Webdunia - Bharat's app for daily news and videos

Install App

ಕಮಲ್ ಹಾಸನ್ ವಿಶ್ವರೂಪಂ 2 ಮೇಯಲ್ಲಿ ಬಿಡುಗಡೆ ?

Webdunia
ಮಂಗಳವಾರ, 25 ಫೆಬ್ರವರಿ 2014 (10:38 IST)
PR
ಕಮಲ ಹಾಸನ್ ಭಾರತೀಯ ಚಿತ್ರರಂಗದ ಅಗ್ರಮಾನ್ಯ ಕಲಾವಿದ. ಅವರ ಇತ್ತೀಚಿನ ಚಿತ್ರ ಎಂದರೆ ವಿಶ್ವರೂಪಂ. ಆ ಚಿತ್ರದ ಬಿಡುಗಡೆಗೆಂದು ಸಾಕಷ್ಟು ಹೋರಾಟ ನಡೆಸ ಬೇಕಾಯಿತು ಅವರು. ಈಗ ಆ ಚಿತ್ರ ಬಿಡುಗಡೆ ಆಗಿದ್ದು ಆಯಿತು, ಅದರ ಮತ್ತೊಂದು ಅವತರಣಿಕೆ ವಿಶ್ವರೂಪಂ- 2 ಚಿತ್ರವೂ ಈಗ ಸಿದ್ಧವಾಗಿ ಜನರತ್ತ ಬರಲು ಕಾಯುತ್ತಿದೆ. ಅದು ಮೇ ಒಂಬತ್ತರಂದು ಬಿಡುಗಡೆ ಆಗುತ್ತದೆ ಎಂದಿದ್ದಾರೆ ಕಮಲ್ .

ಮುಖ್ಯವಾಗಿ ಮೊದಲ ಸಿನಿಮಾದ ಅಭೂತಪೂರ್ವ ಯಶಸ್ಸಿನಿಂದ ಅವರ ಫ್ಯಾನ್ಗಳು ತಮ್ಮ ಮೆಚ್ಚಿನ ನಾಯಕನ ಮತ್ತೊಂದು ಚಿತ್ರ ಎಂದು ತೆರೆ ಕಾಣುತ್ತದೆಯೋ ಎಂದು ಕಾತುರದಿಂದ ಕಾಯುತ್ತಿದ್ದಾರೆ. ಅವರ ಆಸೆಯನ್ನು ಕಮಲ್ ನಿರಾಸೆ ಮಾಡದೆ ಚಿತ್ರದ ಬಿಡುಗಡೆಗೆ ಸಿದ್ಧ ಆಗಿದ್ದಾರೆ.

PR
ಆ ಚಿತ್ರವೂ ಮೇ ತಿಂಗಳಲ್ಲಿ ಬಿಡುಗಡೆ ಆಗುತ್ತಿದೆ. ಮೊದಲ ಭಾಗವನ್ನು ವಿದೇಶದಲ್ಲಿ ಶೂಟಿಂಗ್ ಮಾಡಿದ್ದ ಕಮಲ್ ಎರಡನೇ ಭಾಗವನ್ನು ಭಾರತದಲ್ಲಿ ಶೂಟಿಂಗ್ ಮಾಡಿದ್ದಾರಂತೆ. ಎರಡನೇ ಭಾಗದಲ್ಲಿ ಮನರಂಜನೆಗೂ ಸಹ ಹೆಚ್ಚಿನ ಆದ್ಯತೆ ನೀಡಲಾಗಿದೆ ಎನ್ನುವ ಮಾತನ್ನು ತಿಳಿಸಿದ್ದಾರೆ ಕಮಲ್.

ಮೊದಲ ಸಿನಿಮಾ ವಿಷಯಕ್ಕೆ ಸಂಬಂಧ ಪಟ್ಟಂತೆ ಸ್ವಲ್ಪ ಅಡ್ಡಿ ಆತಂಕ ಎದುರಿಸಿದ ಕಮಲ್ ಎರಡನೇ ಚಿತ್ರದಲ್ಲಿ ಅಂತಹ ಯಾವುದೇ ಸಮಸ್ಯೆ ಎದುರಾಗದೆ ಇರಲಿ ಎನ್ನುವ ಕಾರಣದಿಂದ ಅನೇಕ ಎಚ್ಚರಿಕೆಗಳನ್ನು ವಹಿಸಿದ್ದಾರಂತೆ. ಕಳೆದ ಚಿತ್ರದಲ್ಲಿ ನಟಿಸಿದ್ದ ಪೂಜಾ ಕುಮಾರ್, ಆಂಡ್ರಿಯ , ವಹಿದಾ ರೆಹ್ಮಾನ್,ರಾಹುಲ್ ಬೋಸ್ ಈ ಚಿತ್ರದಲ್ಲೂ ಲೀಡ್ ರೋಲ್ ಗಳಲ್ಲಿ ಇದ್ದಾರಂತೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬದುಕು ಹೇಗೇ ಕಟ್ಟಿಕೊಳ್ಳಬೇಕೆಂಬುದು ಹೆಣ್ಣಿನ ಆಯ್ಕೆ: ರಾಗಿಣಿ ದ್ವಿವೇದಿ

ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್: ದೇವರಕೊಂಡ, ಪ್ರಕಾಶ್ ರಾಜ್, ಶ್ರೀಲೀಲಾ ಸೇರಿದಂತೆ ಹಲವರಿಗೆ ಇಡಿ ಶಾಕ್‌

Amruthadhare: ಗೌತಮ್, ಭೂಮಿಕಾಗೆ ಮಗುವಾಯ್ತು: ವೀಕ್ಷಕರ ಕಾಮೆಂಟ್ ನೋಡಿದ್ರೆ ನಗುವೋ ನಗು

ಕೋರ್ಟ್ ಗೆ ಹೋಗೋ ಮುಂಚೆ ನಟ ದರ್ಶನ್ ಭರ್ಜರಿ ಪೂಜೆ

ಗಾಲಿ ಜನಾರ್ದನ ರೆಡ್ಡಿ ಪುತ್ರನ ಜತೆಗಿನ ಶ್ರೀಲೀಲಾ ನೃತ್ಯಕ್ಕೆ ಪಡ್ಡೆ ಹೈಕಳು ಫಿದಾ

Show comments