ಆದರೆ ಆ ಪಾತ್ರದಲ್ಲಿ ನಾನು ನಟಿಸಲಾರೆ ಎಂದು ಹೇಳಿ ಕ್ಷಮಿಸಿ ಎಂದು ಮಣಿರತ್ನಂ ಅವರ ಬಳಿ ಕ್ಷಮೆ ಯಾಚಿಸಿದ್ದಾರೆ ಈ ಚೆಲುವೆ. ಅತ್ತೆ ಜಯಾ ಬಚ್ಚನ್ಅವರ ಸಲಹೆಯ ಅನ್ವಯ ತನ್ನ ಮಗಳು ಆರಾಧ್ಯಳ ಆರೈಕೆಗಾಗಿ ಈಕೆ ಸಿನಿಮಾದಲ್ಲಿ ನಟಿಸುವುದಕ್ಕೆ ಸ್ವಲ್ಪ ಕಾಲ ವಿರಾಮ ತೆಗೆದುಕೊಳ್ತಿದ್ದಾರೆ.
ಈಗ ಆ ಜಾಗಕ್ಕೆ ಅಸಿನ್ ಬಂದಿದ್ದಾಳೆ. ಶಿವಮಣಿ ಚಿತ್ರದಲ್ಲಿ ನಾಗಾರ್ಜುನ ಜೊತೆಯಲ್ಲಿ ಅಸಿನ್ ನಟಿಸಿದ್ದಳು.ಹತ್ತು ವರ್ಷದ ಬಳಿಕ ಈ ಜೋಡಿ ಮತ್ತೆ ಒಂದಾಗುತ್ತಿದ್ದಾರೆ . ಮಹೇಶ್ ಬಾಬು ಜೊತೆಗೆ ಶ್ರುತಿ ಹಾಸನ್ ನಟಿಸುತ್ತಿದ್ದಾಳೆ. ಈ ಚಿತ್ರಕ್ಕೆ ಸಂಬಂಧಪಟ್ಟ ಕೆಲಸಗಳು ಸದ್ಯದಲ್ಲೇ ಆರಂಭ ಆಗಲಿದೆ ಎನ್ನುವುದು ಸದ್ಯದ ಸುದ್ದಿ!