ಬಾಹುಬಲಿ ಪೂರ್ಣ ಆಗುವವರೆಗೂ ಬೇರೆ ಯಾವುದೇ ಹೊಸ ಪ್ರಾಜೆಕ್ಟ್ ಕಡೆಗೆ ಗಮನ ಹರಿಸಲಾರೆ ಎಂದು ತಮ್ಮ ಮನದ ಮಾತನ್ನು ಟ್ವೀಟ್ ಮಾಡಿ ಹೇಳಿದ್ದಾರೆ ಮಿ. ಮೌಳಿ.
ಬಾಹುಬಲಿ ಚಿತ್ರವೂ 2015ರಲ್ಲಿ ಬಿಡುಗಡೆ ಆಗಲಿದ್ದು , ಇದರಲ್ಲಿ ರಾಣ ದಗ್ಗು ಬಾಟಿ, ಪ್ರಭಾಸ್ ವರ್ಮ, ಅನುಷ್ಕಾ ಶೆಟ್ಟಿ, ತಮನ್ನ ಭಾಟಿಯ, ಸತ್ಯರಾಜ್ ಮತ್ತು ರಮ್ಯ ಕೃಷ್ಣನ್ ಮುಖ್ಯ ಪಾತ್ರ ವರ್ಗದಲ್ಲಿ ಇದ್ದಾರೆ. ಈ ಚಿತ್ರವನ್ನು ಶೋಭಾ ಯಾರ್ಲ ಗುಡ್ಡ, ಪ್ರಸಾದ್ ದೇವಿನೆನಿ ಮತ್ತು ಕೆ. ರಾಘವೇಂದ್ರ ಒಟ್ಟಾಗಿ ಸೇರಿ ನಿರ್ಮಿಸುತ್ತಿದ್ದಾರೆ.