Webdunia - Bharat's app for daily news and videos

Install App

ಕುಂಬ್ಳೆ ಬಾಲಿವುಡ್‌ಗೆ ಎಂಟ್ರಿ

Webdunia
PTI
ಮೇರಾ ಭಾಯ್ ನಾಟ್ ಔಟ್ ಚಿತ್ರದಲ್ಲಿ ದೂರದರ್ಶನ ನಟ ಎಜಾಜ್ ಖಾನ್ ಮತ್ತು ಮಂದಿರಾ ಬೇಡಿ ಮುಖ್ಯಪಾತ್ರದಲ್ಲಿದ್ದಾರೆ. ಈ ಪಾತ್ರದಲ್ಲಿ ಭಾರತದ ಕ್ರಿಕೆಟ್ ದಂತಕಥೆ ಎನಿಸಿರುವ ಮಾಜಿ ಟೆಸ್ಟ್ ನಾಯಕ, ಸ್ಪಿನ್ನರ್ ಅನಿಲ್ ಕುಂಬ್ಳೆ ಪುಟ್ಟ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ.

ಮೇರಾ ಭಾಯ್ ನಾಟ್ ಔಟ್ ಬಗ್ಗೆ, "ಇದು ಕ್ರಿಕೆಟ್‍‌ನ ಲಘು ಮಿಶ್ರಣ ಇರುವ ಒಂದು ನವಿರಾದ ಪ್ರೇಮಕತೆಯನ್ನು ಹೊಂದಿದ ಚಿತ್ರ. ಮಂದಿರಾ ಈ ಚಿತ್ರದಲ್ಲಿ ಮಧ್ಯಮವರ್ಗದ ಮಹಾರಾಷ್ಟ್ರೀಯನ್ ಹುಡುಗಿಯ ಪಾತ್ರ ವಹಿಸಿದ್ದಾರೆ, ಅವರು ಕುಂಬ್ಳೆಯ ಬಹುದೊಡ್ಡ ಅಭಿಮಾನಿಯಾಗಿರುತ್ತಾರೆ. ನಾನು ಕ್ರಿಕೆಟ್ ಬಗ್ಗೆ ಏನೂ ತಿಳಿದಿಲ್ಲದ, ಆಧುನಿಕ ಹಿನ್ನಲೆಯ ಹೃದ್ರೋಗ ತಜ್ಞನ ಪಾತ್ರ ನಿರ್ವಹಿಸುತ್ತಿದ್ದಾನೆ" ಎಂದು ಎಜಾಜ್ ಚಿತ್ರದ ಬಗ್ಗೆ ಹೇಳಿದ್ದಾರೆ.

ಈ ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವ ಅನಿಲ್ ಕುಂಬ್ಳೆ ಅವರೊಂದಿಗೆ ಚಿತ್ರೀಕರಣ ನಡೆಸಿದ ಅನುಭವದ ಬಗ್ಗೆ, ಭಾರತ ಟೆಸ್ಟ್ ತಂಡದ ಮಾಜಿ ಕಪ್ತಾನ ಅನಿಲ್ ನೇರ ನುಡಿಯ ಮತ್ತು ಉತ್ತಮ ಹಾಸ್ಯ ಪ್ರಜ್ಞೆಯುಳ್ಳ ವ್ಯಕ್ತಿ ಎಂದು ನುಡಿದರು.

ಮೇರಾ ಭಾಯಿ.. ಚಿತ್ರವನ್ನು ಜನರು ಮೆಚ್ಚುತ್ತಾರೆ ಎಂಬ ವಿಶ್ವಾಸ ಎಜಾಜ್‌ಗಿದೆ, "ಚಿತ್ರದುದ್ದಕ್ಕೂ ಜನ ನಗುತ್ತಾರೆ ಮತ್ತು ಮನಸ್ಸಿನಲ್ಲಿ ಸಂತೋಷವನ್ನು ತುಂಬಿಕೊಂಡು ಚಿತ್ರಮಂದಿರದಿಂದ ಹೊರಬರುತ್ತಾರೆ" ಎಂದು ಅವರು ಹೇಳಿದರು.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments