಮನಮೋಹನ್ ಸಿಂಗ್ ವೇಶದಲ್ಲಿ ಬಾಲಿವುಡ್ ಚಿತ್ರ ಪ್ರಚಾರ
PR
ಕಿರಾತಕ ಗಂಡಂದಿರ ಕಿರುಕುಳದಿಂದ ಪಾರಾಗಲು ಮಹಿಳೆಯರಿಗಿರುವ ಪ್ರಬಲ ಕಾನೂನು ಅಸ್ತ್ರ ಭಾರತೀಯ ದಂಡ ಸಂಹಿತೆ ಸೆಕ್ಷನ್ 498 (ಎ)ಯನ್ನು ಮಹಿಳೆಯರು ವಿನಾಕಾರಣ ಅಮಾಯಕ ಗಂಡಂದಿರ ಮೇಲೆ ಪ್ರಯೋಗಿಸುವ ಮೂಲಕ ಕಾನೂನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಸಮಸ್ತ ಸಮಾಜಕ್ಕೆ '498ಎ ದಿ ವೆಡ್ಡಿಂಗ್ ಗಿಫ್ಟ್' ಚಲನ ಚಿತ್ರದ ಮೂಲಕ ಸಾರಲು ಹೊರಟಿದ್ದಾರೆ ಬಾಲಿವುಡ್ ನಿರ್ದೇಶಕ ಸುಹೇಬ್ ಇಲ್ಯಾಸಿ.

ಚಿತ್ರ ಮೇ ತಿಂಗಳಲ್ಲಿ ತೆರೆಗೆ ಅಪ್ಪಳಿಸಲು ಬರುತ್ತಿದ್ದು, ದೇಶಾದಾದ್ಯಂತ ಬಿರುಸಿನ ಪ್ರಚಾರ ಕಾರ್ಯ ಆರಂಭವಾಗಿದೆ. ಹಾಗಾಗಿ ಜನರನ್ನು ಆಕರ್ಷಿಸಲು ಪ್ರಧಾನಿ ಮನಮೋಹನ್ ಸಿಂಗ್ ಪರ ಹಿಂದೊಮ್ಮೆ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದ 65 ವರ್ಷ ಪ್ರಾಯದ ಗುರ್ಮೀತ್ ಸಿಂಗ್ ಸೇತಿ ಅವರು ಥೇಟ್ ಪ್ರಧಾನಿಯನ್ನೇ ಹೋಲುವಂತಾ ವೇಷ ಭೂಷಣ ತೊಟ್ಟು '498ಎ ದಿ ವೆಡ್ಡಿಂಗ್ ಗಿಫ್ಟ್' ಚಿತ್ರದ ಪ್ರಚಾರಕ್ಕಿಳಿದಿದ್ದಾರೆ.

ಇತ್ತೀಚೆಗೆ ಬೆಂಗಳೂರಿಗೆ ಚಿತ್ರತಂಡದೊಂದಿದೆ ಪ್ರಧಾನಿಯನ್ನೇ ಅಣಕಿಸುವಂಥಾ ವೇಶ ತೊಟ್ಟು ಆಗಮಿಸಿದ ಅವರು, ಮಾಜಿ ಪ್ರಧಾನಿಗಳಾದ ಜವಹರ್ ಲಾಲ್ ನೆಹರು ಮತ್ತು ಸರ್ದಾರ್ ಪಟೇಲ್ ಅವರಂತೆ ನಾಯಕತ್ವ ಒದಗಿಸಲು ಅಸಾಧ್ಯವಾಗಿರುವುದಕ್ಕೆ ಖೇದ ವ್ಯಕ್ತಪಡಿಸಿದ್ದರು ಎಂದು ಹೇಳಿ ತಮ್ಮ ಚಿತ್ರದ ಉದ್ದೇಶದ ಕುರಿತು ಮನಮೋಹನ್ ಸಿಂಗ್ ಅವರ ಶೈಲಿಯಲ್ಲೇ ಒಂಚೂರು ಪೀಠಿಕೆ ಹೇಳಿ ನೆರಿದಿದ್ದವರನ್ನು ಚಕಿತಗೊಳಿಸಿದ್ದರು.

ದೇಶದಲ್ಲಿ ತೀವ್ರ ಚರ್ಚೆಗೊಳಗಾಗಿದ್ದ ಪ್ರಮುಖ ವರದಕ್ಷಿಣೆ ಕಿರುಕುಳ ಪ್ರಕರಣದ ವಿಷಯಗಳನ್ನು ಚಿತ್ರಗಳಲ್ಲಿ ಬಳಸಿಕೊಳ್ಳಲಾಗುತ್ತಿದ್ದು ಒಂಚೂರು ಹಾಸ್ಯ ಲೇಪಿಸಿ ರಂಜನಾತ್ಮಕವಾಗಿ ಸಮಾಜಕ್ಕೆ ಸಂದೇಶ ರವಾನಿಸಲು ಹೊರಟಿದೆ ಚಿತ್ರತಂಡ. ಯಾವುದಕ್ಕೂ ಹೆಚ್ಚಿನ ವಿವರಗಳಿಗಾಗಿ ಸ್ವಲ್ಪ ಕಾದುನೋಡಬೇಕಾಗಿದೆ.

Share this Story:

Follow Webdunia kannada