ರಜನಿಕಾಂತ್ ಅವರ ಬಗ್ಗೆ ಅನೇಕ ಜೋಕ್ ಗಳು ಚಾಲ್ತಿಯಲ್ಲಿವೆ. ಅದು ಅವರ ಪ್ರತಿಭೆಗೆ ಮತ್ತು ಅಭಿಮಾನಕ್ಕೆ ಸಂದ ಗೌರವ. ಅನೇಕ ಮಂದಿಗೆ ರಜನಿ ಅವರು ಏನು ಬೇಕಾದರೂ ಸಹ ಮಾಡ ಬಲ್ಲರು ಎನ್ನುವ ನಂಬಿಕೆ ಇದೆ. ಅಂತಹ ನಂಬಿಕೆ ನನಗು ಸಹ ಇದೆ. ಅವರೆಂದಿಗೂ ತಮ್ಮ ಸಮಕಾಲಿನರ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ.
ಅವರಿಗೆ ತಮ್ಮನ್ನು ನಂಬಿದವರ ಬಗ್ಗೆ ಎಷ್ಟು ವಿಶೇಷ ಪ್ರೀತಿ ಇದೆಯೋ ಅಷ್ಟೇ ಗೌರವ ಸಹ ಅಭಿಮಾನಿಸುವವರ ಕುರಿತು ಇದೆ ಎಂದಿದ್ದಾರೆ. ಕೊಚ್ಚಾಡಿಯನ್ ಮುಖಾಂತರ ನಿರ್ದೇಶನಕ್ಕೂ ಕಾಲಿಟ್ಟ ಸೌಂದರ್ಯ ಇಂತಹ ಹೈ ಟೆಕ್ ತ್ರಿಡಿ ಚಿತ್ರಗಳು ಅವತಾರ್ , ದ ಅಡ್ವೆಂಚರ್ಸ್ ಆಫ್ಟ ಟೈಟಾನ್ ನಂತಹ ಹಾಲಿವುಡ್ ಚಿತ್ರಗಳಂತೆ ಕೊಚ್ಚಾಡಿಯನ್ ಸಹ ಇದೆ ಎನ್ನುವ ಸಂಗತಿ ಹೇಳಿದರು. ಇಂತಹ ಅನಿಮೇಶನ್ ಚಿತ್ರಗಳು ಹೆಚ್ಚಿನ ಗಳಿಕೆ ಮಾಡಿಲ್ಲ ನಮ್ಮ ಬಾಕ್ಸಾಫೀಸಲ್ಲಿ. ಅಲ್ಲದೆ ಇಂತಹ ಚಿತ್ರಗಳು ತಯಾರಿಸುವ ಬಗ್ಗೆ ಹೆಚ್ಚಿನ ಆದ್ಯತೆ ನೀಡಿಲ್ಲ ನಮ್ಮವರು. ಅದಕ್ಕೆ ಹಲವಾರು ಕಾರಣಗಳು ಇರ ಬಹುದು.
ಮುಖ್ಯವಾಗಿ ಬಹಳಷ್ಟು ಭಾರತೀಯರು ಅನಿಮೇಶನ್ ಚಿತ್ರ ಅಂದ್ರೆ ಕೇವಲ ಟಾಮ್ ಮತ್ತು ಜೆರ್ರಿ ಎಂದು ತಿಳಿಯುತ್ತಾರೆ. ಆದರೆ ಅದು ಸರಿಯಲ್ಲ ಅನಿಮೇಶನ್ ಅಂದ್ರೆ ಕಾರ್ಟೂನ್ ಅಲ್ಲ ಎನ್ನುವ ಅಂಶವನ್ನು ಸಹ ಆಕೆ ಹೇಳಿದ್ದಾರೆ. ಇಂತಹ ಚಿತ್ರವನ್ನು ತಮ್ಮ ಮಗಳು ಸಿದ್ಧ ಮಾಡಿದ್ದಕ್ಕೆ ರಜನಿಕಾಂತ್ ಗೆ ಸಿಕ್ಕಾಪಟ್ಟೆ ಖುಷಿ ಆಗಿದೆಯಂತೆ...ಈ ಮೂಲಕ ಸೌಂದರ್ಯ ಭಾರತದ ಚಿತ್ರರಂಗದಲ್ಲಿ ಹೊಸ ಅಲೆಯನ್ನು ತರಲು ಸಿದ್ಧ ಆಗಿದ್ದಾರೆ.