Webdunia - Bharat's app for daily news and videos

Install App

ಹಾವು ಕಡಿತಕ್ಕೆ ಫೋನಿನಲ್ಲೇ ಚಿಕಿತ್ಸೆ!

Webdunia
WD
ಇಂವ ಫೋನಲ್ಲೇ ಹಾವಿನ ಮಂತ್ರ ಹೇಳುತ್ತಾನೆ!

ರಾಮಭಾಗ್ ಪೊಲೀಸ್ ಸ್ಟೇಷನ್ನಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿರುವ ಯಶವಂತ್ ಭಾಗವತ್ ಅವರು ಹಾವು ಕಡಿದವರಿಗೆ ಮಂತ್ರ ಮೂಲಕ, ಅದೂ ಪೋನಿನಲ್ಲೇ ಹೇಳುವ ಮೂಲಕ ಚಿಕಿತ್ಸೆ ನೀಡುತ್ತಾರೆ ಎಂಬ ಸುದ್ದಿ ನಮ್ಮ ಕುತೂಹಲವನ್ನು ವಿಶೇಷವಾಗಿ ಕೆರಳಿಸಿತು. ಕಿವಿಗೆ ಬಿದ್ದ ಸುದ್ದಿಗಳ ಸತ್ಯಾಸತ್ಯತೆ ಓದುಗ ಮಹಾಪ್ರಭುವಿಗೆ ಬಿಟ್ಟ ವಿಚಾರ. ಆದರೂ ನಾವು ಕಣ್ಣಾರೆ ಕಂಡ ಘಟನೆಯ ವಿವರ ಇಲ್ಲಿ ನೀಡುತ್ತಿದ್ದೇವೆ.

ನಾವು ರಾಮಭಾಗ್ ಪ್ರದೇಶಕ್ಕೆ ಹೋದ ಮೇಲೆ ಗೊತ್ತಾಗಿದ್ದು ಈ ವ್ಯಕ್ತಿ ಒಬ್ಬ ಪೊಲೀಸ್ ಸಿಬ್ಬಂದಿ ಎಂದು. ಕಳೆದ 25 ವರ್ಷದಿಂದ ಸರಕಾರಿ ಸೇವೆಯಲ್ಲಿರುವ ಯಶವಂತ್ ಭಾಗವತ್ ಹೇಳುವಂತೆ, ಹಾವು ಕಡಿದ ವ್ಯಕ್ತಿಯ ಕಿವಿಯಲ್ಲಿ ನಿರ್ದಿಷ್ಟ ಸಂಸ್ಕೃತ ಶ್ಲೋಕಗಳನ್ನು ಉಸುರುವ ಮೂಲಕ ಹಾವು ಕಡಿದ ವ್ಯಕ್ತಿಯನ್ನು ಗುಣಮುಖವಾಗಿಸಬಹುದು.

ಯಶವಂತ್ ಭಾಗವತ್ ಫೋನ್ ಚಿಕಿತ್ಸಾ ವಿಧಾನದ ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ...

WD
ಅಷ್ಟರಲ್ಲಿ ಪೋನು ರಿಂಗಾಯಿತು. ಅಲ್ಲದೆ ನಮಗೂ ಕೂಡ ಆ ವ್ಯಕ್ತಿ ಪೋನಿನಲ್ಲಿ ಹಾವು ಕಡಿತಕ್ಕೆ ಯಾವ ರೀತಿ ಉಪಚರಿಸುತ್ತಾರೆಂಬುದನ್ನು ಕಣ್ಣಾರೆ ಕಾಣುವ ಅವಕಾಶ ಸಿಕ್ಕಿತು. ಮೊದಲು ಅವರು ರೋಗಿಯ ತಾಯಿಯ ಹೆಸರು ಹಾಗೂ ಸಂಪೂರ್ಣ ವಿಳಾಸ ಕೇಳಿದರು. ಆಮೇಲೆ ಕೆಲ ಸಂಸ್ಕೃತ ವಾಕ್ಯಗಳನ್ನು ಪೋನಿನಲ್ಲಿ ಉಸುರಿದರು. ರೋಗಿ ಚೇತರಿಸಿಕೊಳ್ಳುತ್ತಿದ್ದಾನೆ ಎಂಬುದು ಗಮನಕ್ಕೆ ಬಂದ ಮೇಲೆ ತೆಂಗಿನ ಕಾಯಿಯನ್ನು ಒಡೆಯಲು ತಿಳಿಸಿದರು. ಬಳಿಕ ಆ ವ್ಯಕ್ತಿಗೆ ಸ್ವಲ್ಪ ಉಪ್ಪು ತಿನ್ನುವಂತೆ ಹೇಳಿದ್ದು ರೋಗಿಗೆ ಉಪ್ಪಿನ ರುಚಿಯ ಅನುಭವಕ್ಕೆ ಬಂದ ಮೇಲೆ ರೋಗಿ ಗುಣಮುಖವಾಗಿರುವುದಾಗಿ ಖಾತ್ರಿಯಾಯಿತೆಂದು ಯಶವಂತ್ ತಾನು ರೋಗಿಗಳನ್ನು ಉಪಚರಿಸುವ ರೀತಿಯನ್ನು ವಿವರಿಸಿದರು.

ಯಶವಂತ್ ಅವರ ಚಿಕಿತ್ಸೆಯಿಂದ ಗುಣವಾದ ಸರ್ಮಾನ್ ಎನ್ನುವ ವ್ಯಕ್ತಿಯ ಅನುಭವವನ್ನು ಅವರ ಮಾತಲ್ಲೇ ಕೇಳೋಣ. “ಒಂದು ದಿನ ಮನೆ ಸ್ವಚ್ಚಗೊಳಿಸುತ್ತಿದ್ದ ಸಮಯದಲ್ಲಿ ನನ್ನ ಎರಡೂ ಕಾಲಿಗೆ ಹಾವು ಕಡಿಯಿತು. ನಾನು ತಕ್ಷಣ ಯಶವಂತ್ ಭಾಗವತ್ಜೀ ಅವರ ಬಳಿ ತೆರಳಿದ್ದು, ಅವರು ಕೆಲವೇ ನಿಮಿಷಗಳಲ್ಲಿ ನನ್ನನ್ನು ಗುಣಪಡಿಸಿದರ ು ” ಎಂದು ವಿವರ ನೀಡಿದರು.

ಹಾವು ಕಡಿತದಿಂದ ವಿಷವೇರಿದ ವ್ಯಕ್ತಿಯನ್ನು ದೂರವಾಣಿ ಮೂಲಕ ಮಾತನಾಡುತ್ತಾ ಗುಣಪಡಿಸಬಹುದು ಎಂಬ ವಿಷಯದ ಬಗ್ಗೆ ನೀವೇನನ್ನುತ್ತೀರಿ? ಇಲ್ಲಿ ಚರ್ಚಿಸಿ.

WD
ಸರ್ಮಾನ್ ಅವರಂತೆ ಹಲವಾರು ಮಂದಿ ಚಿಕಿತ್ಸೆಗೆ ಒಳಗಾಗಿದ್ದಾರೆ. ತನ್ನ ರೋಗಿಗಳ ವಿವರಣೆಗಳನ್ನು ಬರೆದಿಡಲು ಯಶವಂತ್ ಮೂರು ರಿಜಿಸ್ಟರ್ಗಳನ್ನು ಇರಿಸಿಕೊಂಡಿದ್ದಾರೆ. ಇನ್ನೊಂದು ಕುತೂಹಲದ ಸಂಗತಿ ಎಂದರೆ ಹಾವಿನ ಕಡಿತಕ್ಕೆ ಚಿಕಿತ್ಸೆ ನೀಡುವ ಯಶವಂತ್ ಅವರು ಒಂದು ಚಿಕ್ಕಾಸು ಕೂಡ ರೋಗಿಗಳಿಂದ ಪಡೆಯುವುದಿಲ್ಲ. ಇದೆಲ್ಲ ಸಾಯಿಬಾಬಾ ಆಶೀರ್ವಾದ ಎಂದು ಅವರು ಹೇಳುತ್ತಾರೆ.

ಮೀಸಲು ಪಡೆಯಲ್ಲಿ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರದೀಪ್ಸಿಂಗ್ ಎಂಬವರಿಗೆ ಕೆಲ ದಿನಗಳ ಹಿಂದೆ ಎಲ್ಲೆಲ್ಲೂ ಹಾವೇ ಕಾಣಿಸುತ್ತಿತ್ತು. ಮನೆಯಲ್ಲಿ ಮತ್ತು ಕಚೇರಿಯಲ್ಲಿ ಎಲ್ಲೆಂದರಲ್ಲಿ ಹಾವುಗಳು ಕಂಡುಬರುತ್ತಿದ್ದವು. ಆ ಹಾವುಗಳು ಬರದಂತೆ ಯಶವಂತ್ ಏನೋ ಮಂತ್ರ ಮಾಡಿದರು, ಬಳಿಕ ತನಗೆ ಈ ವಿಚಾರದಲ್ಲಿ ನಂಬಿಕೆ ಹುಟ್ಟಿರುವುದಾಗಿ ಪ್ರದೀಪ್ ಹೇಳುತ್ತಾರೆ.

ಯಶವಂತ್ ಭಾಗವತ್ ಫೋನ್ ಚಿಕಿತ್ಸಾ ವಿಧಾನದ ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ...

WD
ಆದರೆ, ಮಹಾರಾಜ ಯಶವಂತ್ ಸಿಂಗ್ ಆಸ್ಪತ್ರೆಯ ವೈದ್ಯಾಧಿಕಾರಿ ಅಶೋಕ್ ಬಾಜಪೇಯಿ ಹೇಳುತ್ತಾರೆ - “ಇದೆಲ್ಲ ಬೊಗಳೆ, ನಮ್ಮ ದೇಶದಲ್ಲಿನ ಶೇ.70ರಷ್ಟು ಹಾವುಗಳಿಗೆ ವಿಷ ಇಲ್ಲ, ಸಾಮಾನ್ಯವಾಗಿ ಜನರು ಹಾವು ಕಡಿದ ನಂತರ ಹೆದರಿಕೆಯಿಂದ ಸಾವನ್ನಪ್ಪುತ್ತಾರ ೆ ” ಎನ್ನುವ ಯಶವಂತ್, ಚಿಕಿತ್ಸೆ ಸುಳ್ಳು ಎಂದು ಹೇಳುತ್ತಾರೆ.

ಯಾರು ಏನಾದರೂ ಹೇಳಲಿ. ನಿಮಗೇನಾದರೂ ಕುತೂಹಲ ಇದ್ದರೆ 0731-2535534 ಸಂಖ್ಯೆಗೆ ಪೋನ್ ಮಾಡಬಹುದು. ಯಶವಂತ್ ಸಣ್ಣ ಹುಡುಗರಿದ್ದಾಗ ತಾಯಿಯಿಂದ ಕೆಲ ಗಿಡ ಮೂಲಿಕೆಗಳ ಉಪಯೋಗವನ್ನು ತಿಳಿದುಕೊಂಡು ನಂತರ ಪ್ರಸಿದ್ಧ ಮಾಂತ್ರಿಕ ನೂರ್ ಖಾನ್ ಅವರಿಂದ ಹಾವು ಕಡಿತಕ್ಕೆ ಔಷಧ ನೀಡುವುದನ್ನು ಕಲಿತುಕೊಂಡಿದ್ದಾರೆ.

ಹಾವು ಕಡಿತದಿಂದ ವಿಷವೇರಿದ ವ್ಯಕ್ತಿಯನ್ನು ದೂರವಾಣಿ ಮೂಲಕ ಮಾತನಾಡುತ್ತಾ ಗುಣಪಡಿಸಬಹುದು ಎಂಬ ವಿಷಯದ ಬಗ್ಗೆ ನೀವೇನನ್ನುತ್ತೀರಿ? ಇಲ್ಲಿ ಚರ್ಚಿಸಿ.

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

Show comments