Select Your Language

Notifications

webdunia
webdunia
webdunia
webdunia

ದೋಸ್ತಾನ ನೋಡಿದ ಶಾರುಖ್, ಸೈಫ್, ಕರೀನಾ, ದೀಪಿಕಾ....

ದೋಸ್ತಾನ ನೋಡಿದ ಶಾರುಖ್, ಸೈಫ್, ಕರೀನಾ, ದೀಪಿಕಾ....
ಕರಣ್ ಜೋಹರ್‌ರ ದೋಸ್ತಾನ ಚಿತ್ರಕ್ಕೆ ಎರಡು ಸ್ಕ್ರೀನಿಂಗ್‌ಗಳನ್ನು ನಡೆಸಲಾಗಿದೆ. ಮಂಗಳವಾರ ನಡೆದ ಮೊದಲ ಸ್ಕ್ಕೀನಿಂಗ್‌ನಲ್ಲಿ ಚಿತ್ರ ತಂಡ, ಜೋಹರ್‌ರ ಕುಟುಂಬ ಸ್ನೇಹಿತರಾಗಿರುವ ಚೋಪ್ರಾ ಕುಟುಂಬ, ಮತ್ತು ದೋಸ್ತಾನದ ಅಂತಾರಾಷ್ಟ್ರೀಯ ವಿತರಕರು ದೋಸ್ತಾನ ವೀಕ್ಷಿಸಿದರು.

ಬುಧವಾರ ರಾತ್ರಿ ನಡೆದ ಎರಡನೇ ಸ್ಕ್ರೀನಿಂಗ್‌ನಲ್ಲಿ ಕರಣ್‌ರ ಹತ್ತಿರದ ಸ್ನೇಹಿತರು ಪಾಲ್ಗೊಂಡಿದ್ದು ಖ್ಯಾತ ಬಾಲಿವುಡ್ ತಾರೆಗಳು ದೋಸ್ತಾನ ವೀಕ್ಷಿಸಿದರು. ಜಯಾ ಬಚ್ಚನ್, ಶಾರುಖ್ ಖಾನ್ ಮತ್ತು ಪತ್ನಿ ಗೌರಿ ಮತ್ತು ಮಕ್ಕಳು, ಸೈಫ್ ಅಲಿಖಾನ್ ಮತ್ತು ಕರೀನಾ ಕಪೂರ್, ಕರೀಶ್ಮಾ ಕಪೂರ್, ರಾಣಿ ಮುಖರ್ಜಿ ಮತ್ತು ಅವರ ತಂದೆ ತಾಯಿ, ದೀಪಿಕಾ ಪಡುಕೋಣೆ, ಸುಶಾನೆ ರೋಶನ್, ಅರ್ಜುನ್ ರಾಂ ಪಾಲ್ ಮತ್ತು ಪತ್ನಿ ಮೆಹೆರ್, ಇಮ್ರಾನ್ ಖಾನ್ ಮತ್ತು ಗರ್ಲ್‌ಫ್ರೆಂಡ್ ಅವಂತಿಕಾ, ಕುನಾಲ್ ಕಪೂರ್, ಕುನಾಲ್ ಕೋಹ್ಲಿ, ರಿತೇಶ್ ಸಿದ್ವಾನಿ, ಅನಿಲ್ ಟಂಡಾನಿ, ಸಾಜಿದ್ ಖಾನ್, ಸಿದ್ಧಾರ್ಥ ರಾಜ್ ಆನಂದ್, ಜುಗಲ್ ಹಂಸರಾಜ್, ಕಂಗನಾ ರಾಣವತ್, ಅಮೃತಾ ರಾವ್, ಸಂಜಯ್ ಕಪೂರ್ ಮತ್ತು ಪತ್ನಿ ಮಹೀಪ್, ಸೋನಮ್ ಕಪೂರ್, ನೀಲಮ್, ಚಂಕಿ ಪಾಂಡೆ ಮತ್ತು ಪತ್ನಿ ಭಾವನಾ, ಕೋಯಲ್ ಪುರಿ, ಮುಶ್ತಾಖ್ ಶೇಖ್ , ಮನೀಶ್ ಮಲ್ಹೊತ್ರಾ, ಮ್ಯೂಸಿಕ್ ಕಂಪೋಸರ್ ವಿಶಾಲ್ ಮತ್ತು ಶೇಖರ್, ಬರಹಗಾರ ಶಿಬಾನಿ ಭಟಿಜಾ ಅವರು ಸ್ಕ್ರೀನಿಂಗ್ ಸಂದರ್ಭ ಉಪಸ್ಥಿತರಿದ್ದರು.
IFM

ಸ್ಕ್ರೀನಿಂಗ್ ಸಂದರ್ಭ ಪೂರ್ಣ ಆಡಿಟೋರಿಯಮ್, ನಗುವಿನಲೆ ಮತ್ತು ಚಪ್ಪಾಳೆಗಳಿಂದ ಪ್ರತಿಧ್ವನಿಸುತ್ತಿತ್ತು.

ಸ್ಕ್ರೀನಿಂಗ್ ಪೂರ್ಣಗೊಂಡ ನಂತರ ಪ್ರಿಯಾಂಕ ಅತಿಥಿಗಳನ್ನು ಭೇಟಿಯಾದರು. ಕರಣ್ ಮತ್ತು ತರುಣ್ ಮನಸುಕಾನಿ ಪ್ರತಿಯೊಬ್ಬ ಅತಿಥಿಗಳನ್ನು ವೈಯಕ್ತಿಕವಾಗಿ ಭೇಟಿಯಾದರು.

Share this Story:

Follow Webdunia kannada