Select Your Language

Notifications

webdunia
webdunia
webdunia
webdunia

ಚಿತ್ರಗಳ ಪ್ರವರ್ತನೆಗೆ ವಿನೂತನ ವಿಧಾನ

ಚಿತ್ರಗಳ ಪ್ರವರ್ತನೆಗೆ ವಿನೂತನ ವಿಧಾನ
ಮುಂಬೈ , ಸೋಮವಾರ, 29 ಅಕ್ಟೋಬರ್ 2007 (18:52 IST)
IFM
ಸವಾರಿಯದ ಹಾಸಿಗೆ, ಸ್ನಾನದ ಮತ್ತು ದುಪ್ಪಟ್ಟು ಉತ್ಪನ್ನಗಳು ಮತ್ತು ಓಂ ಶಾಂತಿ ಓಂ ಬಟ್ಟೆಗಳನ್ನು ಕೊಳ್ಳಲು ಸಿದ್ಧರಾಗಿರಿ. ಈ ಹಬ್ಬದ ಋತುವಿನಲ್ಲಿ ಎರಡು ಮಹತ್ತರ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ಬಾಲಿವುಡ್ ಸಜ್ಜಾಗಿದೆ.

ನಿರ್ಮಾಪಕರು ಈ ಚಿತ್ರಗಳಿಗೆ ಅತ್ಯುತ್ತಮ ಪ್ರಚಾರ ನೀಡಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಚಿತ್ರದ ಉತ್ತೇಜನಕ್ಕೆ ಟಿವಿಗಳಲ್ಲಿ , ಬಸ್‌ಗಳ ಮೇಲೆ ಅಂಟಿಸಿದ ಪೋಸ್ಟರ್‌ಗಳು ರಾರಾಜಿಸುತ್ತಿವೆ. ಇಬ್ಬರು ಸ್ಟಾರ್ ಕಿಡ್ಸ್‌ಗಳಾದ ರಣಬೀರ್ ಮತ್ತು ಸೋನಮ್ ಕಪೂರ್ ಅವರ ಬೆಳ್ಳಿತೆರೆಯ ಪ್ರವೇಶಕ್ಕೆ ಅವಕಾಶ ಮಾಡಿರುವ ಸವಾರಿಯದ ಪೋಸ್ಟರ್ ಮುಂಬೈನ ರೀಗಲ್ ಸಿನೆಮಾ ಮಂದಿರದಲ್ಲಿ ಈಗಾಗಲೇ ಎದ್ದುಕಾಣುತ್ತಿದೆ.

ಹಬ್ಬದ ಋತುವಿನಲ್ಲಿ ಚಿತ್ರ ಬಿಡುಗಡೆ ಯಾವಾಗಲೂ ಒಳ್ಳೆಯದು. ಪ್ರತಿಯೊಬ್ಬರೂ ಕುಟುಂಬದ ಜತೆ ಚಿತ್ರ ನೋಡಲು ಬಯಸುತ್ತಾರೆ ಎಂದು ನ.23ರಂದು ಗೋಲ್ ಚಿತ್ರದ ವಿತರಣೆ ಹಕ್ಕು ಸಿದ್ಧಾರ್ಥ ರಾಯ್ ಕಪೂರ್ ಹೇಳುತ್ತಾರೆ.

ಅವರ ಯುಟಿವಿ ಮೋಷನ್ ಪಿಕ್ಟರ್ ಕೂಡ ಈಗಾಗಲೇ ಪ್ರಚಾರ ಆರಂಭಿಸಿದೆ. ಪ್ರಖ್ಯಾತ ಬ್ರಿಟನ್ ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ಜತೆ ಅದು ಒಪ್ಪಂದ ಮಾಡಿಕೊಂಡಿದೆ. ಗೋಲ್ ಸ್ಪರ್ಧೆಯ ಇಬ್ಬರು ಅದೃಷ್ಟಶಾಲಿ ವಿಜೇತರು ಮ್ಯಾಂಚೆಸ್ಟರ್ ಯುನೈಟೆಡ್ ಪಂದ್ಯವನ್ನು ವೀಕ್ಷಿಸಲು ಟಿಕೆಟ್ ಸಿಗುತ್ತದೆ.

ನಿರ್ಮಾಪಕರು ಚಿತ್ರಗಳ ಪ್ರವರ್ತನೆಗೆ ನೂತನ ವಿಧಾನಗಳನ್ನು ಹುಡುಕುತ್ತಿದ್ದಾರೆ. ಉದಾಹರಣೆಗೆ ಅಮೀರ್ ಖಾನ್ ಚಿತ್ರ ತಾರೆ ಜಮೀನ್ ಪಾರ್ ಪ್ರೊಮೊಗಳು ಸಿನೆಮಾ ಹಾಲ್‌ಗಳಲ್ಲಿ ಶುಕ್ರವಾರ ಬಿಡುಗಡೆ ಆಗುವ ಮುನ್ನವೇ ಚಿತ್ರದ ವೆಬ್‌ಸೈಟ್‌ನಲ್ಲಿ ದರ್ಶನ ನೀಡಿದ್ದಾರೆ.

ಸವಾರಿಯ ಮತ್ತು ಓಂ ಶಾಂತಿ ಓಂ ಚಿತ್ರಗಳು ಬಿಡುಗಡೆಯಾಗುವ ಮುನ್ನವೇ ಅನೇಕ ಮಾರುಕಟ್ಟೆ ಒಪ್ಪಂದಗಳಿಗೆ ಅವು ಸಹಿ ಹಾಕಿವೆ. ಭಾರತದಲ್ಲಿ ಕೂಡ ವಿವಿಧ ಬ್ರಾಂಡ್‌ಗಳು ಬಿಡುಗಡೆಯಾಗುವ ಚಿತ್ರಗಳ ಕಡೆ ಆಸಕ್ತಿಯಿಂದ ದಿಟ್ಟಿಸುತ್ತಾರೆ. ಏಕೆಂದರೆ ಹಬ್ಬದ ಋತುವಿನಲ್ಲಿ ಚಿತ್ರಗಳು ಅನೇಕ ಮಂದಿಯ ದೃಷ್ಟಿಗೆ ಬೀಳುತ್ತವೆ.

Share this Story:

Follow Webdunia kannada