Webdunia - Bharat's app for daily news and videos

Install App

ತಬು - ಶಾಹಿದ್ ಕಪೂರ್ ಪ್ರೇಮ ಪರಿಣಯ ?

Webdunia
ಬುಧವಾರ, 12 ಮಾರ್ಚ್ 2014 (10:08 IST)
PR
ಎಲ್ಲ ವುಡ್ ನಲ್ಲಿ ಸ್ಟಾರ್ ಹೀರೋಗಳ ಜೋಡಿಯಾಗಿ ಅನೇಕ ವರ್ಷಗಳ ಮಿಂಚಿ ಮಿನುಗಿದ ತಾರೆ ತಬು. ಆಕೆಯುಈಗ ನಲವತ್ತರ ಹರೆಯದ ಸುಂದರಿ. ಕ್ರಮೇಣ ಯುವ ಅಂದಗಾರ್ತಿಯರು ಚಿತ್ರರಂಗಕ್ಕೆ ಪ್ರವೇಶಿಸಿದ ಬಳಿಕ ಅವಕಾಶಗಳು ಕಡಿಮೆ ಆಯಿತು. ಮಧ್ಯವಯಸ್ಕ ಹೀರೋಗಳ ಜೊತೆಯಲ್ಲಿ ನಟಿಸುತ್ತ ಆಕೆ ತನ್ನ ತಾರ ಬದುಕನ್ನು ಮುಂದುವರೆಸಿಕೊಂಡು ಬಂದದ್ದು ಸುಳ್ಳಲ್ಲ.

ಆದರೆ ಆಕೆಗೆ ಅರಿಯದಂತೆ ಒಂದು ವಿಸ್ಮಯ ನಡೆದಿದೆ. ಬಾಲಿವುಡ್ ನಲ್ಲಿ ಹೀರೋಯಿನ್ ಗಳಿಗೂ ಸದಾ ಒಂದು ಒಳ್ಳೆ ಟೈಮ್ ಇದ್ದೆ ಇರುತ್ತದೆ ಎನ್ನುವುದು ಸುಳ್ಳಲ್ಲ. ಅದೀಗ ಮತ್ತೆ ಸಾಬೀತಾಗಿದೆ ಎಂದೇ ಹೇಳ ಬಹುದು. ತನಗಿಂತಹತ್ತು ವರ್ಷಗಳಷ್ಟು ಕಿರಿಯ ಯುವ ಚಾರ್ಮಿಂಗ್ ಹೀರೋ ಶಾಹಿದ್ ಕಪೂರ್ ಜೊತೆಗೆ ನಟಿಸುವ ಅವಕಾಶ ದೊರಕಿದೆ ತಬುಗೆ. ಆ ಜೋಡಿಯನ್ನು ತೆರೆಯ ಮೇಲೆ ತರಬೇಕು ಎನ್ನುವ ನಿರ್ದೇಶಕರ ಉದ್ದೇಶದ ಬಗ್ಗೆ ಸಾಕಷ್ಟು ಆಶ್ಚರ್ಯ ಉಂಟಾಗಿದೆ ಬಾಲಿವುಡ್ ಮಂದಿಗೆ.

PR
ಕಂಗನಾ ರನೌಟ್ ಕ್ವೀನ್ ಚಿತ್ರ ನಿರ್ದೇಶಿಸಿದ್ದ ವಿಕಾಸ್ ಭಾಲ್ ಗೆ ಇಂತಹದ್ದೊಂದು ಯೋಚನೆ ಬಂದಿದೆ.ಈ ಸಿನಿಮಾವನ್ನು ಅವರೇ ನಿರ್ಮಿಸುತ್ತಿದ್ದಾರೆ ರಿಟರ್ನ್ ಗಿಫ್ಟ್ ಅನ್ನುವ ಟೈಟಲ್ ಹೊಂದಿರುವ ಈ ಚಿತ್ರ ಕಥೆಯ ಬಗ್ಗೆ ಸದ್ಯಕ್ಕೆ ಯಾರಿಗೂ ಹೇಳಿಲ್ಲ ವಿಕಾಸ್. ಆ ಸರ್ಪ್ರೈಸ್ ಏನೆಂಬುದನ್ನು ತೆರೆಯ ಮೇಲೆ ನೋಡಿ ಅನ್ನುವ ಮಾತು ವಿಕಾಸ್ ಅವರಿಂದ.

ಇದರ ಮಧ್ಯೆ ಇತ್ತೀಚೆಗೆ ತಬು ಗೆ ಪ್ರಿಯಾಂಕ ಚೋಪ್ರ ಅವರ ತಾಯಿಯಾಗಿ ನಟಿಸಿ ಎನ್ನುವ ಆಫರ್ ಬಂದಿತ್ತು. ಅದನ್ನು ಆಕೆ ತಿರಸ್ಕರಿಸಿದ್ದಲ್ಲದೆ ಸಾಕಷ್ಟು ಕೋಪ ಮಾಡಿಕೊಂಡು ಕೂಗಾಡಿದ್ದರು. ಆದರೆ ಈಗ ತನಗಿಂತ ಅತಿ ಕಿರಿಯ ಹೀರೋ ಚಿತ್ರದಲ್ಲಿ ನಟಿಸುವ ಅವಕಾಶ ದೊರೆತ ಕಾರಣ ಓಕೆ ಅಂದು ತಾನಿನ್ನು ಚಿಕ್ಕವಳು ಎನ್ನುವುದನ್ನು ಜಗತ್ತಿಗೆ ತೋರಲು ಹೊರಟಿದ್ದಾರೆ ತಬು.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬದುಕು ಹೇಗೇ ಕಟ್ಟಿಕೊಳ್ಳಬೇಕೆಂಬುದು ಹೆಣ್ಣಿನ ಆಯ್ಕೆ: ರಾಗಿಣಿ ದ್ವಿವೇದಿ

ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್: ದೇವರಕೊಂಡ, ಪ್ರಕಾಶ್ ರಾಜ್, ಶ್ರೀಲೀಲಾ ಸೇರಿದಂತೆ ಹಲವರಿಗೆ ಇಡಿ ಶಾಕ್‌

Amruthadhare: ಗೌತಮ್, ಭೂಮಿಕಾಗೆ ಮಗುವಾಯ್ತು: ವೀಕ್ಷಕರ ಕಾಮೆಂಟ್ ನೋಡಿದ್ರೆ ನಗುವೋ ನಗು

ಕೋರ್ಟ್ ಗೆ ಹೋಗೋ ಮುಂಚೆ ನಟ ದರ್ಶನ್ ಭರ್ಜರಿ ಪೂಜೆ

ಗಾಲಿ ಜನಾರ್ದನ ರೆಡ್ಡಿ ಪುತ್ರನ ಜತೆಗಿನ ಶ್ರೀಲೀಲಾ ನೃತ್ಯಕ್ಕೆ ಪಡ್ಡೆ ಹೈಕಳು ಫಿದಾ

Show comments