Webdunia - Bharat's app for daily news and videos

Install App

ಐಟಂ ಸಾಂಗಿನಲ್ಲಿ ಕಾಣಿಸಿಕೊಳ್ಳುತ್ತಿಲ್ಲ: ಐಶ್ವರ್ಯ ಸ್ಪಷ್ಟನೆ

Webdunia
ಬುಧವಾರ, 2 ಏಪ್ರಿಲ್ 2014 (15:01 IST)
ಐಶ್ವರ್ಯ ರೈ ಸಂಜಯ್ ಲೀಲಾ ಬನ್ಸಾಲಿ ಅವರ ಐಟಂ ಹಾಡೊಂದಕ್ಕೆ ಹೆಜ್ಜೆ ಹಾಕುತ್ತಾರೆ ಎಂಬ ಸುದ್ದಿ ವಾರದ ಹಿಂದೆ ಹಬ್ಬಿತ್ತು. ಈ ಮೂಲಕ ಐಶ್ವರ್ಯಗೆ ಭರ್ಜರಿ ರಿ ಎಂಟ್ರಿ ಸಿಕ್ಕಂತಾಗುತ್ತದೆ ಎಂದೂ ಮಾಧ್ಯಮದಲ್ಲಿ ಪ್ರಸಾರವಾಗಿತ್ತು. ಆದರೆ ಈ ಸುದ್ದಿ ಸುಳ್ಳು, ಇದು ಕೇವಲ ಗಾಸಿಪ್ ಮಾತ್ರ ಎಂದು ಸಂಜಯ್ ಲೀಲಾ ಬನ್ಸಾಲಿ ಅವರೇ ಸ್ಪಷ್ಟಪಡಿಸಿದ್ದಾರೆ.

ಐಶ್ವರ್ಯ ರೈ ತಾಯ್ತನದ ಬ್ಯುಸಿಯಲ್ಲಿ ಇರುವುದರಿಂದ ಬಾಲಿವುಡ್ ಹಾಗೂ ಐಶ್ ಅಭಿಮಾನಿಗಳು ಆಕೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದಂತೂ ನಿಜ. ಹಾಗೆಂದು ಆಕೆ ನನ್ನ ಚಿತ್ರದ ಐಟಂ ಹಾಡಿಗೆ ನಟಿಸುತ್ತಿಲ್ಲ ಎಂದು ಬನ್ಸಾಲಿ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಐಶ್ವರ್ಯ ಬನ್ಸಾಲಿ ಅವರ ಗುಝಾರಿಶ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಐಶ್ವರ್ಯ ನನ್ನ ಚಿತ್ರ ರಾಮ್ ಲೀಲಾದ ಐಟಂ ಹಾಡಿಗೆ ಹೆಜ್ಜೆ ಹಾಕುತ್ತಿಲ್ಲ. ಐಟಂ ಹಾಡಿಗೆ ಮೊದಲು ಸೋನಾಕ್ಷಿ ಸಿನ್ಹಾ ಹಾಗೂ ಮಾಧುರಿ ದೀಕ್ಷಿತ್ ಅವರ ಹೆಸರು ಕೇಳಿ ಬಂದಿತ್ತು. ಈಗ ಅದಕ್ಕೆ ಐಶ್ವರ್ಯ ಹೆಸರೂ ಸೇರಿದೆ. ಇವೆಲ್ಲವೂ ಕೇವಲ ವದಂತಿಗಳೇ ಹೊರ ನಿಜ ಸಂಗತಿಯಲ್ಲ ಎಂದು ಸ್ವತಃ ಬನ್ಸಾಲಿ ಅವರೇ ಹೇಳಿಕೊಂಡಿದ್ದಾರೆ. ಮಗಳು ಆರಾಧ್ಯಗಳಿಗೆ ಐಶ್ವರ್ಯ ಮೊದಲ ಆದ್ಯತೆ ನೀಡುತ್ತಾರೆಯೇ ಹೊರತು ಐಟಂ ಹಾಡಿಗಲ್ಲ ಎಂದು ಆಕೆಯ ಆಪ್ತರೊಬ್ಬರು ಹೇಳಿಕೊಂಡಿದ್ದಾರೆ. ಹಿಮೇಶ್ ರೇಶಮಿಯಾ ನಿರ್ಮಾಣದ ರಿಮೇಕ್ ಚಿತ್ರ 1983ರಲ್ಲಿ ಬಿಡುಗಡೆಗೊಂಡ ಮಾಸೂಮ್ ಚಿತ್ರದಲ್ಲಿ ಐಶ್ವರ್ಯ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆ ಚಿತ್ರದ ಕಥೆಯನ್ನು ಐಶ್ವರ್ಯ ಇಷ್ಟಪಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಮಾಹಿತಿಯ ಸತ್ಯಾಸತ್ಯತೆಗೆ ಇನ್ನೊಂದಷ್ಟು ಕಾಲ ಕಾಯಬೇಕಷ್ಟೇ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಕ್ರಮ ಚಿನ್ನ ಸಾಗಣೆ ಪ್ರಕರಣ: ಬೆಚ್ಚಿಬೀಳಿಸುತ್ತೆ ರನ್ಯಾ ರಾವ್‌ ಮಾಸ್ಟರ್ ಮೈಂಡ್‌

ಎಕ್ಕ ಬಿಡುಗಡೆಗೆ ದಿನಗಣನೆ ಮಾಡುತ್ತಿರುವಾಗಲೇ ಮಂತ್ರಾಲಯಕ್ಕೆ ಯುವ ರಾಜ್‌ಕುಮಾರ್ ಭೇಟಿ

ಶೆಫಾಲಿ ಮರಣದ ಕೆಲ ಗಂಟೆಗಳಲ್ಲೇ ನಾಯಿ ಜತೆ ಪರಾಗ್ ವಾಕಿಂಗ್‌: ಕಾರಣ ಬಿಚ್ಚಿಟ್ಟ ಆಪ್ತ ಸ್ನೇಹಿತ

ಪೃಥ್ವಿ ಭಟ್ ರನ್ನು ಕ್ಷಮಿಸಿದ್ರಾ ಅಪ್ಪ, ಅಮ್ಮ: ಮದುವೆ ಬಳಿಕ ಏನಾಗಿದೆ ಎಲ್ಲವೂ ಬಹಿರಂಗ

ಪಂಜಾಬಿ ನಟಿ ತಾನಿಯಾ ಮಲತಂದೆ ಮೇಲೆ ಹಲ್ಲೆ, ಆರೋಗ್ಯ ಸ್ಥಿತಿ ಗಂಭೀರ

Show comments