ಇಲ್ಲಿನ ಸ್ಟಾರ್ ಹೋಟಲೊಂದರಲ್ಲಿ ಉಳಿದಿದ್ದ ಈ ಚೆಲುವೆ ಜೊತೆಯಲ್ಲಿ ವರುಣ್ ಧವನ್ ಸಹ ಇದ್ದುದ್ದು ಎಲ್ಲರ ಗಮನ ಸೆಳೆದಿದೆ. ಆಟ ಆ ಚಿತ್ರದ ಹೀರೋ ಅಲ್ವೇ ತಪ್ಪೇನು ಎಂದು ಕೇಳುವುದು ಸಹಜ! ಆದರೆ ಚಿತ್ರದ ಪ್ರಮೋಶನ್ ಬೆಳಿಗ್ಗೆ, ಮಧ್ಯಾನ್ಹ ಇಲ್ಲವೆ ಸಂಜೆ ಆಗುತ್ತೆ.ಆದರೆ ಮಧ್ಯರಾತ್ರಿಯಲ್ಲಿ ಇವರಿಬ್ಬರಿಗೇನು ಕೆಲಸ ಎನ್ನುವ ಸುದ್ದಿ ಹರಡಿದೆ.
ಚಿತ್ರದ ಪ್ರಚಾರ ಪೂರ್ಣ ಆದ ಬಳಿಕ ಅವರಿಬ್ಬರೂ ನೈಟ್ ಕ್ಲಬ್ ಗೆ ಹೊರಟರಂತೆ. ಅಲ್ಲಿ ಅರ್ಧ ರಾತ್ರಿ ಒಂದು ಗಂಟೆಯ ವರೆಗೂ ವರುಣ್ ಧವನ್ ಜೊತೆ ಇಲಿ ರೋಮಾನ್ಸ್ ಮಾಡುತ್ತಿದ್ದಳಂತೆ.. ಆಕೆಯ ಈ ಪ್ರಣಯ ನೋಡಿ ಸುತ್ತಮುತ್ತಲಿನವರು ದಂಗಾಗಿ ಹೋದರಂತೆ.
ಈ ಮಧ್ಯೆ ವರುಣ್ ಧವನ್ ಅತ್ಯಂತ ಗೌರವಾನ್ವಿತ ವ್ಯಕ್ತಿ , ಸ್ತ್ರೀಯರ ಬಗ್ಗೆ ಹೆಚ್ಚು ಗೌರವ ಆತನಿಗೆ. ನಾನೇನಾದರು ಮದುವೆ ಆದರೆ ಅಂತಹ ವ್ಯಕ್ತಿ ಜೊತೆ ಆಗ್ತೀನಿ ಎನ್ನುವ ಸ್ಟೇಟ್ಮೆಂಟ್ ನೀಡಿದ್ದಾಳೆ . ಈಗ ಬಿ ಟೌನ್ ನ ಸುದ್ದಿಗಳಲ್ಲಿ ಇದು ಸಹ ಹೆಚ್ಚು ಪ್ರಚಾರ ಗಿಟ್ಟಿಸುತ್ತಿದೆ..