Webdunia - Bharat's app for daily news and videos

Install App

ಎವರ್‌ಗ್ರೀನ್ ಹೀರೊ ದೇವಾನಂದ್

Webdunia
ಮಂಗಳವಾರ, 30 ಅಕ್ಟೋಬರ್ 2007 (18:43 IST)
IFMIFM
ಅವರನ್ನು ಭಾರತ ಚಿತ್ರರಂಗದ ಎವರ್‌ಗ್ರೀನ್ ಸೂಪರ್ ಸ್ಟಾರ್ ಎಂದು ಕರೆಯುತ್ತಾರೆ. 40ರ ದಶಕದಲ್ಲಿ ದೇವಾನಂದ್ ಚಿತ್ರರಂಗದ ವೃತ್ತಿಜೀವನ ಆರಂಭಿಸಿದರು. 6 ದಶಕಗಳ ಬಳಿಕವೂ ಅವರು ಇನ್ನೂ ಕ್ರಿಯಾಶೀಲರಾಗಿದ್ದು ತಮ್ಮ ಚಿತ್ರಗಳಲ್ಲಿ ಮುಳುಗಿದ್ದಾರೆ,

ಅವರ ಆತ್ಮಕಥೆ ರೋಮಾನ್ಸಿಂಗ್ ವಿತ್ ಲೈಫ್‌ನಲ್ಲಿ ಗುರುದಾಸಪುರದ ಬಾಲಕನೊಬ್ಬನ ಜೀವನದ ತಿರುವುಗಳು ಭಾರತೀಯ ಚಿತ್ರರಂಗದ ನಟನನ್ನಾಗಿ ಹೇಗೆ ಪರಿವರ್ತಿಸಿತೆಂಬುದನ್ನು ದೇವಾನಂದ್ ಹಂಚಿಕೊಂಡಿದ್ದಾರೆ. ಸೂಪರ್ ಸ್ಟಾರ್ ಜೀವನದ ಹಲವಾರು ಚೇತೋಹಾರಿ ವಿದ್ಯಮಾನಗಳ ತುಣುಕುಗಳನ್ನು ಇಂಡಿಯ ಎಎಫ್‌ಎಂ ಬಿಚ್ಚಿಟ್ಟಿದೆ.

" ಝಿದ್ದಿ ಚಿತ್ರ ನನ್ನ ವೃತ್ತಿಜೀವನದ ಮೈಲಿಗಲ್ಲು. ನನ್ನನ್ನು ಚಿತ್ರನಟನಾಗಿ ಬೆಳಕಿಗೆ ತಂದ ಮೊದಲ ಚಿತ್ರ ಝಿದ್ದಿ. ಆ ಚಿತ್ರವು ಅಶೋಕ್ ಕುಮಾರ್ ಮತ್ತು ಅವರ ಕಿರಿಯ ಸೋದರ ಕಿಶೋರ್ ಕುಮಾರ್ ಅವರಿಗೆ ಅತೀ ಸಾಮೀಪ್ಯವನ್ನು ನನಗೆ ಒದಗಿಸಿಕೊಟ್ಟಿತು.

ಕಿಶೋರ್ ಕುಮಾರ್ ತಮ್ಮ ಹುಟ್ಟೂರಾದ ಕಾಂಡ್ವಾದಿಂದ ಕುರ್ತಾ ಪೈಜಾಮಾಗಳಲ್ಲಿ ಆಗಮಿಸಿದ್ದರು. ಅವರ ಮಧುರ ಧ್ವನಿಯು ಸ್ವಲ್ಪ ವರ್ಷ ಕಳೆದ ಬಳಿಕ ಇಡೀ ವಿಶ್ವವನ್ನೇ ಮೋಡಿ ಮಾಡಿತು. ಅವರ ಪ್ರಪ್ರಥಮ ಗೀತೆಯನ್ನು ಝಿದ್ದಿ ಚಿತ್ರದಲ್ಲಿ ನಾನು ಹಾಡಿದ್ದಾಗಿ ಅವರು ಹೇಳಿದರು.

" ಮರ್ನೆ ಕಿ "ಹಾಡು ಜನಪ್ರಿಯತೆ ಗಳಿಸಿತು. ಜನರು ಕಿಶೋರ್ ಧ್ವನಿಯನ್ನು ನನ್ನ ಧ್ವನಿಯೊಂದಿಗೆ ಮತ್ತು ಅವರ ಹಿನ್ನೆಲೆ ಗಾಯನಕ್ಕೂ ನನ್ನ ನಟನೆಗೂ ಸಂಬಂಧ ಕಲ್ಪಿಸಿದರು. ನಾನು ನಟನಾ ಶೈಲಿಯನ್ನು ಗಮನದಲ್ಲಿಟ್ಟುಕೊಂಡು ಕಿಶೋರ್ ತಮ್ಮ ಹಾಡಿಗೆ ಧ್ವನಿ ನೀಡುತ್ತಿದ್ದರು.

ಭಾರತದ ಚಿತ್ರಗಳಲ್ಲಿ ಸಹಜಧ್ವನಿ ಬದಲಿಸಿ ಹಾಡುವ ಅವರ ಶೈಲಿಗೆ ನಾನು ಪ್ರೋತ್ಸಾಹ ನೀಡಿದೆ. ಪರ್ವತಗಳ ಏಕಾಂತದಲ್ಲಿ ಪ್ರಣಯಕ್ಕೆ ಕರೆ ನೀಡುವಂತೆ ಅವರ ಹಾಡುಗಳು ಧ್ವನಿಸಿದವು ಎಂದು ದೇವಾನಂದ್ ಹೇಳಿಕೊಂಡಿದ್ದಾರ ೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments