Select Your Language

Notifications

webdunia
webdunia
webdunia
webdunia

ನನ್ನ ಅಭಿನಯದ ಬಗ್ಗೆ ಏನು ಬೇಕಾದರೂ ಬರಿಯಿರಿ ..ಆದ್ರೆ.. !

ನನ್ನ ಅಭಿನಯದ ಬಗ್ಗೆ ಏನು ಬೇಕಾದರೂ ಬರಿಯಿರಿ ..ಆದ್ರೆ.. !
, ಶನಿವಾರ, 2 ನವೆಂಬರ್ 2013 (13:22 IST)
PR
ನಾನು ನಟಿ, ನನ್ನ ಅಭಿನಯದ ಬಗ್ಗೆ ಏನು ಬೇಕಾದರೂ ಬರಿಯಿರಿ ನಾನು ಬೇಸರ ಮಾಡಿಕೊಳ್ಳುವುದಿಲ್ಲ.. ಆದ್ರೆ.. ?ಹೀಗಂತ ಗುಡುಗಿದ್ದು ಬೇರೆ ಯಾರು ಅಲ್ಲ ಬಿ ಟೌನ್ ಹಸಿಬಿಸಿ ನಟಿ ಅನುಷ್ಕ ಶರ್ಮ. ಹೌದು ಈ ಪತ್ರಿಕೆಯರು ಇನ್ನೇನು ಬರೀತಾರೆ ಅಂತ ತಿಳಿದ್ರಿ ಮತ್ತದೇ ಗಾಸಿಪ್ಪು.. ಅತಿರೇಕಗಳ ಸಿಪ್ಪು ಇದ್ದದ್ದೇ, ಆದ್ರೆ ಆಕ್ಟರ್ಗಳ ಪರ್ಸನಲ್ ಬಗ್ಗೆ ಬರಿತಾ ಇದ್ರೆ ಕೋಪ ಬರದೆ ಇರುತ್ತಾ ಅವರಿಗೆ? ಅನುಷ್ಕ ಶರ್ಮ ಕಥೆನೂ ಇದೆ. ಆಕೆ ತನ್ನ ಪಾಡಿಗೆ ತಾನು ಡೇಟಿಂಗ್ ಮಾಡಿಕೊಂಡಿದ್ದಾಳಪ್ಪ ಅದರಲ್ಲೇನು ? ಹಾಗಂತ ಮೀಡಿಯಾದವರು ಸುಮ್ಮನೆ ಇರದೇ ಜನರಿಗೆ ಹೇಳೋಕೆ ಹೋದ್ರೆ ಆಕೆಗೆ ಸಿಟ್ಟು ಬರಾಕಿಲ್ವ!
ಬರುತ್ತೆ ಬಂದೆ ಬರುತ್ತೆ. ಭಾರತೀಯ ಕ್ರಿಕೆಟರ್ ವಿರಾಟ್ ಕೊಹ್ಲಿ ಮತ್ತು ಆಕೆ ನಡುವೆ ಇತ್ತಿಚೆಗೆ .. ಅದು ಇದು ! ಅವರ ಬಗ್ಗೆ ಕಥೆ -ಕಾರಣಗಳು ಬಿ ಟೌನ್ ಹಾಟ್ ಸುದ್ದಿಯಾಗಿದೆ.

ಅದರ ಬಗ್ಗೆ ಗೊತ್ತಾದ ಬಳಿಕ ಆಕೆಗೆ ಕೋಪ ಬಂದು ಕೂಗಾಡಿದ್ದಾಳೆ. ನಾನು ಮತ್ತು ವಿರಾಟ್ ಒಂದು ಜಾಹೀರಾತಿನಲ್ಲಿ ನಟಿಸಿದ್ದೇವೆ. ವಿರಾಟ್ ತುಂಬಾ ಒಳ್ಳೆ ವ್ಯಕ್ತಿ, ಯಾರೇ ಆಗಲಿ ಸುಲಭವಾಗಿ ಬೆರೆತು ಬಿಡ್ತಾರೆ. ಆತನ ಬಗ್ಗೆ ಈ ರೀತಿ ರೂಮರ್ ಗಳು ಬರೋಕೆ ಇದೆ ಕಾರಣ. ಈಗ ನಾವಿಬ್ಬರು ಕ್ಲೋಸ್. ಅದಕ್ಕೆ ನಮ್ಮಿಬ್ಬರ ಬಗ್ಗೆ ಹೀಗೆ ಗಾಳಿ ಟಾಕು! ನಾವಿಬ್ಬರು ಲಿವಿನ್ ರಿಲೇಶನ್ ಶಿಪ್ ಹೊಂದಿದ್ದೀವಿ ಎಂದು ಒಂದು ಚಾನೆಲ್ ಪ್ರಸಾರ ಮಾಡಿದೆ. ಅದರಿಂದ ನಂಗೆ ಜಾಸ್ತಿ ಬೇಜಾರಾಗಿದೆ. ಅಂತಹ ಪದ್ಧತಿಗಳಿಂದ ನಾನು ದೂರ ದೂರ! ಅಪ್ಪ-ಅಮ್ಮ ಇಲ್ಲದ ಅನಾಥೆ ನಾನಲ್ಲ .. ಎಂದಿದ್ದಾಳೆ. ಹಾಗಾದ್ರೆ ಲಿವಿನ್ ಮಾಡಿರೋ ಮಾಡ್ತಾ ಇರೋ ನಟ-ನಟಿಯರು ??

Share this Story:

Follow Webdunia kannada