Select Your Language

Notifications

webdunia
webdunia
webdunia
webdunia

ಐಶ್ ಹಿಂದಿಕ್ಕಿದ ಕತ್ರಿನಾ ಈಗ ಏಷ್ಯಾದ ನಂ.1 ಸೆಕ್ಸೀ ಮಹಿಳೆ!

ಐಶ್ ಹಿಂದಿಕ್ಕಿದ ಕತ್ರಿನಾ ಈಗ ಏಷ್ಯಾದ ನಂ.1 ಸೆಕ್ಸೀ ಮಹಿಳೆ!
IFM
ಕತ್ರಿನಾ ಕೈಫ್ ಏಷ್ಯಾದ ಅತೀ ಸೆಕ್ಸೀ ಮಹಿಳೆಯರ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿದ್ದಾಳೆ. ಆ ಮೂಲಕ, ಐಶ್ವರ್ಯಾ ರೈಯನ್ನೂ ಹಿಂದಿಕ್ಕಿದ್ದಾಳೆ.

ಏಷ್ಯಾದ ಟಾಪ್ ಟೆನ್ ಸೆಕ್ಸೀ ಮಹಿಳೆಯರ ಪೈಕಿ ಎಂಟು ಮಂದಿ ಭಾರತೀಯರೇ ಆಗಿದ್ದರೂ, ಉಳಿದೆರಡು ಮಂದಿ ಮಾತ್ರ ಹೊರದೇಶದವರು. ಹಾಗಾಗಿ ಭಾರತ ಏಷ್ಯಾದಲ್ಲಿ ಅತೀ ಹೆಚ್ಚು ಸೆಕ್ಸೀ ಸುಂದರ ಮಹಿಳೆಯರನ್ನು ಹೊಂದಿದ ದೇಶ ಎಂದು ಸಾಬೀತಾಗಿದೆ!!!

ನಂ.1 ಸ್ಥಾನ ಕತ್ರಿನಾಗೆ ದಕ್ಕಿದರೆ, ಎರಡನೇ ಸ್ಥಾನದಲ್ಲಿ ಪ್ರಿಯಾಂಕಾ ಛೋಪ್ರಾ ಇದ್ದಾರೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ಸ್ಲಂಡಾಗ್ ಮಿಲಿಯನೇರ್ ಖ್ಯಾತಿಯ ಫ್ರೀದಾ ಪಿಂಟೋ, ಬ್ರಿಟಿಷ್ ಟಿವಿ ತಾರೆ ಲೈಲಾ ರಾಸ್, ಕರೀನಾ ಕಪೂರ್, ಬಿಪಾಶಾ ಬಸು, ಲಾರಾ ದತ್ತಾ, ಐಶ್ವರ್ಯಾ ರೈ ಬಚ್ಚನ್, ಪಾಕಿಸ್ತಾನದ ನಟಿ ಮೇವಿಶ್ ಹಯಾತ್ ಹಾಗೂ 10ನೇ ಸ್ಥಾನದಲ್ಲಿ ದೀಪಿಕಾ ಪಡುಕೋಣೆ ಸ್ಥಾನ ಪಡೆದಿದ್ದಾರೆ.
webdunia
IFM


ಆದರೆ, ಪ್ರತಿ ಬಾರಿಯೂ ಕತ್ರಿನಾ ಕೈಫ್ ಎಂಬ ಸ್ನಿಗ್ಧ ಚೆಲುವೆ ಸೆಕ್ಸೀ ಮಹಿಳೆಯೆಂಬ ಬಿರುದು ಪಡೆವಾಗಲೂ ಸ್ವತಃ ಆಕೆ ಆಶ್ಚರ್ಯ ವ್ಯಕ್ತಪಡಿಸುತ್ತಾಳೆ. ಅದು ಹೇಗೆ ನಾನು ಸೆಕ್ಸೀ ಮಹಿಳೆಯೆಂದು ಜನರು ನನ್ನನ್ನು ಗುರುತಿಸುತ್ತಾರೋ ಅರ್ಧವಾಗಲ್ಲ. ನಾನು ಸುಂದರಿಯೇ ಅಲ್ಲ. ನನಗಿಂತ ನನ್ನ ಸಹೋದರಿಯರೇ ಸುಂದರಿಯರು. ಸೆಕ್ಸೀ ಬಿರುದು ನಾನೇನೂ ಬೇಕಂತಲೇ ಪಡೆದ ಬಿರುದಲ್ಲ ಎಂದು ಆಕೆ ಹೇಳುತ್ತಾಳೆ.

ಬ್ರಿಟನ್‌ನಲ್ಲಿ ಹುಟ್ಟಿ ಬೆಳೆದಾಗ, ಅಲ್ಲಿ ಸ್ಕೂಲಿಗೆ ಹೋಗುತ್ತಿದ್ದಾಗಲೂ ಅಷ್ಟೆ, ನನ್ನನ್ನು ಒಬ್ಬನೇ ಒಬ್ಬ ಹುಡುಗನೂ ಕಣ್ಣೆತ್ತಿ ನೋಡುತ್ತಿರಲಿಲ್ಲ. ಲೈನು ಹೊಡೆಯುತ್ತಿರಲಿಲ್ಲ. ನನಗಲ್ಲಿ ಯಾವೊಬ್ಬ ಬಾಯ್‌ಫ್ರೆಂಡ್‌ಗಳೂ ಇರಲಿಲ್ಲ. ನನ್ನ ಜೊತೆಗೆ ಫ್ರೆಂಡ್‍ಶಿಪ್ ಮಾಡಲು ಯಾವ ಹುಡುಗರೂ ಹತ್ತಿರ ಬರುತ್ತಿರಲಿಲ್ಲ. ನಾನೇ ಸುಂದರ ಹುಡುಗರನ್ನು ನೋಡುತ್ತಿದ್ದೆ. ಆದರೆ ಅವರು ನನ್ನೆಡೆ ನೋಡುತ್ತಲೇ ಇರಲಿಲ್ಲ ಎಂದು ಕತ್ರಿನಾ ಹೇಳುತ್ತಾಳೆ.

ಆದರೆ ಈ ಬಾರಿ ಮತ್ತೆ ನಂ.1 ಸೆಕ್ಸೀ ಮಹಿಳೆ ಪಟ್ಟ ತೊಟ್ಟಿದ್ದಾಳೆ. ಆದರೆ ಅದೇ ಸಂದರ್ಭ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಪದೇ ಪದೇ ಕತ್ರಿನಾಳ ರಕ್ತಕಣಗಳಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆಯಾಗುತ್ತಲೇ ಸಾಗುತ್ತಿದೆ. ಮೊನ್ನೆ ಶುಕ್ರವಾರ ಹಾಗೂ ಶನಿವಾರ ಎರಡು ದಿನ ಸಲ್ಮಾನ್ ಜೊತೆಗೆ ಆಥನ ಕ್ಲೋಸ್ ಫ್ರೆಂಡ್ ಒಬ್ಬರ ಮಗಳ ಮದುವೆಯಲ್ಲಿ ಇದ್ದುದರಿಂದ ವಿಶ್ರಾಂತಿ ಸಾಕಾಗದೆ ಕತ್ರಿನಾ ಅನಾರೋಗ್ಯ ಹೆಚ್ಚಾಗಿತ್ತು. ಇದರಿಂದ ಭಾನುವಾರ ಆಸ್ಪತ್ರೆಗೆ ದಾಖಲಾದ ಕತ್ರಿನಾಗೆ ವೈದ್ಯರು ಹಾಸಿಗೆಯಿಂದ ಮಿಸುಕಾಡದಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada