Webdunia - Bharat's app for daily news and videos

Install App

ಬಿಗ್ ಬಾಸ್‌ ಶೋನಲ್ಲಿ ಸೋಫಿಯಾ ಮೇಲೆ ಹಲ್ಲೆ ಮಾಡಿದ ಕೊಹ್ಲಿ ಬಂಧನ

Webdunia
ಶನಿವಾರ, 5 ಏಪ್ರಿಲ್ 2014 (13:01 IST)
ಲೋನಾವ್ಲಾ: ರಿಯಾಲಿಟಿ ಷೋ ಬಿಗ್ ಬಾಸ್ ಸೀಸನ್ 7ರಲ್ಲಿ ಭಾಗಿಯಾದ ನಟ ಅರ್ಮಾನ್ ಕೊಹ್ಲಿಯನ್ನು ಲೋನಾವಾಲಾ ಪೊಲೀಸರು ಬಂಧಿಸಿದ್ದಾರೆ. ಬಿಗ್ ಬಾಸ್ ಸಹಭಾಗಿ ಮತ್ತು ನಟಿ ಸೋಫಿಯಾ ಹಯಾತ್ ತನ್ನ ಮೇಲೆ ಅರ್ಮಾನ್ ಕೊಹ್ಲಿ ಹಲ್ಲೆ ಮಾಡಿದ್ದಾನೆ ಎಂದು ದೂರು ನೀಡಿದ ಬಳಿಕ ಅವನನ್ನು ಬಂಧಿಸಲಾಗಿದೆ. ಕೊಹ್ಲಿ 29 ವರ್ಷ ವಯಸ್ಸಿನ ಹಯಾತ್ ಮೇಲೆ ಶೋ ಸಂದರ್ಭದಲ್ಲಿ ಕಾರಿನ ವಿಂಡ್‌ಸ್ಕ್ರೀನ್ ಒರೆಸುವ ಮಾಪ್‌ನಿಂದ ಮುಖದ ಮೇಲೆ ಹೊಡೆದಿದ್ದ. ಬ್ರಿಟಿಷ್ -ಪಾಕಿಸ್ತಾನಿ ನಟಿ ಮತ್ತು ರೂಪದರ್ಶಿ ಈ ಕುರಿತು ತಿಳಿಸುತ್ತಾ, ಕೊಹ್ಲಿ ತನಗೆ ಹೊಡೆದ ದೃಶ್ಯಗಳನ್ನು ಬಿಗ್ ಬಾಸ್ ತೋರಿಸಿಲ್ಲ, ಏಕೆಂದರೆ ಮಕ್ಕಳು ಕೂಡ ಆ ಶೋ ವೀಕ್ಷಿಸುತ್ತಾರೆ ಎಂದು ಹೇಳಿದ್ದಾಳೆ.

ಲೋನಾವಾಲಾ ಪೊಲೀಸರು ಈ ಘಟನೆಯ ಕಚ್ಚಾ ದೃಶ್ಯಗಳನ್ನು ಸಂಗ್ರಹಿಸಿ ಕೊಹ್ಲಿ ಹಯಾತ್‌ಗೆ ಹೊಡೆದಿರುವುದು ಖಚಿತಪಟ್ಟ ಮೇಲೆ ಕಳೆದ ರಾತ್ರಿ ಬಂಧಿಸಿದರು6 ಅಡಿ ಎರಡು ಇಂಚು ಉದ್ದದ ವ್ಯಕ್ತಿ ನನಗೆ ಕೋಲಿನಿಂದ ಹೊಡೆದ.ಅವನು ತುಂಬಾ ಹಿಂಸಾತ್ಮಕ ವ್ಯಕ್ತಿ. ಅವನು ಬೇರೆ ಮಹಿಳೆ ಮೇಲೆ ಹಲ್ಲೆ ಮಾಡುವ ಎರಡನೇ ಅವಕಾಶ ನೀಡಬಾರದು. ಅವನಿಗೆ ಪಾಠ ಕಲಿಸುವುದು ನನ್ನ ಉದ್ದೇಶವಲ್ಲ, ನನಗೆ ಸರಿಎನಿಸಿದ್ದನ್ನು ನಾನು ಮಾಡಿದ್ದೇನೆ ಎಂದು ಹೇಳಿಕೆಯಲ್ಲಿ ಸೋಫಿಯಾ ತಿಳಿಸಿದ್ದಾಳೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಕ್ರಮ ಚಿನ್ನ ಸಾಗಣೆ ಪ್ರಕರಣ: ಬೆಚ್ಚಿಬೀಳಿಸುತ್ತೆ ರನ್ಯಾ ರಾವ್‌ ಮಾಸ್ಟರ್ ಮೈಂಡ್‌

ಎಕ್ಕ ಬಿಡುಗಡೆಗೆ ದಿನಗಣನೆ ಮಾಡುತ್ತಿರುವಾಗಲೇ ಮಂತ್ರಾಲಯಕ್ಕೆ ಯುವ ರಾಜ್‌ಕುಮಾರ್ ಭೇಟಿ

ಶೆಫಾಲಿ ಮರಣದ ಕೆಲ ಗಂಟೆಗಳಲ್ಲೇ ನಾಯಿ ಜತೆ ಪರಾಗ್ ವಾಕಿಂಗ್‌: ಕಾರಣ ಬಿಚ್ಚಿಟ್ಟ ಆಪ್ತ ಸ್ನೇಹಿತ

ಪೃಥ್ವಿ ಭಟ್ ರನ್ನು ಕ್ಷಮಿಸಿದ್ರಾ ಅಪ್ಪ, ಅಮ್ಮ: ಮದುವೆ ಬಳಿಕ ಏನಾಗಿದೆ ಎಲ್ಲವೂ ಬಹಿರಂಗ

ಪಂಜಾಬಿ ನಟಿ ತಾನಿಯಾ ಮಲತಂದೆ ಮೇಲೆ ಹಲ್ಲೆ, ಆರೋಗ್ಯ ಸ್ಥಿತಿ ಗಂಭೀರ

Show comments