Webdunia - Bharat's app for daily news and videos

Install App

ಕತ್ರಿನಾ ಮೇಲೆ ಪ್ರಿಯಾಂಕರ ಮುಸುಕಿನ ದಾಳಿ

Webdunia
IFM
ಕರೀನಾ ಕಪೂರ್ ಜೊತೆ ಪ್ರಿಯಾಂಕ ಚೋಪ್ರಾ ಬಹಳ ಸಮಯದಿಂದ ವಾಗ್ಯುದ್ದದಲ್ಲಿ ತೊಡಗಿರುವುದು ತಿಳಿದಿರುವ ವಿಷಯ ಆದರೆ ಈಗ ಪ್ರಿಯಾಂಕ ಬಾಲಿವುಡ್ ಕ್ವೀನ್ ಪಟ್ಟವೇರುತ್ತಿರುವ ಕತ್ರಿನಾ ಕೈಫ್‌‌ರ ಮೇಲೆ ನಾಲಗೆ ಹರಿಬಿಟ್ಟಿದ್ದಾರೆ.

" ನನಗಾಗಿ ಪ್ರಮುಖ ಪಾತ್ರವನ್ನು ಹೊಂದಿರುವಂತಹ ಚಿತ್ರಗಳನ್ನು ಮಾಡುಲು ನಾನು ಇಷ್ಟಪಡುತ್ತೇನೆ. ಚಿತ್ರ ಕಮರ್ಷಯಲ್ ಸಕ್ಸಸ್ ಎನಿಸಿಕೊಳ್ಳಬಹುದು ಎಂಬ ನಿಟ್ಟಿನಲ್ಲಿ ನನಗಾಗಿ 4-5 ಸಾಂಗ್ ಮತ್ತು 15-20 ಸೀನ್‌ಗಳಿರುವ ಚಿತ್ರಗಳನ್ನು ಮಾಡುವುದರಲ್ಲಿ ನನಗೆ ಯಾವುದೇ ಆಸಕ್ತಿ ಇಲ್ಲ. ಇಂತಹ ಚಿತ್ರಗಳಲ್ಲಿ ನಟಿಸುವುದರಲ್ಲಿ ಮತ್ತು ಒಂದಾದ ಮೇಲೊಂದು ಹಿಟ್ ಚಿತ್ರ ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ. ಇದರಿಂದ ನಟಿಯಾಗಿ ನೀವು ಬೆಳೆಯುವುದು ಸಾಧ್ಯವಿಲ್ಲ"

" ನನ್ನ ಕೆಲವು ಚಿತ್ರಗಳು ಫ್ಲಾಫ್ ಆಗಿರಬಹುದು, ಆದರೆ ಅವುಗಳಲ್ಲಿ ನನಗೆ ಪ್ರಮುಖ ಪಾತ್ರವಿತ್ತು. ನನ್ನ ಪಾತ್ರವು ಕ್ಷುಲ್ಲಕಾಗಿರುವಂತಹ ಮತ್ತು ಆ ಚಿತ್ರದಲ್ಲಿ ಚೆನ್ನಾಗಿ ಕಾಣಿಸುವುದೊಂದೆ ನನ್ನ ಕೆಲಸವಾಗಿರುವಂತಹ ಚಿತ್ರಗಳನ್ನು ನಾನು ಹಿಂದೆಯೂ ಮಾಡಿಲ್ಲ ಮತ್ತು ಮುಂದೆಂದೂ ಮಾಡುವುದಿಲ್ಲ" ಎಂದು ಪ್ರಿಯಾಂಕ ಹೇಳಿದ್ದಾರೆ.

ಈ ಎಲ್ಲಾ ಮಾತುಗಳು ಕತ್ರಿನಾರ ಕಡೆ ಬೆಟ್ಟು ಮಾಡುತ್ತೇವೆ, ಅವರು 7 ಸತತ ಹಿಟ್ ಚಿತ್ರಗಳನ್ನು ನೀಡಿದ್ದಾರೆ ಮತ್ತು ನಮಸ್ತೆ ಲಂಡನ್‌ನಿಂದ ಹಿಡಿದು ಸಿಂಗ್ ಈಸ್ ಕಿಂಗ್‌ವರೆಗೆ ಎಲ್ಲಾ ಚಿತ್ರಗಳಲ್ಲೂ ಕತ್ರಿನಾರಿಗೆ ಹೇಳಿಕೊಳ್ಳವಂತಹ ಉತ್ತಮ ನಟನಾವಕಾಶದ ಪಾತ್ರಗಳಿರಲಿಲ್ಲ. ಆ ಚಿತ್ರಗಳಿಗೆ ಗ್ಲಾಮರ್ ಲುಕ್ ಕೊಡುವುದಷ್ಟೇ ಅವರ ಕಾರ್ಯವಾಗಿತ್ತು.

ಪ್ರಿಯಾಂಕ 2002ರಲ್ಲಿ ಬಾಲಿವುಡ್‌ಗೆ ಕಾಲಿರಿಸಿದರೆ, ಕತ್ರಿನಾ ಒಂದು ವರ್ಷದ ನಂತರ 2003ರಲ್ಲಿ ಬೂಮ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಕುತೂಹಲಕಾರಿಯಾಗಿ ಕತ್ರಿನಾರ ಬೆನ್ನಿಗೆ 8 ಹಿಟ್ ಚಿತ್ರಗಳಿದ್ದರೆ, ಪ್ರಿಯಾಂಕರ ಆರು ಚಿತ್ರಗಳಷ್ಟೇ ಪ್ರೇಕ್ಷಕರ ಮನ ಗೆದ್ದಿವೆ.
IFM
ಯುಟಿವಿಗಾಗಿ ಈ ಇಬ್ಬರೂ ನಟಿಯರು ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಮೂಲಗಳ ಪ್ರಕಾರ ಕತ್ರಿನಾರಿಗಿಂತ ಪ್ರಿಯಾಂಕ ಪಡೆಯುತ್ತಿರುವ ಸಂಭಾವನೆ ತೀರಾ ಕಡಿಮೆ.

ಪ್ರಸ್ತುತ ಪ್ರಿಯಾಂಕರ ಫಾಶನ್ ಮತ್ತು ದೋಸ್ತಾನ ಚಿತ್ರಗಳ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕತ್ರಿನಾರ ಯುವರಾಜ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments