Select Your Language

Notifications

webdunia
webdunia
webdunia
webdunia

ತಂದೆಯ ಚಿತ್ರದಲ್ಲಿ ನಟಿಸಲಿರುವ ಶಾಹಿದ್

ತಂದೆಯ ಚಿತ್ರದಲ್ಲಿ ನಟಿಸಲಿರುವ ಶಾಹಿದ್
ಮುಂಬೈ , ಶನಿವಾರ, 15 ಡಿಸೆಂಬರ್ 2007 (13:25 IST)
ಪಂಕಜ ಕಪೂರ್ ನೂತನ ಚಿತ್ರವನ್ನು ನಿರ್ದೇಶಿಸುವ ಯೋಜನೆಯನ್ನು ಹೊಂದಿದ್ದು ಅದರಲ್ಲಿ ತನ್ನ ಪುತ್ರ ಶಾಹಿದ್ ಕಪೂರ್ ಅಭಿನಯಿಸಲಿದ್ದಾರೆ.

ಪಂಕಜ್ ಹೇಳುವ ಪ್ರಕಾರ, ಶಾಹಿದ್ ಪ್ರತಿಭೆಯನ್ನು ಸರಿಯಾಗಿ ಉಪಯೋಗಿಸಲು ಯಾರಿಗೂ ಸಾಧ್ಯವಾಗಿಲ್ಲ ಎಂದು ಹೇಳುವ ಪಂಕಜ್, ನಾನು ನನ್ನ ಪುತ್ರ ಶಾಹಿದ್‌ ಅಭಿನಯಿಸಿದ ಚಿತ್ರಕ್ಕೆ ಶೀಘ್ರದಲ್ಲೇ ನಿರ್ದೇಶನ ನೀಡಲಿದ್ದೇನೆ ಎಂದಿದ್ದಾರೆ.

ನಿರ್ದೇಶಕ ಮತ್ತು ನಟನಾಗಿ ನಾವುಬ್ಬರೂ ಜೊತೆಯಲ್ಲಿ ಕಾರ್ಯ ನಿರ್ವಹಿಸುವ ಯೋಜನೆಯನ್ನು ಹೊಂದಿದ್ದು ಅತ್ಯಂತ ಶೀಘ್ರದಲ್ಲೇ ಈ ಯೋಜನೆಯನ್ನು ಪ್ರಾರಂಭಿಸಲು ನಾವಿಬ್ಬರೂ ಪ್ರಯತ್ನಿಸುತ್ತಿದ್ದೇವೆ ಎಂದು ಪಂಕಜ್ ಪತ್ರಕರ್ತರಿಗೆ ತಿಳಿಸಿದ್ದಾರೆ.

ನಾನು ತುಂಬಾ ಚೂಸಿಯಾಗಿದ್ದು, ನಾನು ಮಾಡುವ ಕೆಲಸದಲ್ಲಿ ಏಕಾಗ್ರತೆಯ ನೀಡಲು ಇಷ್ಟಪಡುತ್ತೇನೆ ಎಂದಿರುವ ಶಾಹಿದ್, ನನಗೆ ಅನೇಕ ಉತ್ತಮ ಆಫರ್‌ಗಳು ಬರದಿದ್ದರೂ, ಬಂದಿರುವ ಆಫರ್‌ಗಳ್ಲಲಿ ಉತ್ತಮವಾದುದನ್ನು ಮಾತ್ರ ನಾನು ಆಯ್ಕೆ ಮಾಡುತ್ತೇನೆ ಎಂದು ಹೇಳಿದ್ದಾರೆ.

Share this Story:

Follow Webdunia kannada