Webdunia - Bharat's app for daily news and videos

Install App

ಬಾಲಿವುಡ್‌ನ ಶ್ರೀಮಂತ ನಟ ಶಾರೂಖ್ ಖಾನ್ ಅಂತೆ

Webdunia
ಬುಧವಾರ, 30 ಅಕ್ಟೋಬರ್ 2013 (11:32 IST)
PR
ಬಾಲಿವುಡ್ನ ಅತಿ ಶ್ರೀಮಂತ ನಟ ಎಂಬ ಸ್ಥಾನಕ್ಕೆ ಶಾರೂಖ್ ಖಾನ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಹುರುನ್ ಇಂಡಿಯಾ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಶಾರೂಖ್ ಖಾನ್ ಬಾಲಿವುಡ್ನ ಶ್ರೀಮಂತ ನಟ ಎನಿಸಿದ್ದಾರೆ. ಭಾರತದ ಶ್ರೀಮಂತರ ಪಟ್ಟಿಯಲ್ಲಿ 114ನೇ ಸ್ಥಾನ ಪಡೆದಿದ್ದು 400 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ. ಎಂದಿನಂತೆ ರಿಲಯನ್ಸ್ ಸಂಸ್ಥೆಯ ಮುಖೇಶ್ ಅಂಬಾನಿ 18.9 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಆಸ್ತಿಯೊಂದಿಗೆ ಮೊದಲ ಸ್ಥಾನದಲ್ಲೇ ಉಳಿದುಕೊಂಡಿದ್ದಾರೆ.

ಲಂಡನ್ನಿನಲ್ಲಿರುವ ಭಾರತದ ಉದ್ಯಮಿ ಲಕ್ಷ್ಮಿ ಮಿತ್ತಲ್ ಎರಡನೇ ಸ್ಥಾನದಲ್ಲಿದ್ದಾರೆ. ಇಂತಹ ಉದ್ಯಮಿಗಳ ಪಟ್ಟಿಯಲ್ಲಿ ಶಾರೂಖ್ ಖಾನ್ ಕಾಣಿಸಿಕೊಂಡು ಹೊಸ ಸಾಧನೆ ಮಾಡಿದ್ದಾರೆ. ಬಾಲಿವುಡ್ನ ಬೇರಾವುದೇ ನಟ ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್ ಸಂಸ್ಥೆಯ ಸಹ ಮಾಲೀಕರಾಗಿ ಶಾರೂಖ್ ಚಿತ್ರ ನಿಮರ್ಾಣ ಕಾರ್ಯದಲ್ಲಿ ತೊಡಗಿಕೊಂಡಿರುವುದರಿಂದ ಈ ಪಟ್ಟಿಯಲ್ಲಿ ಅವರು ಸ್ಥಾನ ಪಡೆದಿದ್ದಾರೆ. 47ರ ಹರೆಯದ ಶಾರೂಖ್ ಐಪಿಎಲ್ನ ಕೋಲ್ಕತ್ತಾ ನೈಟ್ ರೈಡರ್ಸತಂಡದ ಮಾಲಿಕರೂ ಆಗಿದ್ದಾರೆ. ಜಾಹೀರಾತು ಲೋಕದಲ್ಲಿ ಅವರು ಕೋಟಿಗಟ್ಟಲೆ ಗಳಿಸುತ್ತಿರುವುದು ಅವರ ಒಟ್ಟು ಗಳಿಕೆಯನ್ನು ಹೆಚ್ಚಿಸಿದೆ. ಖ್ಯಾತ ಉದ್ಯಮಿಗಳು, ಸಿನಿತಾರೆಗಳ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಲು ಅವರು ಕೋಟಿಗಟ್ಟಲೆ ಬೇಡಿಕೆ ಇಡುತ್ತಿದ್ದಾರೆ. ಒಟ್ಟಿನಲ್ಲಿ ಶಾರೂಖ್ ಅತಿ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವುದು ಅವರ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಬಹುದು ಎಂಬ ಕಳವಳ ಬಾಲಿವುಡ್ನ ನಿರ್ಮಾಪಕರಿಗೆ ಕಾಡುತ್ತಿದೆಯಂತೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments