ಆದರೆ ಅದಾದ ಬಳಿಕ ಆಕೆ ಯಾವ ಚಿತ್ರಕ್ಕೂ ಸಹಿ ಹಾಕಿರಲಿಲ್ಲ. ಈಗ ಬಂದಿರುವ ಸುದ್ದಿ ಪ್ರಕಾರ ಶ್ರೀ ಅತ್ಯುತ್ತಮ ಸ್ಕ್ರಿಪ್ಟ್ ರೈಟರ್ ಎಂದು ಟಾಲಿವುಡ್ ನಲ್ಲಿ ಹೆಸರು ಪಡೆದಿರುವ ಕೋಣ ವೆಂಕಟ್ ಅವರ ಚಿತ್ರಕಥೆಯೂ ಶ್ರೀದೆವಿಯನ್ನು ಆಕರ್ಷಿಸಿದೆಯಂತೆ. ಈ ಚಿತ್ರಕ್ಕೆ ಆಕೆಯಿಂದ ಗ್ರೀನ್ ಸಿಗ್ನಲ್ ದೊರಕಿದ್ದು, ಚಿತ್ರವನ್ನು ಶ್ರೀ ಯ ಪತಿ ಬೋನಿ ಕಪೂರ್ ಅವರು ನಿರ್ಮಿಸುತ್ತಿದ್ದಾರಂತೆ.
ಹಿಂದಿ , ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸೆಟ್ಟೆ ರುತ್ತಿರುವ ಈ ಚಿತ್ರದ ಶೂಟಿಂಗ್ ಸೆಪ್ಟಂಬರ್ ತಿಂಗಳಲ್ಲಿ ಆರಂಭಗೊಂಡು 2015ರಲ್ಲಿ ಬಿಡುಗಡೆ ಆಗುತ್ತದೆ ಎನ್ನುವ ಸುದ್ದಿ ಹರಡಿದೆ. ಸದ್ಯಕ್ಕೆ ಪಾತ್ರಗಳ ಆಯ್ಕೆಆಗಿಲ್ಲ, ಅದಾದ ತಕ್ಷಣ ನಾವು ನಿಮಗೆ ತಿಳಿಸುತ್ತೇವೆ!