Select Your Language

Notifications

webdunia
webdunia
webdunia
webdunia

ತಮಿಳು ಚಿತ್ರರಂಗದಿಂದ ಬಾಲಿವುಡ್ಗೆ ಕೊಡುಗೆ: ತಮನ್ನಾ

ತಮಿಳು ಚಿತ್ರರಂಗದಿಂದ ಬಾಲಿವುಡ್ಗೆ ಕೊಡುಗೆ: ತಮನ್ನಾ
ಬಾಲಿವುಡ್ , ಗುರುವಾರ, 27 ಜೂನ್ 2013 (10:32 IST)
PR
PR
ನಟಿ ತಮನ್ನಾಗೆ ಹಿಂದಿ ಚಿತ್ರರಂಗದಲ್ಲಿ ದಕ್ಷಿಣದ ನಟನಟಿಯರು ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಂತಸ ತಂದಿದೆಯಂತೆ. ರಜನಿಕಾಂತ್ ಅಳಿಯ ಧನುಷ್ ರಾಂಝಾನಾ ಚಿತ್ರದ ಮೂಲಕ ಹಿಂದಿ ಚಿತ್ರರಂಗ ಪ್ರವೇಶಿಸಿ ಗೆದ್ದಿರುವುದು ಅವರ ಖುಷಿ ಇಮ್ಮಡಿಗೊಳ್ಳಲು ಕಾರಣವಾಗಿದೆಯಂತೆ.

ಅಜಯ್ ದೇವಗನ್ ಅವರ ಹಿಮ್ಮತ್ವಾಲಾ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದವರು ತಮನ್ನಾ. 2009ರಲ್ಲಿ ಪಡಿಕಥಾವನ್ ಚಿತ್ರದಲ್ಲಿ ಧನುಷ್ ಜೊತೆಗೂ ನಟಿಸಿದ್ದರು. ನಟ ಧನುಷ್, ಶ್ರುತಿ ಹಾಸನ್ ಹಾಗೂ ಇಲಿಯಾನಾ ಅವರನ್ನು ಬಾಲಿವುಡ್ ಚಿತ್ರಗಳಲ್ಲಿ ಕಂಡಾಗ ಅತೀವ ಹೆಮ್ಮೆ ಎನಿಸುತ್ತದೆ ಎಂದು ಅವರು ಹೇಳಿದ್ದಾರೆ.

ಇವರೆಲ್ಲಾ ಬಾಲಿವುಡ್ನಲ್ಲಿ ನೂರಕ್ಕೂ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಳ್ಳಲಿ. ಚಿತ್ರರಂಗದಲ್ಲಿ ಅತ್ಯುನ್ನತವಾದುದನ್ನು ಸಾಧಿಸಬೇಕೆಂಬ ಹಂಬಲವಿರುವ ದಕ್ಷಿಣದ ಎಲ್ಲಾ ನಟನಟಿಯರಿಗೆ ನನ್ನ ಅಭಿನಂದನೆಗಳು ಎಂದು ಅವರು ಹಾರೈಸಿದ್ದಾರೆ. ಶ್ರುತಿ ಹಾಸನ್ ರಾಮಯ್ಯ ವಸ್ತಾವಯ್ಯಾ ಮತ್ತು ಡಿ ಡೇ ಎಂಬ ಹಿಂದಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬರ್ಫಿ ಚಿತ್ರದ ಬಳಿಕ ಇಲಿಯಾನಾ ಫಟಾ ಪೋಸ್ಟರ್ ನಿಕ್ಲೆ ಹೀರೋ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಮನ್ನಾ ಅವರ ಕೈಯಲ್ಲೂ ಎರಡು ಚಿತ್ರಗಳಿವೆ. ಅಕ್ಷಯ್ ಕುಮಾರ್ ಹಾಗೂ ಸೈಫ್ ಆಲಿ ಖಾನ್ ಅವರೊಂದಿಗೆ ತಮನ್ನಾ ಮುಂದಿನ ಎರಡು ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Share this Story:

Follow Webdunia kannada