Webdunia - Bharat's app for daily news and videos

Install App

ಪ್ರೀತಿ ಮತ್ತು ಆಕೆಯ ಬ್ರಿಟೀಷ್ ಸಂಬಂಧಗಳು

Webdunia
ಶನಿವಾರ, 31 ಜನವರಿ 2009 (19:57 IST)
ಪ್ರೀತಿ ಝಿಂಟಾಳ ಸೊಂಟ ಇಪ್ಪತ್ತೆಂಟಾ ಎಂದು ಕೇಳುತ್ತಿದ್ದ ಕಾಲ ಮುಗಿದು ಹೋಗಿದೆ ಅಂದುಕೊಳ್ಳುತ್ತಿರುವಾಗ ಮತ್ತೆ ಸುದ್ದಿಯಲ್ಲಿದ್ದಾಳೆ. ಇದು ಖಂಡಿತಾ ಆಕೆಯ ಸೊಂಟ ಅಥವಾ ವಯಸ್ಸಿಗೆ (ಜನವರಿ 31ಕ್ಕೆ ಆಕೆಗೆ ಸರಿಯಾಗಿ 34 ವರ್ಷ ತುಂಬಿದೆ) ಸಂಬಂಧಿಸಿದ್ದಲ್ಲ. ಆಕೆಯ ಹುಟ್ಟಿಗೆ ಸಂಬಂಧಿಸಿದ್ದು ಅರ್ಥಾತ್ ವಂಶಾವಳಿ ಸಂಬಂಧದ ಸಂಶಯಗಳಿಗೆ ಸಂಬಂಧಿಸಿದ್ದು !

ಇದೇನಪ್ಪಾ... ಹುಟ್ಟಿ ಬೆಳೆದು ಇಷ್ಟು ದೊಡ್ಡವಳಾದ ಮೇಲೆ ವಂಶದ ಸುದ್ದಿ ಎಂದು ತಲೆ ಕೆರೆದುಕೊಳ್ಳುತ್ತಿರುವಾಗಲೇ ಇಂಟರ್‌ನೆಟ್‌ನಲ್ಲಿ ಹರಿದಾಡಿದ ನೆನಪು ನಿಮಗೂ ಬಂದಿರಬೇಕು. ಆಕೆಯ ಪೂರ್ವಜರಿಗೆ ಆಂಗ್ಲರ ಜತೆ ಸಂಬಂಧವಿತ್ತು ಎಂಬ ಅರ್ಥದಲ್ಲಿ ಆಕೆ ಇತ್ತೀಚೆಗೆ ಹೇಳಿದ್ದಾರೆ ಎಂಬುದು ಗಾಳಿ ಸುದ್ದಿಯಂತೆ!

" ಕೆಲವು ವರ್ಷಗಳ ಹಿಂದೆ ನನ್ನನ್ನು ಧರ್ಮೇಂದ್ರರ ಸಂಬಂಧಿಯೆನ್ನಲಾಗುತ್ತಿತ್ತು. ಅವರೂ ಕೂಡ ಸುಂದರವಾಗಿದ್ದ ಕಾರಣ ಆಗಲೂ ನಾನು ಸುಮ್ಮನಿದ್ದೆ. ಆದರೆ ಇಂತಹಾ ಸುದ್ದಿಗಳು ಎಲ್ಲಿ ಹುಟ್ಟಿಕೊಳ್ಳುತ್ತಿವೆ ಎಂದು ತಿಳಿಯುತ್ತಿಲ್ಲ. ನಾನು ಸಂಪೂರ್ಣ ರಜಪೂತ ಹುಡುಗಿ. ನನ್ನ ಹೆತ್ತವರು ಹಿಮಾಚಲ ಪ್ರದೇಶದವರು. ಅವರನ್ನೇ ಈ 'ಬ್ರಿಟೀಷ್ ಸಂಬಂಧ'ಗಳ ಬಗ್ಗೆ ಕೇಳಿದಾಗ ಉರಿದು ಬಿದ್ದಿದ್ದಾರೆ. ಯಾರು ಹೀಗೆಂದವರು ಎಂದು ನನ್ನನ್ನೇ ದಬಾಯಿಸಿದ್ದಾರೆ" ಎಂದು ಸ್ಪಷ್ಟಪಡಿಸಿದ್ದಾಳೆ.

ರಾಜಕೀಯಕ್ಕಿಳಿಯುತ್ತೀರಂತೆ ಎಂದು ಮೆಲ್ಲನೆ ಒಂದು ಪ್ರಶ್ನೆಯನ್ನು ಆಕೆಯತ್ತ ಎಸೆದಾಗ, "ಖಂಡಿತಾ ಇಲ್ಲ. ನಾನು ಯಾವ ಪಕ್ಷದಿಂದಲೂ ಚುನಾವಣೆಗೆ ಸ್ಪರ್ಧಿಸುವ ಅಥವಾ ಪ್ರಚಾರಕ್ಕಿಳಿಯುವ ಉದ್ದೇಶ ಹೊಂದಿಲ್ಲ. ನನ್ನ ಜೀವನ ಏನಿದ್ದರೂ ಸಿನಿಮಾಕ್ಕೆ ಸೀಮಿತ. ಈಗ ಆ ಪಟ್ಟಿಗೆ ಸೇರಿಕೊಂಡಿರುವ ಮತ್ತೊಂದು ಶಬ್ದ ಕ್ರಿಕೆಟ್. ಅದರಲ್ಲೂ ಐಪಿಎಲ್" ಎಂದಿದ್ದಾಳೆ.

ಆದರೆ ನೆಸ್ ವಾಡಿಯಾ ಹೆಸರನ್ನು ಪ್ರಮುಖ ಪಟ್ಟಿಯಿಂದ ಬಿಟ್ಟಿದ್ಯಾಕೆ ಎಂದು ಕುಹಕಿಯೊಬ್ಬ ಕೇಳುತ್ತಿದ್ದಾನೆ! ನೀವೇನಂತೀರಾ?

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments