Select Your Language

Notifications

webdunia
webdunia
webdunia
webdunia

ಅಮೀರ್‌ರನ್ನು ಮಣಿಸಿರುವ ಅಭಿಷೇಕ್

ಅಮೀರ್‌ರನ್ನು ಮಣಿಸಿರುವ ಅಭಿಷೇಕ್
ಮುಂಬಯಿ , ಸೋಮವಾರ, 10 ನವೆಂಬರ್ 2008 (16:03 IST)
IFM
ಅಮೀರ್ ಖಾನ್ ದಂತಕತೆಯೆನಿಸಿರುವ ಗಾಯಕ ಕಿಶೋರ್ ಕುಮಾರ್ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ವದಂತಿ ಗಾಳಿಯಲ್ಲಿ ತೇಲಾಡುತ್ತಿರುವಾಗಲೇ ಇನ್ನೊಂದು ಸುದ್ದಿ ಬಾಲಿವುಡ್‌ನಿಂದ ಹಾರಿ ಬಂದಿದೆ. ಫರ್‌ಫೆಕ್ಷನಿಸ್ಟ್ ಅಮೀರ್‌ರನ್ನು ಬದಿಗೆ ತಳ್ಳಿ ಜೂನಿಯರ್ ಬಿ ಮ್ಯೂಸಿಯನ್ ಪಾತ್ರದಲ್ಲಿ ನಟಿಸಲಿದ್ದಾರೆ.

'ಜೋಧಾ ಅಕ್ಬರ್', 'ಎ ವೆಡ್‌ನೆಸ್ ಡೇ', 'ಫ್ಯಾಶನ್‌'ನಂತ ಚಿತ್ರಗಳನ್ನು ನೀಡಿರುವ ನಿರ್ಮಾಣ ಸಂಸ್ಥೆ ಕಿಶೋರ್ ಕುಮಾರ್ ಬಗ್ಗೆ ಚಿತ್ರ ತಯಾರಿಸುವ ನಿರ್ಣಯಕ್ಕೆ ಬಂದಂದಿನಿಂದ ಸಲ್ಮಾನ್ ಖಾನ್, ಗೋವಿಂದ ಮತ್ತು ಅಮೀರ್‌ರಂತಹ ದೊಡ್ಡ ಹೆಸರುಗಳು ಬಂದುಹೋಗಿವೆ ಆದರೆ ಕೊನೆಗೆ ಪಾತ್ರ ಅಭಿಷೇಕ್ ಬಚ್ಚನ್ ಮಡಿಲು ಸೇರಿದೆ.

ಸುಜಿತ್ ಸರ್ಕಾರ್ ಅವರಿಂದ ನಿರ್ದೇಶಿತವಾಗಲಿರುವ ಚಿತ್ರ ಕಿಶೋರ್ ಕುಮಾರ್‌ರ ಜೀವನದ ಅತ್ಯಂತ ರೋಚಕ ಮತ್ತು ಆಘಾತಕಾರಿ ಅಂಶಗಳನ್ನು ಒಳಗೊಳ್ಳಲಿದೆ.

ಅಮೀರ್‌ರಿಂದ ಈ ಪಾತ್ರ ಮಾಡಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದ ಯುಟಿವಿ ನಿರ್ಮಾಣ ಸಂಸ್ಥೆ ಕೊನೆಗೆ ಅಭಿಷೇಕ್ ಬಚ್ಚನ್‌ರನ್ನು ಆರಿಸಿದೆ. "ಉತ್ತಮ ಹಾಸ್ಯ ಪ್ರಜ್ಞೆ ಮತ್ತು ಗಮನಸೆಳೆಯುವ ವ್ಯಕ್ತಿತ್ವ ಹೊಂದಿದ್ದ ಕಿಶೋರ್ ಪಾತ್ರಕ್ಕೆ ಅಭಿಷೇಕ್ ಸೂಕ್ತ ಆಯ್ಕೆ" ಎಂದರು ಮೀರ್‌ಚಂದಾನಿ.

Share this Story:

Follow Webdunia kannada