Select Your Language

Notifications

webdunia
webdunia
webdunia
webdunia

ಮತ್ತೆ ಒಂದಾದ ಶಾಹಿದ್ ಕಪೂರ್-ಪ್ರಿಯಾಂಕಾ ಚೋಪ್ರಾ ಜೋಡಿ

ಮತ್ತೆ ಒಂದಾದ ಶಾಹಿದ್ ಕಪೂರ್-ಪ್ರಿಯಾಂಕಾ ಚೋಪ್ರಾ ಜೋಡಿ
ಮುಂಬೈ , ಮಂಗಳವಾರ, 23 ಜುಲೈ 2013 (15:43 IST)
PTI
ಶಾಹಿದ್ ಕಪೂರ್ ಮತ್ತು ಪ್ರಿಯಾಂಕಾ ಚೋಪ್ರಾ ಜೋಡಿ ಜೊತೆಯಲ್ಲಿ ಕಾಣಿಸಿಕೊಳ್ಳುವುದು ಬಹಳ ಹಳೇ ಸಂಗತಿ. 2011ರಲ್ಲಿ ಅಕಸ್ಮಾತ್ ಆಗಿ ಅವರಿಬ್ಬರ ಗೆಳೆತನ ಮುರಿದುಬಿತ್ತು. ಇದೀಗ ಬಂದ ಸುದ್ದಿಯೆಂದರೆ ಅವರಿಬ್ಬರ ಫ್ರೆಂಡ್ಶಿಪ್ ಮತ್ತೊಮ್ಮೆ ಚಿಗುರಿದೆ, ಗಿಡವಾಗಿ ಬೆಳೆಯುತ್ತಿದೆ.

ಇಬ್ಬರ ಮಧ್ಯದ ವೈಮನಸ್ಸಿನಿಂದಾಗಿ ಒಂದಷ್ಟು ಸಮಯ ಅವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿರಲಿಲ್ಲ. ಮಾಧ್ಯಮದವರ ಮೇಲೂ ಮುನಿಸು ತೋರಿದ್ದರು. ಆದರೆ ಇದೀಗ ಪಾರ್ಟಿಗಳಲ್ಲಿ ಜತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ. ಮುಂಜಾನೆ 3 ಗಂಟೆಗೆಲ್ಲಾ ಶಾಹೀದ್ ಪ್ರಿಯಾಂಕಾ ಮನೆಯಲ್ಲಿ ಹಾಜರಿರುತ್ತಾರಂತೆ.

ಈ ಬಾರಿ ಗಾಸಿಪ್ ಹರಡಿಸಿದವರು ಶಾಹಿದ್ ಮನೆಯಲ್ಲಿ ಪಾರ್ಟಿ ಕೊಡುತ್ತಿದ್ದ ವೇಳೆ ಇದನ್ನು ಕಣ್ಣಾರೆ ಕಂಡಿರುವುದಾಗಿಯೂ ಹೇಳಿಕೊಂಡಿದ್ದಾರೆ. ಅದೇಕೋ ಏನೋ ಪ್ರಿಯಾಂಕಾ ತಡರಾತ್ರಿ ನಟರನ್ನು ಭೇಟಿ ಮಾಡಿ ಸುದ್ದಿ ಮಾಡುತ್ತಾರೆ. ಹಿಂದೊಮ್ಮೆ ಶಾರೂಖ್ಖಾನ್ ಕಚೇರಿಯಿಂದ ಆಕೆ ರಾತ್ರಿ 3ಕ್ಕೆ ಹೊರಬಂದಿದ್ದು ಕೂಡಾ ಬಹುದೊಡ್ಡ ಸುದ್ದಿ ಮಾಡಿತ್ತು. ಅದೇ ಕಾರಣಕ್ಕೆ ಗೌರಿ, ಪ್ರಿಯಾಂಕ ಅವರ ಸಂಬಂಧ ಹಳಸಿದ್ದೂ ನಿಮಗೆ ನೆನಪಿರಬಹುದು. ಈ ಬಾರಿ ಇಂತಹ ಸಾಧ್ಯತೆ ಕಡಿಮೆ. ಯಾಕೆಂದರೆ ಶಾಹೀದ್ ಇನ್ನೂ ಕಂಕಣಬಲ ಕೂಡಿ ಬಂದಿಲ್ಲವಲ್ಲ.

Share this Story:

Follow Webdunia kannada