Webdunia - Bharat's app for daily news and videos

Install App

ನಿರೀಕ್ಷಿತ ರಿಟರ್ನ್ ಆಫ್ ಹನುಮಾನ್ ತೆರೆಗೆ

Webdunia
ಶನಿವಾರ, 29 ಡಿಸೆಂಬರ್ 2007 (12:54 IST)
IFM
ಭಾರತೀಯ 2ಡಿ ಆನಿಮೇಶನ್ ಚಿತ್ರ ರಿಟರ್ನ್ ಆಫ್ ಹನುಮಾನ್ ನ್ನು ಟೂನ್ಸ್ ಆನಿಮೇಶನ್ ಇಂಡಿಯಾ ಪ್ರೈ.ಲಿ. ಶುಕ್ರವಾರ ಬಿಡುಗಡೆ ಮಾಡಿದೆ.

ಈ ಚಿತ್ರವು ಭಾರತದ ಮೊದಲ 2ಡಿ ಆನಿಮೇಟೆಡ್ ಚಿತ್ರದ ಉತ್ತರಭಾಗವಾಗಿದೆ. 90 ನಿಮಿಷದ ಈ ಚಿತ್ರವನ್ನು ಟೂನ್ಸ್ ಆನಿಮೇಶನ್ ಮತ್ತು ಪರ್ಸೆಪ್ಟ್ ಪಿಕ್ಚರ್ ಕಂಪನಿ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.

ಈ ಚಿತ್ರವು ದೇಶದಾದ್ಯಂತ ಸುಮಾರು 370 ಚಿತ್ರಮಂದಿರಗಳಲ್ಲಿ ತೆರೆಕಂಡಿದೆ.ಅನುರಾಗ್ ಕಶ್ಯಪ್ ನಿರ್ದೇಶನದ ಪ್ರಸಕ್ತ ಹಿಂದಿ ಆವೃತ್ತಿಯಲ್ಲಿರುವ ಚಿತ್ರವನ್ನು ಭಾರತದ ಇತರ ಪ್ರಾದೇಶಿಕ ಭಾಷೆಗಳಿಗೆ ಶೀಘ್ರದಲ್ಲಿ ಡಬ್ಬಿಂಗ್ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಇಂದಿನ ಜಗತ್ತಿನಲ್ಲಿ ಭಾರತೀಯ ಪುರಾಣ ಕಥೆಗಳು ಹೆಚ್ಚಿನ ಉತ್ತಮ ಅಂಶಗಳನ್ನು ಒಳಗೊಂಡಿದ್ದು, ಸಂಸ್ಕೃತಿಯ ಅಗತ್ಯತೆಗಳನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಬೇಕಾಗಿದೆ ಎಂದು ಟೂನ್ಸ್ ಆನಿಮೇಶನ್‌ನ ಮುಖ್ಯ ಕಾರ್ಯ ನಿರ್ವಾಹಕ ಪಿ.ಜಯಕುಮಾರ್ ತಿಳಿಸಿದ್ದಾರೆ.

ಹನುಮಾನ್ 3 ಎಂಬ 3ಡಿ ಆನಿಮೇಶನ್ ಚಿತ್ರವನ್ನು ನಿರ್ಮಿಸಲು ಟೂನ್ಸ್ ಮತ್ತು ಪಿಪಿಸಿ ಮತ್ತೊಮ್ಮೆ ಕೈಜೋಡಿಸಲಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments