Select Your Language

Notifications

webdunia
webdunia
webdunia
webdunia

ತೆರೆಯ ಮ್ಯಾಲೆ ಮುನ್ನಾ ಭಾಯಿ ಸಲ್ಲು ಭಾಯಿ ಜೀವನ ಚರಿತ್ರೆ

ತೆರೆಯ ಮ್ಯಾಲೆ ಮುನ್ನಾ ಭಾಯಿ ಸಲ್ಲು ಭಾಯಿ ಜೀವನ ಚರಿತ್ರೆ
, ಬುಧವಾರ, 18 ಡಿಸೆಂಬರ್ 2013 (11:28 IST)
PR
ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ಅಂದ್ರೆ ಸಾಕಷ್ಟು ಜನರಿಗೆ ಸಿಕ್ಕಾಪಟ್ಟೆ ಕ್ರೇಜ್. ಅವರಿಬ್ಬರು ನಟನೆ ಮೂಲಕ ಅದೆಷ್ಟು ಪಾಪ್ಯುಲರ್ ಆಗಿದ್ದಾರೋ ಅಷ್ಟೇ ಪಾಪ್ಯುಲರ್ ತಮ್ಮ ವಿವಾದಗಳಿಂದ. ಇಂತಹ ಅನೇಕ ಸಂಗತಿಗಳನ್ನು ಹೊಂದಿರುವ ಈ ಜೋಡಿಯ ಜೀವನಾಧಾರಿತ ಚಿತ್ರ ನಿರ್ಮಿಸಲು ಹೊರಟಿದ್ದಾರೆ ಸಿನಿಮಂದಿ. ಮುನ್ನಾ ಭಾಯ್ ಸಲ್ಲುಭಾಯ್ ಹೆಸರಿನ ಚಿತ್ರವನ್ನು ಮುಜ್ಜಂ ಬೇಗ್ ನಿರ್ದೇಶಿಸುತ್ತಿದ್ದಾರೆ.

ನೀವು ಆ ನಟರಿಬ್ಬರ ವಿವಾದಗಳನ್ನು ನಿರೀಕ್ಷಿಸಿದ್ದರೆ ಅದನ್ನು ಚಿತ್ರದಲ್ಲಿ ಕಾಣಲಾಗುವುದಿಲ್ಲವಂತೆ. ಯಾಕೆಂದರೆ ಆ ಚಿತ್ರದಲ್ಲಿ ಅವರಿಬ್ಬರ ಉತ್ತಮ ಸಂಗತಿಗಳನ್ನು ಹೈಲೈಟ್ ಮಾಡಲಾಗುತ್ತದೆಯಂತೆ!
ಇದರಲ್ಲಿ ಇವರಿಬ್ಬರ ಅಭಿಮಾನಿಗಳಿಗೆ ಇಷ್ಟ ಆಗುವ ಸಂಗತಿಗಳು ಇರುರತ್ತವೆಯಂತೆ. ಶ್ರೇಷ್ಟ ಕುಮಾರ್ ಮತ್ತು ಜುಬೈರ್ ಖಾನ್ ಈ ಚಿತ್ರದಲ್ಲಿ ನಟಿಸುತ್ತಿದ್ದು ಸಲ್ಮಾನ್ ಹಾಗೂ ಸಂಜಯ್ ಪಾತ್ರಗಳನ್ನು ಯಾರು ಮಾಡುತ್ತಾರೆ ಎಂಬುದು ಇನ್ನೂ ನಿಕ್ಕಿಯಾಗಿಲ್ಲ. ಕಳೆದ ಕೆಲವು ದಿನಗಳಿಂದ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಮುಂದಿನ ವರ್ಷ ಇದು ಬಿಡುಗಡೆಯ ಭಾಗ್ಯ ಕಾಣುತ್ತಿದೆಯಂತೆ!

Share this Story:

Follow Webdunia kannada