Select Your Language

Notifications

webdunia
webdunia
webdunia
webdunia

ಪ್ರಿಯಾಂಕಾಗೆ ಗೋವಾ ಬೀಚ್ ಬಳಿ ಹೊಸ ಮನೆ

ಪ್ರಿಯಾಂಕಾಗೆ ಗೋವಾ ಬೀಚ್ ಬಳಿ ಹೊಸ ಮನೆ
ಮುಂಬೈ , ಬುಧವಾರ, 10 ಜುಲೈ 2013 (11:02 IST)
PR
PR
ಬೀಚ್ ಎಂದರೆ ಪ್ರಾಣ ಬಿಡುವ ಪ್ರಿಯಾಂಕಾ ಚೋಪ್ರಾ ಗೋವಾದ ಕಡಲ ತೀರದಲ್ಲೊಂದು ಮನೆ ಖರೀದಿಸಿದ್ದಾರೆ. ಉತ್ತರ ಗೋವಾದ ಬಾಗಾ ಬೀಚ್ ಬಳಿ ಅವರು ಮನೆ ಖರೀದಿಸಿದ್ದನ್ನು ಬಹಿರಂಗಪಡಿಸಿರಲಿಲ್ಲ ಅಷ್ಟೇ.

ಹಾಗಂತ ಪ್ರಿಯಾಂಕಾ ಗೋವಾದಲ್ಲಿ ಸೆಟ್ಲ್ ಆಗುತ್ತಿಲ್ಲ. ಯಾವಾಗಾದರೊಮ್ಮೆ ಗೋವಾಗೆ ಬಂದಾಗ ಉಳಿದುಕೊಳ್ಳಲೆಂದೇ ಈ ಮನೆಯಂತೆ. ಬಿಡುವಿನ ವೇಳೆಯನ್ನು ಬೀಚ್ ಸಮೀಪ ಕಳೆಯುವುದೆಂದರೆ ಅವರಿಗೆ ಬಲು ಪ್ರಿಯವಂತೆ. ಇದು ರಜಾ ದಿನಗಳನ್ನು ಕಳೆಯಲೆಂದೇ ಕೊಂಡ ಮನೆ ಎಂಬ ಮಾಹಿತಿ ಸದ್ಯ ಲಭ್ಯವಾಗಿದೆ. ಈ ಮನೆಯಲ್ಲಿ ಜೋಡಿ ಕೋಣೆಗಳು, ಸಣ್ಣ ಲಾನ್ ಇವೆಯಂತೆ. ಆಧುನಿಕ ಸೌಲಭ್ಯಗಳಿರುವ ಈ ಮನೆಯ ಒಳಾಂಗಣ ವಿನ್ಯಾಸ ಸುಂದರವಾಗಿದೆಯಂತೆ. ಸ್ವತಃ ಪ್ರಿಯಾಂಕ ಅವರೇ ಮುಂದೆ ನಿಂತು ಮನೆಯ ಮೇಲ್ವಿಚಾರಣೆ ನಡೆಸಿ ನಿರ್ಮಿಸಿದ್ದಾರಂತೆ.

ಕಳೆದ ತಿಂಗಳು 10ದಿನ ಈ ಮನೆಯಲ್ಲಿ ವಾಸವಾಗಿದ್ದ ಪ್ರಿಯಾಂಕಾಗೆ ಈ ಮನೆ ಸಖತ್ ಇಷ್ಟವಾಗಿದೆಯಂತೆ. ಮುಂಬರುವ ಮೇರಿ ಕೋಮ್ ಚಿತ್ರಕ್ಕೆ ಸಿದ್ಧವಾಗುತ್ತಿರುವ ಅವರು ಚಿತ್ರತಂಡದೊಂದಿಗೆ ಗೋವದಲ್ಲಿ ತಂಗಿದ್ದರು. ಕೇವಲ ಟೈಮ್ಪಾಸ್ಗಾಗಿ ಬಂಗಲೆಯೊಂದನ್ನು ಖರೀದಿಸಿರುವ ಪ್ರಿಯಾಂಕಾ ನಿಜಕ್ಕೂ ಅದೃಷ್ಟವಂತೆ

Share this Story:

Follow Webdunia kannada