Select Your Language

Notifications

webdunia
webdunia
webdunia
webdunia

ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ವಿರುದ್ಧ ಎಫ್‌ಐಆರ್‌.

ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ವಿರುದ್ಧ ಎಫ್‌ಐಆರ್‌.
ಮುಂಬೈ , ಸೋಮವಾರ, 23 ಸೆಪ್ಟಂಬರ್ 2013 (12:23 IST)
PTI
PTI
ಬಾಲೀವುಡ್‌ ಬೆಡಗಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್ಗೆ ಇದೀಗ ಶನಿ ಕಾಟ ಶುರುವಾಗಿದೆ ಅಂತ ಕಾಣಿಸುತ್ತೆ. ಚಿತ್ರದಲ್ಲಿನ ಕೆಲವು ದೃಶ್ಯಗಳು ಕೋಮು ಸಾಮರಸ್ಯಕ್ಕೆ ಧಕ್ಕೆ ತರುತ್ತಿದೆ ಎಂಬ ಕಾರಣಕ್ಕಾಗಿ ರಾಮ್‌ ಲೀಲಾ ಚಿತ್ರದ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಸೇರಿದಂತೆ ದೀಪಿಕ ಮತ್ತು ರಣವೀರ್‌ ಮೇಲೆ ಇದೀಗ ದೂರು ದಾಖಲಾಗಿದೆ.

ಈಗಾಗಲೇ ಕೋಮು ಭಾವನೆಗಳಿಗೆ ಧಕ್ಕೆಯುಂಟಾಗಿ ಮುಜಾಫರ್‌ನಗರ ಹೊತ್ತಿ ಉರಿದಿದೆ. ಇದರ ಬೆನ್ನಲ್ಲೇ ರಾಮ್‌ಲೀಲಾ ಚಿತ್ರವು ಜನರ ಕೋಮು ಭಾವನೆಗಳನ್ನು ಕೆರಳಿಸುತ್ತಿದೆ ಎಂಬ ಕಾರಣಕ್ಕಾಗಿ ಚಿತ್ರದ ನಟ ನಟಿಯರು ಮತ್ತು ನಿರ್ದೇಶಕ ಬನ್ಸಾಲಿ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ನ್ಯಾಯಾಲಯ ಪೋಲೀಸರಿಗೆ ಸೂಚಿಸಿದೆ.

ಅಡ್ವೋಕೇಟ್‌ ಪವನ್‌ ಶರ್ಮ ಈ ಸಂಬಂಧ ದೂರು ದಾಖಲಿಸಿದ್ದು, ಚಿತ್ರದ ಪ್ರೋಮೋ ಮತ್ತು ಪೋಸ್ಟರ್‌ಗಳು ಕೋಮು ದಳ್ಳುರಿಯನ್ನು ಪ್ರಚೋದಿಸುತ್ತಿವೆ ಎಂದು ಅಭಿಪ್ರಾಯ ಪಟ್ಟರು.

ಅಶ್ಲೀಲತೆಯ ಆಗರವಾಗಿದೆ ಅಂತಿದ್ದಾರೆ ಹಿಂದೂ ಸಂಘಟನೆಯ ಮುಖ್ಯಸ್ಥರು....
ಅಂಥದ್ದು ಏನಿದೆ ಆ ಸಿನೆಮಾ ಪೋಸ್ಟರ್‌‌ನಲ್ಲಿ? ಮುಂದಿನ ಪುಟದಲ್ಲಿದೆ ಸಂಪೂರ್ಣ ಮಾಹಿತಿ.....

webdunia
PTI
PTI
ಹಿಂದೂ ದೇವರಾದ ಶ್ರೀರಾಮನ ಲೀಲೆಯ ಬಗ್ಗೆ ತಿಳಿಸುವಂತಹ ಹೆಸರನ್ನು ಸಿನೆಮಾಗೆ ಇಡಲಾಗಿದೆ. ಆದರೆ ಸಿನೆಮಾ ಪೋಸ್ಟರ್‌ನಲ್ಲಿ ದೀಪಿಕ ಮತ್ತು ರಣವೀರ್‌ ಸಿಂಗ್‌ ಅಶ್ಲೀಲವಾಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಚಿತ್ರದ ಪೋಸ್ಟರ್‌ಗಳಲ್ಲಿ ಬಂದೂಕುಗಳು, ಗನ್ ಗಳು ಕೂಡ ಇವೆ. ಹೀಗಾಗಿ ಶ್ರೀರಾಮನನ್ನು ಅವಹೇಳನಕಾರಿಯಾಗಿ ಬಿಂಬಿಸುವ ಯತ್ನ ನಡೆಯುತ್ತಿದೆ ಎಂಬುದು ಹಿಂದೂಗಳ ವಾದ. ಇದು ಹಿಂದೂಗಳ ಭಾವನೆಗೆ ಧಕ್ಕೆ ತರುವಂತಿದ್ದು, ಮತ್ತೆ ಕೋಮು ಗಲಭೆ ಸೃಷ್ಟಿಯಾಗಲು ಈ ಸಿನೆಮಾ ಪೋಸ್ಟರ್‌ಗಳು ಪುಷ್ಟಿ ನೀಡುವ ಸಾಧ್ಯತೆಗಳು ಇವೆ ಎಂಬ ಕಾರಣಕ್ಕಾಗಿ ರಾಮ್‌ಲೀಲ ಚಿತ್ರ ತಂಡದ ವಿರುದ್ಧ ದೂರು ದಾಖಲಿಸಲಾಗಿದೆ.

Share this Story:

Follow Webdunia kannada