Webdunia - Bharat's app for daily news and videos

Install App

ಡಿಫರೆಂಟ್ ಇಮೇಜ್ನಲ್ಲಿ ಇಮ್ರಾನ್ ಹಶ್ಮಿ

Webdunia
ಶನಿವಾರ, 29 ಜೂನ್ 2013 (10:59 IST)
PR
PR
ಸದಾ ಹುಡುಗಿಯರನ್ನು ಚುಡಾಯಿಸುತ್ತಾ, ಕಿಸ್ಸಿಂಗ್ ಸೀನ್ಗಳಲ್ಲಿ ಬೆಸ್ಟ್ ಎನಿಸಿಕೊಂಡ ಇಮ್ರಾನ್ ಹಶ್ಮಿ ಘನ್ಚಕ್ಕರ್ ಚಿತ್ರದಲ್ಲಿ ವಿದ್ಯಾಬಾಲನ್ ಅವರ ಪೆದ್ದು ಗಂಡನಾಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಒಂದೇ ತೆರನಾದ ಇಮೇಜ್ನಿಂದ ಹೊರಬರಲು ಪ್ರಯತ್ನಿಸಿದ್ದಾರೆ.

ಚಿತ್ರದಲ್ಲಿ ವಿದ್ಯಾಬಾಲನ್ ಪಾತ್ರ ಕ್ರಿಸ್ಮಸ್ ಟ್ರೀಯಂತೆ ಕಲರ್ಫುಲ್ ಆಗಿದೆ, ಚಿತ್ರದಲ್ಲಿ ಬಾಲಿವುಡ್ ಶೈಲಿಯಲ್ಲಿ ಆಕೆ ಕಂಗೊಳಿಸುತ್ತಾಳೆ ಎನ್ನುತ್ತಾ ನಗುತ್ತಾರೆ ಇಮ್ರಾನ್. ಇದುವರೆಗೆ ನಾನು ಚಾಕೊಲೇಟ್ ಬಾಯ್ ಪಾತ್ರವನ್ನು ಮಾಡಿಲ್ಲ, ಪ್ರತಿಚಿತ್ರದಲ್ಲೂ ವಿಭಿನ್ನವಾಗಿ ಕಾಣಿಸಿಕೊಳ್ಳಲು ಇಷ್ಟಪಡುತ್ತೇನೆ. ಚಿತ್ರದಲ್ಲಿ ಹೀರೋಯಿಸಂ ಮುಖ್ಯವಲ್ಲ, ಆ ಪಾತ್ರ ಎಷ್ಟು ಮನರಂಜನೆ ಮಾಡುತ್ತದೆ ಎಂಬುದಷ್ಟೇ ಮುಖ್ಯ. ನನ್ನ ಹಲವಾರು ಚಿತ್ರಗಳಿಗೆ ನೆಗೆಟಿವ್ ಪ್ರತಿಕ್ರಿಯೆ ಬಂದಿದ್ದಿದೆ. ಆದರೆ ನಾನು ಅದನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ, ಏಕೆಂದರೆ ಚಿತ್ರ ಬಾಕ್ಸ್ಆಫೀಸ್ನಲ್ಲಿ ಗೆಲ್ಲುವುದು ಮುಖ್ಯ, ಅದರ ಯಶಸ್ಸಿನ ಮೇಲೆ ಮುಂದಿನ ಚಿತ್ರದ ಅವಕಾಶ ನಿರ್ಧಾರವಾಗುತ್ತದಲ್ಲಾ.

ಮುಂದೆಯೂ ವಿಭಿನ್ನ ಹಾಗೂ ರಿಸ್ಕಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದೆಂದರೆ ನನಗೆ ಇಷ್ಟ. ಲುಕ್ ಬದಲಾವಣೆಗಿಂತ ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಮುಖ್ಯ ಎಂಬುದನ್ನು ನಂಬಿಕೊಂಡವನು ನಾನು. ಹಾಗಾಗಿ ಚಿತ್ರದಿಂದ ಚಿತ್ರಕ್ಕೆ ನಾನು ಲುಕ್ನಲ್ಲಿ ಹೆಚ್ಚು ಡಿಫರೆಂಟ್ ಆಗಿ ಕಾಣಿಸಿಕೊಳ್ಳಲು ಇಷ್ಟಪಡುವುದಿಲ್ಲ. ಹೆಚ್ಚೆಂದರೆ ನೀವು ನನ್ನನ್ನು ಫ್ರೆಂಚ್ ಬಿಯರ್ಡನಲ್ಲಿ ಕಾಣಬಹುದು ಎನ್ನುವ ಇಮ್ರಾನ್ ಹಶ್ಮಿ ದಿನಕ್ಕೆ ನಾಲ್ಕೈದು ಬಾರಿ ಜಿಮ್ ಮಾಡುತ್ತಾರಂತೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments