Select Your Language

Notifications

webdunia
webdunia
webdunia
webdunia

ಫರಾ ಮ್ಯಾಜಿಕ್‌ಗೆ ದೀಪಿಕಾ ಸಜ್ಜು

ಫರಾ ಮ್ಯಾಜಿಕ್‌ಗೆ ದೀಪಿಕಾ ಸಜ್ಜು
ಮುಂಬಯಿ , ಶುಕ್ರವಾರ, 7 ಸೆಪ್ಟಂಬರ್ 2007 (17:01 IST)
IFMIFM
ಫರಾ ಖಾನ್ 70ರ ದಶಕದ ಮ್ಯಾಜಿಕ್ಕನ್ನು ತೆರೆಯ ಮೇಲೆ ತರಲು ಹೊರಟಿದ್ದಾರೆ. ಇದಕ್ಕಾಗಿ ತಮ್ಮ ಹೊಸ ಹುಡುಗಿ ದೀಪಿಕಾ ಪಡುಕೋಣೆಯನ್ನು ಸಜ್ಜುಗೊಳಿಸುತ್ತಿದ್ದಾರೆ.

70ರ ದಶಕದಲ್ಲಿ ಬೆಳ್ಳಿತೆರೆಯಲ್ಲಿ ನಾಯಕಪಾತ್ರಗಳಲ್ಲಿ ಮಿಂಚಿ ಮರೆಯಾದ ಸುನಿಲ್ ದತ್, ರಾಜೇಶ್ ಖನ್ನಾ, ಜಿತೇಂದ್ರ ಜತೆ ದೀಪಿಕಾ ರೊಮ್ಯಾನ್ಸ್. "ಓ ಶಾಂತಿ ಓಂ" ಚಿತ್ರಕ್ಕೆ ವಾಸ್ತವತೆಯ ಸ್ಪರ್ಶ ನೀಡಲು ಫರಾ ಖಾನ್ ಇನ್ನಿಲ್ಲದ ಯತ್ನ ಮಾಡಿದ್ದಾರೆ.

ಇವೆಲ್ಲ ಎಸ್‌ಎಫ್‌ಎಕ್ಸ್‌ನಿಂದ ಸಾಧ್ಯವಾಗಿದೆ. ದೀಪಿಕಾ ಸುನಿಲ್, ರಾಜೇಶ್ ಮತ್ತು ಜಿತೇಂದ್ರ ಜತೆ ದೀಪಿಕಾ ಹಾಡುತ್ತಾ ಕುಣಿಯುವ ದೃಶ್ಯಕ್ಕೆ ಎಸ್‌ಎಫ್‌ಎಕ್ಸ್ ಎಫೆಕ್ಟ್ ಅಳವಡಿಸಲಾಗಿದೆ.

ಈ ಚಿತ್ರದಲ್ಲಿ ದೀಪಿಕಾಳದ್ದು 70ರ ದಶಕದ ನಟಿಯ ಪಾತ್ರ. ಆ ನಟಿಗೆ ಸಾಥ್ ನೀಡಲು 70ರ ದಶಕದ ನಟರನ್ನೇ ಫರಾ ಖಾನ್ ತೆರೆಯ ಮೇಲೆ ಇಳಿಸಿದ್ದಾರೆ. ಫರಾ ಖಾನ್ ಅಂತೂ ದಂತಕತೆ ನಟರು ತೆರೆಯ ಮೇಲೆ ಕುಣಿಯುವುದನ್ನು ನೋಡಲು ರೋಮಾಂಚಿತರಾಗಿದ್ದಾರೆ.

Share this Story:

Follow Webdunia kannada