Webdunia - Bharat's app for daily news and videos

Install App

ಭಟ್ಟರ ಕ್ಯಾಂಪಿಗೆ ಡರ್ಟಿ ಗರ್ಲ್ ವಿದ್ಯಾ ಬಾಲನ್..

Webdunia
ಶನಿವಾರ, 15 ಫೆಬ್ರವರಿ 2014 (09:41 IST)
PR
ಉಲಾಲಾ ಸುಂದರಿ ವೀದ್ಯಾ ಬಾಲನ್ ಈಗ ಮಹೇಶ್ ಭಟ್ ಕ್ಯಾಂಪ್ ಗೆ ಎಂಟ್ರಿ ಆಗಿದ್ದಾಳೆ. ಕಳೆದ ವರ್ಷ ಈ ಕ್ಯಾಂಪ್ ನಿಂದ ಹೊರ ಬಂದ ಆಶಿಕಿ- 2 ಚಿತ್ರ ಸಿಕ್ಕಾಪಟ್ಟೆ ಯಶಸ್ವಿ ಆಗಿತ್ತು. ಈ ರೊಮ್ಯಾಂಟಿಕ್ ಲವ್ ಸ್ಟೋರಿಯನ್ನು ಮೋಹಿತ್ ಸೂರಿ ನಿರ್ದೇಶಿಸಿದ್ದರು. ಈಗ ಮೋಹಿತ್ ಸೂರಿ ಚಿತ್ರದಲ್ಲಿ ನಟಿಸುವುದಕ್ಕೆ ಆಕೆ ಗ್ರೀನ್ ಸಿಗ್ನಲ್ ನೀಡಿದ್ದಾಳಂತೆ. ಮದುವೆ ಆದ ಬಳಿಕ ಹೆಣ್ಣುಮಕ್ಕಳು ಅವಕಾಶಗಳನ್ನು ಪಡೆಯುವುದು ತುಂಬಾ ಕಡಿಮೆ. ಅದರಲ್ಲೂ ಗ್ಲಾಮಿ ಆಗಿರುವ ಪಾತ್ರಗಳಲ್ಲಿ ನಟಿಸುವ ಅವಕಾಶಗಳು ಬಹಳ ಕಡಿಮೆ. ಆದರೆ ಈ ಡರ್ಟಿ ಹುಡುಗಿಗೆ ಮಾತ್ರ ಅವಕಾಶಗಳು ಹುಡುಕಿಕೊಂಡು ಬರುತ್ತಲೇ ಇವೆ.

ಮದುವೆ ಮುನ್ನ ನಟಿಸಿದ್ದ ಡರ್ಟಿ ಪಿಕ್ಚರ್ ಮತ್ತು ಕಹಾನಿ ಚಿತ್ರಗಳು ಅಪಾರವಾದ ಯಶಸ್ಸು ಗಳಿಸಿತ್ತು. ಇದರ ಮುಖಾಂತರ ಬಾಲಿವುಡ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ವಿದ್ಯಾ ಬಾಲನ್ ಈಗಲು ಅದನ್ನು ಮುಂದುವರೆಸುತ್ತಾ ಸಾಗಿದ್ದಾಳೆ.

PR
ಈಗ ಈಕೆ ಶಾದಿ ಕೆ ಸೈಡ್ ಎಫೆಕ್ಟ್ ಅನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಅಲ್ಲದೆ ಬಾಬಿ ಜಾಸೂಸ್ ಚಿತ್ರವೂ ಸಹ ಕೈಲಿದೆ,ವಿದ್ಯಾ ಮತ್ತು ಫರಾನ್ ಅಕ್ತರ್ ಅವರು ಒಟ್ಟಿಗೆ ನಟಿಸುತ್ತಿರುವ ಶಾದಿ ಕೆ ಸೈಡ್ ಎಫೆಕ್ಟ್ ಚಿತ್ರವೂ ಈ ತಿಂಗಳ ಇಪ್ಪತ್ತೆಂಟಕ್ಕೆ ಬಿಡುಗಡೆ ಆಗಲಿದೆ.

ಇವೆಲ್ಲದರ ನಡುವೆ ಮತ್ತೊಂದು ಹೊಸ ಚಿತ್ರಕ್ಕೆ ಆಕೆ ಸಹಿ ಹಾಕಿದ್ದಾಗಿದೆ. ಡರ್ಟಿ ಪಿಕ್ಚರ್ ಹೀರೋ ಇಮ್ರಾನ್ ಹಶ್ಮಿ ಅವರ ಜೊತೆ ನಟಿಸಲು ಸಿದ್ಧ ಆಗಿದ್ದಾಳೆ ಈಕೆ. ಇವರಿಬ್ಬರ ನಟನೆಯ ಚಿತ್ರವನ್ನು ಮೋಹಿತ್ ನಿರ್ದೇಶಿಸಲು ಹೊರಟಿದ್ದಾರೆ. ಹಮಾರಿ ಅದೂರಿ ಜೋಡಿ ಹೆಸರಿನಲ್ಲಿ ಈ ಚಿತ್ರವನ್ನು ನಿರ್ಮಿಸ ಬೇಕು ಎನ್ನುವ ನಿರ್ಧಾರ ಮಾಡಿದ್ದಾರಂತೆ ನಿರ್ದೇಶಕರು.

ಮಹೇಶ್ ಭಟ್ ವಿಶೇಷ್ ಫಿಲಿಮ್ಸ್ ಇದನ್ನು ನಿರ್ಮಾಣ ಮಾಡುತ್ತಿದೆ. ಮರ್ಡರ್-2ನಂತಹ ಸೆನ್ಸೇಷನಲ್ ಚಿತ್ರವನ್ನು ಮೋಹಿತ್ ಈ ಪ್ರೊಡಕ್ಷನ್ ಹೌಸ್ ನಿಂದ ನಿರ್ಮಿಸಿದ್ದಾರೆ.ಅದೇರೀತಿ ಈಗ ತಯಾರಾಗುತ್ತಿರುವ ಚಿತ್ರವೂ ಸಹ ರೋಮಾನ್ಸ್ ಬೇಸ್ಡ್ ಎನ್ನುವ ಸುದ್ದಿ ಕೇಳಿ ಬಂದಿದೆ. ಮತ್ತೊಮ್ಮೆ ಉಲಾಲ ಬ್ಯೂಟಿ .. ರಾಶಿ ರೂಪವನ್ನು ರಸಿಕರು ನೋಡುವ ಸದವಕಾಶ!

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬದುಕು ಹೇಗೇ ಕಟ್ಟಿಕೊಳ್ಳಬೇಕೆಂಬುದು ಹೆಣ್ಣಿನ ಆಯ್ಕೆ: ರಾಗಿಣಿ ದ್ವಿವೇದಿ

ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್: ದೇವರಕೊಂಡ, ಪ್ರಕಾಶ್ ರಾಜ್, ಶ್ರೀಲೀಲಾ ಸೇರಿದಂತೆ ಹಲವರಿಗೆ ಇಡಿ ಶಾಕ್‌

Amruthadhare: ಗೌತಮ್, ಭೂಮಿಕಾಗೆ ಮಗುವಾಯ್ತು: ವೀಕ್ಷಕರ ಕಾಮೆಂಟ್ ನೋಡಿದ್ರೆ ನಗುವೋ ನಗು

ಕೋರ್ಟ್ ಗೆ ಹೋಗೋ ಮುಂಚೆ ನಟ ದರ್ಶನ್ ಭರ್ಜರಿ ಪೂಜೆ

ಗಾಲಿ ಜನಾರ್ದನ ರೆಡ್ಡಿ ಪುತ್ರನ ಜತೆಗಿನ ಶ್ರೀಲೀಲಾ ನೃತ್ಯಕ್ಕೆ ಪಡ್ಡೆ ಹೈಕಳು ಫಿದಾ

Show comments