Webdunia - Bharat's app for daily news and videos

Install App

ಪತಿ ಮೇಲೆ ಡೌರಿ ಕೇಸು ದಾಖಲಿಸಿದ ಯುಕ್ತಾ ಮುಖಿ

Webdunia
ಸೋಮವಾರ, 8 ಜುಲೈ 2013 (13:10 IST)
PR
PR
ಮಾಜಿ ವಿಶ್ವಸುಂದರಿ ನಟಿ ಯುಕ್ತಾ ಮುಖಿ ಪತಿಯ ಮೇಲೆ ವರದಕ್ಷಿಣೆ ಹಿಂಸೆಯ ಕೇಸು ದಾಖಲಿಸಿದ್ದಾಳೆ. ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪತಿ ಪ್ರಿನ್ಸ್ ಟುಲಿ ಆಕೆ ವರದಕ್ಷಿಣೆಯ ಕೇಸು ದಾಖಲಿಸಿದ್ದಾರೆ.

ಮುಂದಿನ ಕ್ರಮ ಕೈಗೊಳ್ಳದ ಮೊದಲು ಪತಿ ಟುಲಿ ಅವರನ್ನು ಕರೆಸಿ ವಿಚಾರಣೆ ನಡೆಸುವುದಾಗಿ ತನಿಖಾಧಿಕಾರಿ ಪ್ರಭಾಕರ್ ಮೇಧೆ ತಿಳಿಸಿದ್ದಾರೆ. ಆದರೆ ಈ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಲು ಯುಕ್ತಾ ನಿರಾಕರಿಸಿದ್ದಾರೆ.

ಕಳೆದ ವರ್ಷ ಜೂನ್ ತಿಂಗಳಲ್ಲಿ ಯುಕ್ತಾ ದೌರ್ಜನ್ಯ ಕುರಿತು ಪೊಲೀಸರಿಗೆ ಲಿಖಿತ ಅರ್ಜಿ ನೀಡಿದ್ದರು. ಪೊಲೀಸರು ಆ ಕುರಿತು ಪ್ರಾಥಮಿಕ ತನಿಖೆ ನಡೆಸಿದ್ದರು. ಯಾವುದೇ ಎಫ್ಐಆರ್ ದಾಖಲಿಸದ ಕಾರಣ ಅದು ಅಲ್ಲಿಗೆ ಸಪ್ಪೆಯಾಯಿತು. ಕೆಲ ದಿನಗಳ ಬಳಿಕ ಯಾವುದೇ ಕ್ರಮ ಕೈಗೊಳ್ಳದಂತೆ ಪೊಲೀಸರನ್ನು ಯುಕ್ತಾ ಕೇಳಿಕೊಂಡಿದ್ದರು. ಅಲ್ಲಿಗೆ ಅದು ಎಲ್ಲರಿಗೂ ಮರೆತು ಹೋಗಿತ್ತು.

2008 ರಲ್ಲಿ ನಾಗ್ಪುರದಲ್ಲಿ ಸಾರಿಗೆ ಮತ್ತು ಆತಿಥ್ಯ ಉದ್ಯಮದಲ್ಲಿ ತೊಡಗಿದ್ದ ಕುಟುಂಬದ ಟುಲಿ ಅವರನ್ನು ಯುಕ್ತಾಮುಖಿ ಮದುವೆಯಾಗಿದ್ದರು. ಕಳೆದ ಒಂದು ವರ್ಷದಿಂದ ಹೆತ್ತವರೊಂದಿಗೆ ವಾಸವಾಗಿರುವ ಈಕೆಗೆ ಮೂರು ವರ್ಷದ ಮಗನೂ ಇದ್ದಾನೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments