Webdunia - Bharat's app for daily news and videos

Install App

ಅತಿ ವೈರಿಗಳ ಅಪ್ಪುಗೆ: ಬೆರಗಾದ ಬಾಲಿವುಡ್

Webdunia
ಶುಕ್ರವಾರ, 26 ಜುಲೈ 2013 (10:51 IST)
PTI
ಬಾಲಿವುಡ್‌ನ ಅತಿ ವೈರಿಗಳೆಂದು ಕರೆಯಲ್ಪಡುತ್ತಿದ್ದ ಸಲ್ಮಾನ್ ಖಾನ್ ಹಾಗೂ ಶಾರೂಖ್ ಖಾನ್ ಒಬ್ಬರನ್ನೊಬ್ಬರು ಅಪ್ಪಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಪವಿತ್ರ ರಂಜಾನ್ ಮಾಸಾಚರಣೆಯ ಸಮಯದಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಈ ಘಟನೆ ನಡೆದಿದೆ. ಕಾಂಗ್ರೆಸ್ ಶಾಸಕ ಬಾಬಾ ಸಿದ್ದಿಕಿ ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್ನಲ್ಲಿ ಆಯೋಜಿಸಿದ್ದ ಔತಣ ಕೂಟದಲ್ಲಿ ಅವರಿಬ್ಬರೂ ಹಸ್ತಲಾಘವ ಮಾಡಿಕೊಂಡು ಒಬ್ಬರನ್ನೊಬ್ಬರು ಅಪ್ಪಿಕೊಂಡು ನೆರೆದವರನ್ನು ಚಕಿತಗೊಳಿಸಿದ್ದಾರೆ.

ಎರಡು ದಿನಗಳಿಂದ ರಾಷ್ಟ್ರೀಯ ವಾಹಿನಿಗಳಲ್ಲೂ ಸೇರಿದಂತೆ ಎಲ್ಲೆಡೆ ಪ್ರಚಾರವಾಗಿದೆ. ಇವರಿಬ್ಬರು ಒಂದಾಗಿದ್ದು ಶಾಸಕರಿಗೂ ಬಹಳ ಖುಷಿ ನೀಡಿದ್ದು ಇಬ್ಬರು ದುಶ್ಮನ್ಗಳು ಒಂದಾಗಿದ್ದು ಸಂತಸ ನೀಡಿದೆ ಎಂದಿದ್ದಾರೆ. ಒಬ್ಬರನ್ನೊಬ್ಬರು ಅಪ್ಪಿಕೊಂಡ ಬಳಿಕ ಮೂವರೂ ಜೊತೆಗೆ ನಿಂತು ಫೊಟೊ ತೆಗೆಸಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ ಇವರಿಬ್ಬರೂ ಆಪ್ತಮಿತ್ರರಾಗಿದ್ದರು, ಅದಕ್ಕಿಂತ ಹೆಚ್ಚಾಗಿ ಸಹೋದರರಂತಿದ್ದರು.

ಕೆಬಿಸಿ ಮೂರನೇ ಆವೃತ್ತಿಯಲ್ಲೂ ಶಾರೂಖ್ ಈ ಮಾತನ್ನು ಹೇಳಿದ್ದರು. ಕತ್ರಿನಾ ಹುಟ್ಟುಹಬ್ಬದಂದು ಅವರಿಬ್ಬರ ಮೂಡಿದ್ದ ಮನಸ್ತಾಪ ಅತಿ ಹೆಚ್ಚಾಗಿ ಬದ್ದ ವೈರಿಗಳಂತಾಗಿದ್ದರು. ಇದೀಗ ಇವರಿಬ್ಬರ ಮಧ್ಯದ ವೈರತ್ವ ಕಡಿಮೆಯಾಗಿ ಒಬ್ಬರನ್ನೊಬ್ಬರು ಅಪ್ಪಿಕೊಂಡಿದ್ದು ಬಾಲಿವುಡ್ ಮಂದಿಗೂ ಸಂತಸ ತಂದಿದೆಯಂತೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments