ಆದರೆ ಈತನ ಅಸಮಾನ್ಯ ಪ್ರತಿಭೆಯ ರುಚಿ ಸವಿದಿರುವ ತೆಲುಗು ನಿರ್ಮಾಪಕರು ಆತನ್ನು ಕರೆದು ಮತ್ತೆ ಮಣೆ ಹಾಕಿ ಕುಳ್ಳರಿಸಿದರು. ಆದರೂ ಪ್ರಕಾಶ್ ರೈ ಅವರ ಈ ಗುಣದಲ್ಲಿ ಬದಲಾವಣೆ ಕಾಣದೆ ಇದ್ದುದರಿಂದ ಇಂತಹ ನಿರ್ಧಾರ ಕೈಗೊಂಡಿದ್ದಾರೆ ಆಗಡು ಚಿತ್ರ ನಿರ್ಮಾಪಕರು.
ಪ್ರಕಾಶ್ ರೈ, 'ಆಗಡು' ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಅವರ ಅಭಿನಯದ ಹಲವು ದೃಶ್ಯಗಳ ಚಿತ್ರೀಕರಣ ಕೂಡಾ ಆಗಿದೆ. ಸಣ್ಣಪುಟ್ಟ ವಿಷಯಗಳಿಗೂ ದೊಡ್ಡ ಜಗಳ ಮಾಡುತ್ತಿದ್ದರಂತೆ. ಹಿರಿಕಿರಿಯರೆನ್ನದೆ ರೈ ಮಾಡುತ್ತಿದ್ದ ರಂಪಾಟದಿಂದ ರೋಸಿ ಹೋದ ನಿರ್ಮಾಪಕರು, ರೈಗೆ ಬೈ ಬೈ ಹೇಳಿದ್ದಾರೆ.