Select Your Language

Notifications

webdunia
webdunia
webdunia
webdunia

ಕ್ರಿಶ್-3 ನವೆಂಬರ್ 4ಕ್ಕೆ ಬಿಡುಗಡೆ

ಕ್ರಿಶ್-3 ನವೆಂಬರ್ 4ಕ್ಕೆ ಬಿಡುಗಡೆ
ಮುಂಬೈ , ಶನಿವಾರ, 29 ಜೂನ್ 2013 (10:55 IST)
PR
PR
ಬಹುನಿರೀಕ್ಷೆಯ ಹೃತಿಕ್ ರೋಶನ್ ಅಭಿನಯದ ಕ್ರಿಶ್-3 ಚಿತ್ರ ನವೆಂಬರ್ 4ರಂದು ತೆರೆಕಾಣಲಿದೆ. ಚಿತ್ರ ಮೂರರಂದು ಬಿಡುಗಡೆಯಾಗಬೇಕೆಂದು ನಿರ್ಧಾರವಾಗಿದ್ದರೂ ಅಂದು ದೀಪಾವಳಿ ಹಬ್ಬದ ಲಕ್ಷ್ಮಿಪೂಜೆ ಇರುವುದರಿಂದ ಅಂದು ಜನ ಮನೆಯಲ್ಲೇ ಇರುತ್ತಾರೆ ಎಂಬ ಕಾರಣಕ್ಕೆ ಸೋಮವಾರಕ್ಕೆ ಮುಂದೂಡಲಾಗಿದೆ.

ನಿರ್ದೇಶಕ ರಾಕೇಶ್ ರೋಶನ್ ಅವರ ಈ ನಿರ್ಧಾರವನ್ನು ವಾಣಿಜ್ಯ ವಿಶ್ಲೇಷಕರು ಕೂಡಾ ಸ್ವಾಗತಿಸಿದ್ದಾರೆ. ಚಿತ್ರಮಂದಿರದಲ್ಲಿ ಯಾವಾಗ ಬಿಡುಗಡೆಯಾಗುತ್ತದೆ ಎನ್ನುವುದಕ್ಕಿಂತ ರಾಕೇಶ್-ಹೃತಿಕ್ ಕಾಂಬಿನೇಷನ್ ಚಿತ್ರಗಳು ಎಂದೂ ಫೈಲ್ ಆಗಿಲ್ಲ. ಕಹೋ ನಾ ಪ್ಯಾರ್ ಹೈ, ಕೊಯಿ ಮಿಲ್ ಗಯಾ, ಕ್ರಿಶ್ ಇದಕ್ಕೆ ಉತ್ತಮ ಉದಾಹರಣೆ ಎಂದು ಅವರು ಹೇಳಿದ್ದಾರೆ.

ಪ್ರದರ್ಶಕರು ಹಿಂದೂ ಸಂಪ್ರದಾಯದ ಪ್ರಕಾರ ಹೊಸವರ್ಷದಂದು ಕ್ರಿಶ್ 3 ಬಿಡುಗಡೆಯಾಗುತ್ತಿರುವುದು ಸಂತಸ ತಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದು ರಾಕೇಶ್ ಅವರ ಸ್ಮಾರ್ಟ ನಡೆಯಾಗಿದ್ದು, ಹೊಸವರ್ಷದಂದು ದುಪ್ಪಟ್ಟು ಕಲೆಕ್ಷನ್ ಆಗುವುದು ಖಚಿತ ಎಂದು ಆಪರೇಷನ್ ಅಟ್ ಫನ್ ಸಿನಿಮಾದ ಮುಖ್ಯಸ್ಥ ಆನಂದ್ ವಿಶಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಕ್ರಿಶ್ 3 ದೀಪಾವಳಿ ಸಂಭ್ರಮಕ್ಕೊಂದು ಹೊಸ ಕಳೆ ತಂದುಕೊಡಲಿರುವುದು ಮಾತ್ರ ಸುಳ್ಳಲ್ಲ.

Share this Story:

Follow Webdunia kannada