Select Your Language

Notifications

webdunia
webdunia
webdunia
webdunia

ಬಿಗ್ ಬಿ ಬೊಕ್ಕತಲೆ ನಟನೆಯಿಲ್ಲ

ಬಿಗ್ ಬಿ ಬೊಕ್ಕತಲೆ ನಟನೆಯಿಲ್ಲ
ಮುಂಬೈ , ಶುಕ್ರವಾರ, 26 ಅಕ್ಟೋಬರ್ 2007 (19:09 IST)
IFM
ಬಿಗ್ ಬಿ ಅಮಿತಾಬ್ ಲಂಡನ್ ಚಿತ್ರೋತ್ಸವದಿಂದ ಈ ವಾರದ ಆರಂಭದಲ್ಲಿ ಹಿಂತಿರುಗಿದ ಬಳಿಕ ಭೂತ್‌ನಾಥ್ ಮತ್ತು ಅಲ್ಲಾದಿನ್ ಚಿತ್ರಗಳಲ್ಲಿ ದೆವ್ವ ಮತ್ತು ಜಿನ್ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಬಿಗ್ ಬಿ ಬಳಿಕ ಪೂರ್ಣ ಮಟ್ಟದ ಅಂತಾರಾಷ್ಟ್ರೀಯ ಯೋಜನೆಯಾದ ಶಾಂತಾರಾಮ್ ಚಿತ್ರದಲ್ಲಿ ಮೀರಾ ನಾಯರ್, ವಾರ್ನರ್ ಬ್ರದರ್ಸ್ ಮತ್ತು ಜಾನಿ ಡೆಪ್ ಜತೆ ಕೆಲಸ ಮಾಡಲಿದ್ದಾರೆ.

ಕೆಲವು ಸಮಯದಿಂದ ಬಿಗ್ ಬಿ ಮೀರಾ ನಾಯರ್ ಚಿತ್ರದಲ್ಲಿ ಬೊಕ್ಕತಲೆಯಲ್ಲಿ ನಟಿಸುತ್ತಾರೆಂಬ ಗಾಳಿಸುದ್ದಿ ಹರಡಿತ್ತು. ಬಿಗ್ ಬಿ ಈ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಇದು ಸಂಪೂರ್ಣ ಸುಳ್ಳು.

ಮೀರಾ ನಾಯರ್ ಚಿತ್ರಕ್ಕೆ ಬೊಕ್ಕತಲೆಯ ನಟನೆ ಅಗತ್ಯವಿದೆಯೆಂಬ ಬಗ್ಗೆ ನನಗೆ ತಿಳಿದಿಲ್ಲ ಹಾಗೂ ಈ ಬಗ್ಗೆ ನಾನು ಯಾರಿಗೂ ಹೇಳಿಲ್ಲ ಎಂದು ಅವರು ನುಡಿದರು. ಮೀರಾ ಅವರಿಗೆ ಈ ಕುರಿತು ಮಾತನಾಡಿದಾಗ ಅವರು ಕೂಡ ಅಸಂಬದ್ಧ ಎಂದು ತಳ್ಳಿಹಾಕಿದ್ದಾರೆ.

Share this Story:

Follow Webdunia kannada