Webdunia - Bharat's app for daily news and videos

Install App

ಗ್ಲಾಮರ್ಗಿಂತ ನಟನೆಯ ಟ್ಯಾಲೆಂಟ್ ಮುಖ್ಯ: ಸೋನಂ ಅಭಿಮತ

Webdunia
ಸೋಮವಾರ, 31 ಮಾರ್ಚ್ 2014 (14:37 IST)
ಧನುಷ್ ಜೊತೆ ನಟಿಸಿದ ರಂಜಾನ್ ಹಾಗೂ ಭಾಗ್ ಮಿಲ್ಕಾ ಭಾಗ್ ಚಿತ್ರಗಳ ಗೆಲುವು ಸೋನಂ ಕಪೂರ್ ಪಾಲಿಗೆ ವರವಾಗಿದೆಯಂತೆ. ಎರಡೂ ಚಿತ್ರಗಳಲ್ಲಿ ಆಕೆ ನಟಿಸಿದ ವಿಭಿನ್ನ ಪಾತ್ರಗಳಿಗೆ ಎಲ್ಲೆಡೆಯಿಂದ ಪ್ರಶಂಸೆ ಸಿಕ್ಕಿದ್ದೂ ಆಯ್ತು. ಇದಾದ ಬಳಿಕ ಬಾಲಿವುಡ್ ಪ್ರಸಿದ್ಧ ನಿರ್ದೇಶಕ-ನಿರ್ಮಾಪಕರ ಕಣ್ಣು ಸೋನಂ ಮೇಲೆ ಬಿದ್ದಿದೆ.

ಇದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಯಾವುದೇ ಚಿತ್ರ ಗೆದ್ದಾಗ ನಾಯಕನನ್ನು ಮಾತ್ರ ಹೊಗಳುತ್ತಾರೆ. ನಾಯಕಿ ಕಡೆಗಣನೆಯಾಗುವುದೇ ಹೆಚ್ಚು. ಆಕೆಯನ್ನು ವೀಕ್ಷಕರು ಗ್ಲಾಮರಸ್ ಆಗಿ ಮಾತ್ರ ಕಾಣುತ್ತಾರೆ ಎಂಬುದು ನನ್ನ ಭಾವನೆಯಾಗಿತ್ತು. ಅದನ್ನು ಸುಳ್ಳು ಮಾಡಿದ್ದೇನೆ ಎಂಬ ಖುಷಿ ನನ್ನದು. ಇನ್ನು ಮುಂದೆಯೂ ಹೊಸ ಉತ್ತಮ ರೀತಿಯ ಪಾತ್ರಗಳನ್ನು ಸಂಭಾವನೆ ಇಲ್ಲದೆಯೂ ನಟಿಸಲು ಒಪ್ಪಿಕೊಳ್ಳುತ್ತೇನೆ. ಈ ಮೂಲಕ ಜಗತ್ತು ನನ್ನನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡುತ್ತೇನೆ ಎಂದಿದ್ದಾರೆ ಸೋನಂ.

ಇತ್ತೀಚೆಗೆ ಖೂಬ್ಸೂರತ್ ಚಿತ್ರದ ಫಿಸಿಯೋಥೆರಪಿ ವೈದ್ಯರ ಪಾತ್ರವೊಂದನ್ನು ಒಪ್ಪಿಕೊಂಡೆ. ಆ ಪಾತ್ರ ನನಗೆ ಬಹಳ ಇಷ್ಟವಾಯಿತು. ಬಾಲಿವುಡ್ನ ಹಲವಾರು ಪ್ರಸಿದ್ದ ನಟಿಯರು ಗ್ಲಾಮರ್ ಇಲ್ಲ ಎಂಬ ಕಾರಣಕ್ಕೆ ಆ ಪಾತ್ರವನ್ನು ಒಪ್ಪಿಕೊಳ್ಳಲಿಲ್ಲ ಎಂದು ನಿರ್ದೇಶಕರು ಹೇಳಿದರು. ನನಗೆ ಇದರಿಂದ ತುಂಬಾ ನೋವಾಯಿತು. ಕೇವಲ ಗ್ಲಾಮರ್ನಿಂದ ಎಲ್ಲವೂ ಸಾಧ್ಯವಿಲ್ಲ. ಉತ್ತಮ ನಟನೆ ಇದ್ದರೆ ಮಾತ್ರ ಆಕೆ ಗುರುತಿಸಿಕೊಳ್ಳುತ್ತಾಳೆ.
ನಾನೀಗ ಆ ಪಾತ್ರಕ್ಕಾಗಿ ತಯಾರಿ ನಡೆಸುತ್ತಿದ್ದು ನನ್ನ ವೈದ್ಯ ಗೆಳತಿಯ ಬೆನ್ನು ಬಿದ್ದಿದ್ದೇನೆ. ಅವಳು ರೋಗಿಗಳನ್ನು ಹೇಗೆ ನೋಡಿಕೊಳ್ಳುತ್ತಾಳೆ, ಹೇಗೆ ವರ್ತಿಸುತ್ತಾಳೆ ಎಂಬುದನ್ನು ನೋಡಿ ಕೇಳಿ ಕಲಿಯುತ್ತಿದ್ದೇನೆ. ಇದು ಖಂಡಿತಾ ಚಿತ್ರಕ್ಕೆ ಸಹಕಾರಿಯಾಗಲಿದೆ ಎಂಬುದು ನನ್ನ ನಂಬಿಕೆ ಎಂದಿದ್ದಾರೆ ಸೋನಂ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿದೇಶಕ್ಕೆ ಪ್ರಯಾಣಿಸಲು ದರ್ಶನ್‌ಗೆ ಕೋರ್ಟ್‌ ಗ್ರೀನ್ಸ್‌ ಸಿಗ್ನಲ್‌, ಯಾಕೆ ಗೊತ್ತಾ

ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕೆ ಹೋಗಲಿರುವ ಸ್ಪರ್ಧಿಗಳು ಯಾರೆಲ್ಲಾ

ಪೋರ್ನ್‌ ಇಂಡಸ್ಟ್ರಿಗೆ ಎಂಟ್ರಿ ಕೊಟ್ರಾ ಅಸ್ಸಾಂ ಮೂಲದ ಬೆಡಗಿ, ವದಂತಿಗೆ ಈ ಫೋಸ್ಟ್‌ ಕಾರಣ

ಮತ್ತೇ ಬಣ್ಣದ ಲೋಕಕ್ಕೆ ವಾಪಸ್ಸಾದ ಮಾಜಿ ಸಚಿವೆ ಸ್ಮೃತಿ ಇರಾನಿ, ಫಸ್ಟ್‌ ಲುಕ್‌ ಫ್ಯಾನ್ಸ್ ಫಿದಾ

ಡಿ ಬಾಸ್ ಫ್ಯಾನ್ಸ್ ಮೆಸೇಜ್‌ಗೆ ಮತ್ತೇ ವಿಡಿಯೋ ಮಾಡಿ ಕ್ಷಮೆ ಕೋರಿದ ಮಡೆನೂರು ಮನು

Show comments