Select Your Language

Notifications

webdunia
webdunia
webdunia
webdunia

ಡರ್ಟಿ ಪಿಕ್ಚರ್ ಮುಗೀತು: ಇದೀಗ ಡರ್ಟಿ ಪಾಲಿಟಿಕ್ಸ್!

ಡರ್ಟಿ ಪಿಕ್ಚರ್ ಮುಗೀತು: ಇದೀಗ ಡರ್ಟಿ ಪಾಲಿಟಿಕ್ಸ್!
ಮುಂಬೈ , ಸೋಮವಾರ, 8 ಜುಲೈ 2013 (18:07 IST)
PR
PR
ಡರ್ಟಿ ಪಿಕ್ಚರ್ ಚಿತ್ರ ಬಂದಿದ್ದೂ ಆಯ್ತು, ಸಾಕಷ್ಟು ಹೆಸರು ಮಾಡಿದ್ದೂ ಆಯ್ತು. ಈ ಚಿತ್ರದ ಮೂಲಕ ವಿದ್ಯಾಬಾಲನ್ ಮತ್ತೊಂದು ಇನ್ನಿಂಗ್ಸ್ ಆರಂಭಿಸಿದ್ದೂ ಆಯ್ತು. ಇದೀಗ ಡರ್ಟಿ ಪೊಲಿಟಿಕ್ಸ್ನ ಕಾಲ.

ಅಂದರೆ ಬಾಲಿವುಡ್ನಲ್ಲಿ ಡರ್ಟಿ ಪಾಲಿಟಿಕ್ಸ್ ಹೆಸರಿನ ಹೊಸ ಚಿತ್ರವೊಂದು ಬರುತ್ತಿದೆ. ಅಚ್ಚರಿಯ ಸಂಗತಿಯೆಂದರೆ ಈ ಚಿತ್ರವೂ ನೈಜ ಘಟನೆಯನ್ನು ಆಧರಿಸಿದ್ದೇ. ದಿಢೀರ್ ಶ್ರೀಮಂತಳಾಗಬೇಕೆಂಬ ಆಸೆಗೆ ಬಿದ್ದು ರಾಜಕಾರಣಿಗಳ ಸಂಗ ಬೆಳೆಸಿ ಹತ್ಯೆಗೀಡಾದ ರಾಜಸ್ತಾನದ ನರ್ಸ ಭಂವಾರಿ ದೇವಿ ಅವರ ಜೀವನ ಆಧರಿಸಿದ ಚಿತ್ರ ಇದು ಎಂದಿದ್ದಾರೆ ನಿರ್ದೇಶಕರು.

ಈ ತಿಂಗಳ ಅಂತ್ಯದಲ್ಲೇ ಚಿತ್ರ ಸೆಟ್ಟೇರಲಿದೆಯಂತೆ. ಕೆ.ಸಿ. ಬೊಕಾಡಿಯ ನಿರ್ದೇಶನದ ಈ ಚಿತ್ರದ ಇನ್ನೊಂದು ವಿಶೇಷವೆಂದರೆ ನಾಸಿರುದ್ದೀನ್ ಶಾ ಹಾಗೂ ಮಲ್ಲಿಕಾ ಶೆರಾವತ್ ಒಟ್ಟಾಗಿ ನಟಿಸುತ್ತಿದ್ದಾರಂತೆ. ಮತ್ತಿನ ಹುಡುಗಿ ಮಲ್ಲಿಕಾ ಈ ಚಿತ್ರದಲ್ಲಿ ಏನು ಮೋಡಿ ಮಾಡಲಿದ್ದಾಳೆ ಎಂಬುದನ್ನು ಕಾದು ನೋಡಬೇಕಷ್ಟೇ.

ನಾಸಿರುದ್ದೀನ್ ಶಾ ಚಿತ್ರದಲ್ಲಿ ಸ್ವಯಂ ಸೇವಾ ಸಂಸ್ಥೆಯೊಂದರ ಮುಖ್ಯಸ್ಥನ ಪಾತ್ರ ನಿರ್ವಹಿಸಲಿದ್ದಾರೆ. ನಾಸಿರುದ್ದೀನ್ ಸರ್ ಜೊತೆ ಕೆಲಸ ಮಾಡುವುದು ನನ್ನ ಬಹಳ ವರ್ಷಗಳ ಕನಸು. ಅವರಂಥ ಕಲಾವಿದನಿಗೆ ಚಿತ್ರ ನಿರ್ದೇಶಿಸುವುದು ಸವಾಲಿನ ಕೆಲಸವೂ ಹೌದು. ನನ್ನ ಹಲವು ವರ್ಷಗಳ ಬಯಕೆ ಈಡೇರಿದ ಖುಷಿ ಈಗ ಸಿಕ್ಕಿದೆ ಎಂದಿದ್ದಾರೆ ನಿರ್ದೇಶಕ ಕೆ.ಸಿ. ಬೊಕಾಡಿಯಾ. ಡರ್ಟಿ ಪಿಕ್ಚರ್ನಂತೆ ಈ ಚಿತ್ರವೂ ಬಾಕ್ಸ್ಆಫೀಸ್ ಕೊಳ್ಳೆ ಹೊಡೆಯಲಿದೆಯೇ ಎಂಬುದನ್ನು ಕಾದುನೋಡಬೇಕಷ್ಟೇ.

Share this Story:

Follow Webdunia kannada