Webdunia - Bharat's app for daily news and videos

Install App

ಅಂತರರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ಸ್ ಪಂದ್ಯಾವಳಿ ಗೀತೆಯಲ್ಲಿ ಪ್ರಿಯಾಂಕಾ

Webdunia
ಬುಧವಾರ, 2 ಏಪ್ರಿಲ್ 2014 (15:01 IST)
ಗಿನ್ನಿಸ್ ಅಂತರರಾಷ್ಟ್ರೀಯ ಚಾಂಪಿಯನ್ಸ್ ಕಪ್ನಲ್ಲಿ ಜಗತ್ತಿನ ಪ್ರಸಿದ್ಧ ಫುಟ್ಬಾಲ್ ಕ್ಲಬ್ಗಳು ಪಾಲ್ಗೊಳ್ಳುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿಯೇ. ಹೊಸ ವಿಷಯವೆಂದರೆ ಅಲ್ಲಿ ಪ್ರಸಾರವಾಗಲಿರುವ ಪಂದ್ಯಾವಳಿ ಗೀತೆಯಲ್ಲಿ ಪ್ರಿಯಾಂಕಾ ಚೋಪ್ರಾ ಎಕ್ಸಾಟಿಕ್ ಎಂಬ ಆಂಗ್ಲ ಥೀಮ್ ಗೀತೆಯಲ್ಲಿ ನಟಿಸಿದ್ದಾರೆ. ಪಂದ್ಯಾವಳಿ ನಡೆಯುವ ಅಷ್ಟೂ ದಿನ ಈ ಗೀತೆ ಪ್ರಸಾರವಾಗಲಿರುವುದು ಪ್ರಿಯಾಂಕಾ ಅವರ ಸಂತೋಷ ಹೆಚ್ಚಿಸಲು ಕಾರಣವಾಗಿದೆಯಂತೆ.

ರಿಯಲ್ ಮ್ಯಾಡ್ರಿಡ್, ಚೆಲ್ಸಿ, ಎ ಸಿ ಮಿಲನ್, ಜುವೆಂಟಸ್ ಮೊದಲಾದ ಎಂಟು ತಂಡಗಳು ಟೂರ್ನೀಯಲ್ಲಿ ಪಾಲ್ಗೊಳ್ಳುತ್ತಿವೆ. ಈ ಪಂದ್ಯಾವಳಿಗೆಂದೇ ಯೂನಿವರ್ಸಲ್ ಮ್ಯೂಸಿಕ್ ಹಾಗೂ ಗೆಫೆನ್ ಎ ಆಂಡ್ ಎಂ ಸಂಗೀತ ಸಂಯೋಜಿಸಿವೆ. ಓ ಜೋಶ್ಭರಿತ ಪಾಪ್ ಗೀತೆ ಎಕ್ಸಾಟಿಕ್ನಲ್ಲಿ ಅವರು ನರ್ತಿಸಿದ್ದಾರೆ. ಈ ಗೀತೆಯನ್ನು ಸಿದ್ದಪಡಿಸಿದ್ದು ಪಾಪ್ ಗೀತೆಯ ದೊಡ್ಡ ಹೆಸರು ಪಿಟ್ಬುಲ್.

ಪಿಟ್ಬುಲ್ ಜೊತೆಯಲ್ಲಿ ಮಿಯಾಮಿ ಬೀಚ್ನಲ್ಲಿ ಚಿತ್ರೀಕರಿಸಿರುವ ಈ ಗೀತೆಯಲ್ಲಿ ಪ್ರಿಯಾಂಕಾ ಬಂಗಾರ ಬಣ್ಣದ ಹಾಗೂ ಕಪ್ಪು ಈಜುಡುಗೆ ತೊಟ್ಟು ಇಂಗ್ಲಿಷ್ ಗೀತೆಗೆ ತುಟಿಯಾಡಿಸಿದ್ದಾರೆ. ವಿದೇಶಿ ನಟಿಯರಿಗೆ ಸರಿಸಮನಾಗಿ ನಟಿಸಿರುವ ಈ ವಿಡಿಯೋ ತುಣುಕು ಈಗಾಗಲೇ ಭಾರೀ ಪ್ರಸಿದ್ದವಾಗಿದೆ. ಈ ಪಂದ್ಯಾವಳಿ ಜುಲೈ 27ರಿಂದ ಆಗಸ್ಟ್ 7ರವರೆಗೆ ಅಮೆರಿಕಾದ ಆರು ಮೈದಾನಗಳಲ್ಲಿ ನಡೆಯಲಿದೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Rohit Basfore: ಸ್ನೇಹಿತರ ಜತೆ ಹೊರಗಡೆ ಹೋದ ಬಾಲಿವುಡ್ ನಟ ರೋಹಿತ್ ಬಾಸ್ಪೋರ್ ಶವವಾಗಿ ಪತ್ತೆ

Drugs Case: ಕೇರಳದ ಖ್ಯಾತ ರಾಪರ್ ವೇದನ್ ಅರೆಸ್ಟ್‌

ತಿರುಪತಿ ತಿಮ್ಮಪ್ಪನ ದರ್ಶನ್ ಪಡೆದ ನಟಿ ಆಶಿಕಾ ರಂಗನಾಥ್‌: ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್‌

ಬಿಜೆಪಿಗೆ ಪ್ರೀತಿ ಜಿಂಟಾ ಸೇರ್ಪಡೆ: ವದಂತಿಗೆ ಕೌಂಟರ್‌ ಕೊಟ್ಟ ಬಾಲಿವುಡ್ ನಟಿ

Prithwi Bhat marriage: ಮದುವೆ ಬಳಿಕ ಗಾಯಕಿ ಪೃಥ್ವಿ ಭಟ್ ಮೊದಲ ಬಾರಿಗೆ ಗಂಡನ ಜೊತೆ ಇರುವ ಫೋಟೋ ರಿವೀಲ್

Show comments