Select Your Language

Notifications

webdunia
webdunia
webdunia
webdunia

ಥ್ರಿಲ್ಲರ್ ಚಿತ್ರ ಜಾನಿ ಗದ್ದರ್

ಥ್ರಿಲ್ಲರ್ ಚಿತ್ರ ಜಾನಿ ಗದ್ದರ್
IFM
"ಜಾನಿ ಗದ್ದರ್" ನಗರದ ಕರಾಳ ರಾತ್ರಿಜೀವನದ ಮೇಲೆ ಬೆಳಕು ಚೆಲ್ಲುವ ಥ್ರಿಲ್ಲರ್ ಚಿತ್ರ. ಧರ್ಮೇಂದ್ರ, ನೀಲ್ ಮುಖೇಶ್, ವಿನಯ್ ಪಾಠಕ್, ಜಾಕೀರ್ ಹುಸೇನ್ ಮತ್ತು ಶಿವಾ ಇವರ ಸುತ್ತ ಕಥೆ ಕೇಂದ್ರೀಕೃತವಾಗಿದೆ.

ಗ್ಯಾಂಗ್ ಸದಸ್ಯರಲ್ಲಿ ಒಬ್ಬನಿಗೆ ನಾಲ್ಕು ದಿನಗಳಲ್ಲಿ ಅದೃಷ್ಟ ಕುಲಾಯಿಸುವ ಆಫರ್ ಬರುತ್ತದೆ. ಎಲ್ಲ ಗ್ಯಾಂಗ್ ಸದಸ್ಯರು ಅದಕ್ಕೆ ಬೆಂಬಲಿಸುತ್ತಾರೆ. ಡೀಲ್ ಕುದುರಿದರೆ ತನ್ನ ಪ್ರಿಯತಮೆ ರಿಮಿಸೇನ್ ಜತೆ ಹೊಸಜೀವನ ನಡೆಸಬೇಕೆಂಬುದು ನೀಲ್ ಮುಖೇಶ್ ಯೋಜನೆ.

ಅದಕ್ಕಾಗಿ ಇಡೀ ಜಾಕ್‌ಪಾಟ್ ಹೊಡೆದರೆ ಹೇಗೆಂದು ನೀಲ್ ಯೋಚಿಸುತ್ತಾನೆ. ನೀಲ್‌ನ ಆರಂಭದ ವ್ಯೂಹ ಏನೆಂದರೆ ಡಬಲ್ ಕ್ರಾಸ್ ಮಾಡುವುದು. ಆದರೆ ಗ್ಯಾಂಗ್ ಸದಸ್ಯನೊಬ್ಬ ಹತ್ಯೆಯಾದಾಗ ಮತ್ತು ಹಣ ಕಣ್ಮರೆಯಾದಾಗ ಉಳಿದಿರುವ ನಾಲ್ವರಲ್ಲಿ ಕೊಲೆಗಾರನ್ಯಾರೆಂಬ ನಿಗೂಢತೆಯಲ್ಲಿ ನಿರ್ದಯ ಹುಡುಕಾಟ ಸಾಗುತ್ತದೆ.

Share this Story:

Follow Webdunia kannada