Webdunia - Bharat's app for daily news and videos

Install App

ಬದುಕಿನ ಬಗ್ಗೆ ಪ್ಲಾನ್ ಮಾಡುವುದು ತಪ್ಪು: ನೇಹಾ ಶರ್ಮಾ

Webdunia
ಸೋಮವಾರ, 31 ಮಾರ್ಚ್ 2014 (14:26 IST)
ಚಿತ್ರ ಹಿಟ್ ಆಗುವುದು ಅಥವಾ ಆಗದೇ ಇರುವುದು ಬದುಕಿನ ಒಂದು ಭಾಗ. ಅದರ ಆಧಾರದ ಮೇಲೆ ಬದುಕಿನ ಬಗ್ಗೆ ಪ್ಲಾನ್ ಮಾಡುವುದು ತಪ್ಪು ಎಂಬ ಕಾರಣಕ್ಕೆ ನಾನು ಅದನ್ನು ನಿಲ್ಲಿಸಿದ್ದೇನೆ ಎನ್ನುತ್ತಾರೆ ನಟಿ ನೇಹಾ ಶರ್ಮಾ.
ಕ್ರೂಕ್ ಚಿತ್ರಕ್ಕೆ ನಾನು ಸಖತ್ ಪ್ಲಾನ್ ಮಾಡಿದ್ದೆ. ಅದು ಹಿಟ್ ಆಯಿತು. ಬಾಲಿವುಡ್ಡಿನಲ್ಲಿ ವೃತ್ತಿ ನಿರೀಕ್ಷಿತ ಮತ್ತು ಯಶಸ್ಸಿಗೆ ಹಾರ್ಡ್‌ವರ್ಕ್ ಕಾರಣ ಎಂಬುದನ್ನು ನಿಸ್ಸಂಶಯವಾಗಿ ಹೇಳಲು ಸಾಧ್ಯವಿಲ್ಲ. ಇಲ್ಲಿಗೆ ಆಗಮಿಸುವ ಹೊಸ ತಾರೆಯರು ಎಲ್ಲವೂ ಪರಿಪೂರ್ಣವಾಗಿ ನಡೆಯುತ್ತಿದೆ ಎಂದುಕೊಳ್ಳುತ್ತಾರೆ. ಇದು ಕಾಲ್ಪನಿಕ. ಸಿನೆಮಾ ಹಿಟ್ ಆಗಲಿಲ್ಲ ಎಂಬ ಕಾರಣಕ್ಕೆ ನಾವು ನಿರ್ಣಯ ತೆಗೆದುಕೊಳ್ಳುವುದನ್ನು ಹಾಗೂ ಆ ಬಗ್ಗೆ ಪ್ಲಾನ್ ಹಾಕಿಕೊಳ್ಳುವುದನ್ನು ಬಿಡಬೇಕು ಎಂಬ ಅರಿವು ನನಗಾಗಿದೆ ಎಂದಿದ್ದಾರೆ.


ಇನ್ನು ಮುಂದೆ 20 ಚಿತ್ರದಲ್ಲಿ ನಟಿಸಿದರೂ ಸರಿ, ಅದಕ್ಕೆ ಪ್ಲಾನ್ ಮಾಡಲ್ಲ, ಆ ಪಾತ್ರ ಈ ಪಾತ್ರ ಎಂದೂ ನೋಡುವುದಿಲ್ಲ. ಅದರೊಂದಿಗೆ ಹೊಂದಾಣಿಕೆ ಮಾಡಿಕೊಂಡು ನಟಿಸುತ್ತೇನೆ ಅಷ್ಟೇ. ನಾನು ಈವರೆಗೆ 6 ಚಿತ್ರದಲ್ಲಿ ನಟಿಸಿದ್ದೇನೆ. ಸದ್ಯ ಕಲಿತಿರುವ ಹೊಸ ಪಾಠವೆಂದರೆ ಸಿನೆಮಾ ಹಿನ್ನೆಲೆಯಿಂದ ಬಂದಿರದಿದ್ದರೆ ಬಾಲಿವುಡ್‌ನಲ್ಲಿ ಹೆಸರು ಮಾಡುವುದು ಸ್ವಲ್ಪ ಕಷ್ಟವೇ. ಹಿಟ್ ಆಗಿರುವ ಚಿತ್ರ ಉತ್ತಮವಾದುದು ಎಂಬ ಸೂತ್ರವನ್ನು ನಾನು ಅಳವಡಿಸಿಕೊಳ್ಳಬೇಕು ಎಂದಿದ್ದೇನೆ ಎಂದು ಹೇಳಿದ್ದಾರೆ ನೇಹಾ. ಬಾಲಿವುಡ್‌ನಲ್ಲಿ ಏಳುಬೀಳುಗಳನ್ನು ಕಂಡ ಬಳಿಕ ಜೀವನ ಸೂತ್ರವನ್ನು ಅವರು ಅರಿತುಕೊಂಡಿದ್ದಾರಂತೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿದೇಶಕ್ಕೆ ಪ್ರಯಾಣಿಸಲು ದರ್ಶನ್‌ಗೆ ಕೋರ್ಟ್‌ ಗ್ರೀನ್ಸ್‌ ಸಿಗ್ನಲ್‌, ಯಾಕೆ ಗೊತ್ತಾ

ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕೆ ಹೋಗಲಿರುವ ಸ್ಪರ್ಧಿಗಳು ಯಾರೆಲ್ಲಾ

ಪೋರ್ನ್‌ ಇಂಡಸ್ಟ್ರಿಗೆ ಎಂಟ್ರಿ ಕೊಟ್ರಾ ಅಸ್ಸಾಂ ಮೂಲದ ಬೆಡಗಿ, ವದಂತಿಗೆ ಈ ಫೋಸ್ಟ್‌ ಕಾರಣ

ಮತ್ತೇ ಬಣ್ಣದ ಲೋಕಕ್ಕೆ ವಾಪಸ್ಸಾದ ಮಾಜಿ ಸಚಿವೆ ಸ್ಮೃತಿ ಇರಾನಿ, ಫಸ್ಟ್‌ ಲುಕ್‌ ಫ್ಯಾನ್ಸ್ ಫಿದಾ

ಡಿ ಬಾಸ್ ಫ್ಯಾನ್ಸ್ ಮೆಸೇಜ್‌ಗೆ ಮತ್ತೇ ವಿಡಿಯೋ ಮಾಡಿ ಕ್ಷಮೆ ಕೋರಿದ ಮಡೆನೂರು ಮನು

Show comments