Select Your Language

Notifications

webdunia
webdunia
webdunia
webdunia

ಕಂಗಾನಾ-ಅಧ್ಯಯನ್ ರೋಮಾನ್ಸ್

ಕಂಗಾನಾ-ಅಧ್ಯಯನ್ ರೋಮಾನ್ಸ್
IFM
ಕಂಗನಾ ರಾಣಾವತ್ ಮತ್ತು ಅಧ್ಯಯನ್ ಸುಮನ್ ರೊಮಾನ್ಸ್ ಜಾರಿಯಲ್ಲಿದೆ. ರಾಜ್ 2 ಸೆಟ್‌ನಲ್ಲಿ ಭೇಟಿಯಾದ ಇವರಿಬ್ಬರೂ ಒಬ್ಬರನ್ನೊಬ್ಬರು ಇಷ್ಟಪಡತೊಡಗಿದರು. ಅಷ್ಟೇ ಆಗಿದ್ದರೆ ನಮಗೇನು ಪಡಲಿ ಬಿಡಿ ಅನ್ನಬಹುದಿತ್ತು ಆದರೆ ಇವರಿಬ್ಬರ ಪ್ರೇಮಸಲ್ಲಾಪ ರಾಜ್ ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.

ರಾಜ್ 2 ಯೂನಿಟ್‌ ಸದಸ್ಯನೊರ್ವ ಹೇಳುವಂತೆ ಕಂಗನಾ ಮತ್ತು ಅಧ್ಯಯನ್ ವ್ಯಾನಿಟಿ ವ್ಯಾನ್‌ನಲ್ಲಿ ಗಂಟೆಗಟ್ಟಲೆ ಜೊತೆಗೆ ಕಳೆಯುತ್ತಿದ್ದರು. ಅವರಿಗೆ ಚಿತ್ರೀಕರಣದ ಯೋಚನೆಯು ಇರುತ್ತಿರಲಿಲ್ಲ. ಒಂದು ದಿನ ಚಿತ್ರದ ಇನ್ನೊರ್ವ ನಾಯಕ ಇಮ್ರಾನ್ ಹಶ್ಮಿ ಅವರೊಂದಿಗೆ ಕಂಗಾನ ಮತ್ತು ಅಧ್ಯಯನ್ ಒಂದು ಸೀನ್ ನೀಡಬೇಕಾಗಿತ್ತು.

ಇಮ್ರಾನ್ ಸೆಟ್‌ನಲ್ಲಿ ತಯಾರಾಗಿ ನಿಂತಿದ್ದರು. ವ್ಯಾನಿಟಿ ವ್ಯಾನ್‌ನಲ್ಲಿ ಜೊತೆಗಿದ್ದ ಕಂಗಾನಾ ಮತ್ತು ಅಧ್ಯಯನ್‌ರ ಬರುವಿಕೆಯನ್ನು ನಿರೀಕ್ಷಿಸಲಾಗುತಿತ್ತು. ಅವರಿಗಾಗಿ ಕಾಯುತ್ತಾ ಎರಡು ಗಂಟೆ ಕಳೆದು ಹೋಯಿತು. ಇಮ್ರಾನ್ ಹಿರಿಯ ನಟ, ಅಧ್ಯಯನ್ ಮತ್ತು ಕಂಗನಾರಿಗಿಂತ ದೊಡ್ಡ ಸ್ಟಾರ್ ಕೂಡ ಆಗಿದ್ದಾರೆ, ಕೋಪಗೊಂಡ ಅವರು ಸೆಟ್‌ನಿಂದ ಹೊರ ನಡೆದರು.

ಇನ್ನೊಂದು ದೃಶ್ಯದಲ್ಲಿ ಕಂಗನಾರ ಚಿತ್ರವಿರುವ ಪೈಟಿಂಗ್‌ಗೆ ಇಮ್ರಾನ್ ಹಶ್ಮಿ ಬೆಂಕಿಹಚ್ಚಬೇಕಿತ್ತು. ಈ ವಿಷಯ ತಿಳಿದ ಅಧ್ಯಯನ್ ಕಂಗನಾರ ಪೈಂಟಿಂಗ್ ಅನ್ನು ಎತ್ತಿಕೊಂಡು ಮನೆಗೆ ಕೊಂಡೊಯ್ದರು. ಏಕೆಂದರೆ ಅವರಿಗೆ ಕಂಗನಾರ ಪೈಟಿಂಗ್‌ಗೆ ಬೆಂಕಿಹಚ್ಚುವುದು ಇಷ್ಟವಿರಲಿಲ್ಲ. ಕೆಲವು ಮಂದಿಯಂತೂ ಕಂಗನಾ ಮತ್ತು ಅಧ್ಯಯನ್‌ರ ರೊಮಾನ್ಸ್ ಕುರಿತೇ ಒಂದು ಚಿತ್ರ ಮಾಡಬಹುದು ಎನ್ನತೊಡಗಿದ್ದಾರೆ.
webdunia
IFM

Share this Story:

Follow Webdunia kannada