Webdunia - Bharat's app for daily news and videos

Install App

ವರ ಪ್ರಾಪ್ತಿಗೆ ಶವ ಸಾಧನೆ...!

Webdunia
WDWD
ಕೆಲವರಿಗೆ ಕಾರಿರುಳ ರಾತ್ರಿಯ ಪಯಣಗಳು ರೋಚಕ ಅನುಭವ ನೀಡುತ್ತವೆ. ಇನ್ನು ಕೆಲವರಿಗೆ ಸಾಧನೆಯಲ್ಲಿ ಸಾಗಿ ತಮ್ಮ ಗುರಿ ಮುಟ್ಟಲು ನಟ್ಟಿರುಳ ರಾತ್ರಿಯಲ್ಲಿ ಸ್ಮಶಾನದ ಶವಗಳೇ ಬೇಕು.

ಇಷ್ಟಾರ್ಥ ಸಿದ್ದಿಗಾಗಿ ನಡೆಯುವ ಈ ಚಿದಂಬರ ರಹಸ್ಯದ ಸಾಧನೆಗಳು ನಿಜವಾಗಿ ಪ್ರಕೃತಿ ಮತ್ತು ದೇವರನ್ನು ತೃಪ್ತಿಗೊಳಿಸಬಲ್ಲವೇ ಎನ್ನುವ ಪ್ರಶ್ನೆಗೆ ಉತ್ತರವಂತೂ ಇನ್ನೂ ನಮಗೆ ಸಿಕ್ಕಿಲ್ಲ. ಆದರೆ ಅಂತಹ ಸಾಧನೆಯೊಂದನ್ನು ನೋಡುವ ಅವಕಾಶದಲ್ಲಿ ರೋಮಾಂಚನ ಅನುಭವಿಸಿದ ಪ್ರಸಂಗವೊಂದು ನಮಗೆ ಎದುರಾಗಿತ್ತು !
ಇಲ್ಲಿ ಫೋಟೋ ಗ್ಯಾಲರಿಗಾಗಿ ಕ್ಲಿಕ್ ಮಾಡಿ

ನಡು ರಾತ್ರಿಯಲ್ಲಿ ನಡೆಯವ ಶವ ಸಾಧನೆಯನ್ನು ನೋಡಬೇಕೆಂಬುದು ನಮ್ಮ ಕಾತುರ. ಇದಕ್ಕೆ ಹೂಂಗುಟ್ಟಿದವರು ಚಂದ್ರಪಾಲ್ ಎನ್ನುವ ಮಾಂತ್ರಿಕ. ಮಧ್ಯಪ್ರದೇಶದ ಉಜ್ಜಯಿನಿ ಸಮೀಪ ಕ್ಷಿಪ್ರಾ ನದಿ ಬಳಿಯ ಚಕ್ರತೀರ್ಥ ಸ್ಮಶಾನದಲ್ಲಿ ಚಂದ್ರಪಾಲ್ ಮಾಡಿದ ಶವ ಸಾಧನೆಯ ತುಣುಕುಗಳನ್ನು ನೋಡಿ ಭಯದಿಂದ ತಲೆ ಸುತ್ತುವುದು ಒಂದು ಬಾಕಿ.

ಕ್ಷಿಪ್ರಾ ನದಿ ತಟದ ಮೇಲೆ ನಡೆದ ಆ ಶವ ಸಾಧನೆಯ ಆರಂಭಿಕ ಹಂತಗಳ ಪರಿಚಯ ಮಾತ್ರ ಓದುಗರಿಗೆ ನೀಡಬಹುದು. ಅಂತಿಮ ಹಂತದ ಶವ ಸಾಧನೆಯ ಕ್ರಮಗಳು ನಮಗೆ ದೊರೆತಿಲ್ಲ.

ಅದು ಶವಸಾಧನೆಯ ಮಧ್ಯರಾತ್ರಿ. ಮಾಂತ್ರಿಕ ಚಂದ್ರಪಾಲ್ ಶವ ಪೂಜೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತ ಕ್ಷಿಪ್ರಾ ನದಿಯಲ್ಲಿ ದೀಪಗಳನ್ನು ತೇಲಿ ಬಿಡುತ್ತಾರೆ. ಆ ದೀಪಗಳು ಆ ಶವದ ಆತ್ಮಕ್ಕೆ ದಾರಿದೀಪವಾಗಿ ಶವ ಸಾಧಕನ ಇಚ್ಛೆಗಳನ್ನು ಪೂರೈಸಲು ಬರುತ್ತವೆ.

WDWD
ಇಲ್ಲಿಂದ ಶುರುವಾದ ಪೂಜೆ ನಾವು ಅಲ್ಲಿಂದ ಕಾಲ್ಕೀಳುವ ಮುನ್ನ ನಿರ್ಣಾಯಕ ಹಂತವನ್ನು ತಲುಪಿರಲಿಲ್ಲ. ಆ ಆತ್ಮಕ್ಕೆ ದಾರಿದೀಪ ತೋರಿದ ಮಾಂತ್ರಿಕ ಚಂದ್ರಪಾಲ್ ಅಸ್ಪಷ್ಟವಾಗಿ ಕೆಲ ಮಂತ್ರಗಳನ್ನು ಉಚ್ಚರಿಸುತ್ತಾ ಆ ಶವದ ಸುತ್ತ ಮೇರೆಯನ್ನು ಗುರುತಿಸುತ್ತಾನೆ. ಪೂಜೆಗೆ ಅಡ್ಡಿ ಪಡಿಸುವ ಭೂತ ಪ್ರೇತಗಳಿಗೆ ಬಲಿ ಹಾಕಿದ ಮೇಲೆ ಅದೋ ಶುರುವಾಯಿತು ನೋಡಿ ಶವ ಸಾಧಕನ ಸಾಧನೆ!

ಶವದ ಮೇಲೆ ಕಾಳಿಯಂತೆ ನಿಂತ ಚಂದ್ರಪಾಲ್ ಮಂತ್ರೋಚ್ಚಾರಣೆ ಮುಗಿಸಿದರು. ಅಲ್ಲಿ ಕುಳಿತಿದ್ದ ತನ್ನ ಅನುಯಾಯಿಗಳಿಗೆ ಮಾಂಸ ಮದ್ಯ ನೀಡಿ ಮುಂದಿನ ಹಂತದ ಪೂಜೆಗೆ ಅಣಿಯಾದರು. ಇಲ್ಲಿ ಚರ್ಚಿಸಿ.

WDWD
ಇಲ್ಲಿಯವರೆಗೆ ಮಾತ್ರ ನಮಗೆ ಶವ ಸಾಧನೆಯ ಪರಿಚಯವಾಯಿತು. ಈ ಹಂತದ ನಂತರ ಶವ ಸಾಧಕರು ಶವದ ಮೇಲೆ ನಗ್ನರಾಗಿ ಕುಳಿತುಕೊಳ್ಳುತ್ತಾರೆ ಎಂದಷ್ಟೇ ನಮಗೆ ಗೊತ್ತು.

ನಮಗೆ ಸೇವೆಂದ್ರನಾಥ್ ದಾದಾಜಿ ಎನ್ನುವ ಮಾಂತ್ರಿಕನಿಂದ ತಿಳಿದ ಮಾಹಿತಿಯ ಪ್ರಕಾರ, ಶವ ಸಾಧಕರು ಮೂರು ವಿಧಗಳಲ್ಲಿ ಪೂಜೆ ಮಾಡುತ್ತಾರೆಂದೂ, ಆ ಮೂರು ಸಾಧನೆಗಳಲ್ಲಿ ಶವ ಸಾಧನೆಯು ಅತಿ ಕಠಿಣವಾದುದು ಎಂದೂ ಅವನ ಮಾತಿನಲ್ಲಿ ವ್ಯಕ್ತವಾಯಿತು.

ಇಲ್ಲಿ ಫೋಟೋ ಗ್ಯಾಲರಿಗಾಗಿ ಕ್ಲಿಕ್ ಮಾಡಿ

ಶವ ಸಾಧನೆಯಲ್ಲಿ ಪೂಜೆಯನ್ನು ದಹಿಸುತ್ತಿರುವ ಶವಕ್ಕೆ ಮಾಡಲಾಗುತ್ತದೆ. ಪೂಜೆ ಮುಗಿಯುತ್ತಿರುವಂತೆಯೇ ಸಾಧಕನಿಗೆ ಇಚ್ಛಿತ ವರ ದೊರೆಯುತ್ತದಂತೆ.

WDWD
ಇದರಲ್ಲಿ ಶಿವ ಸಾಧನೆ ಮತ್ತು ಸ್ಮಶಾನ ಸಾಧನೆ ಎಂಬ ವಿಧಗಳು ಇದ್ದು, ಸ್ಮಶಾನ ಸಾಧನೆಯಲ್ಲಿ ಕುಟುಂಬ ಸದಸ್ಯರು ಪಾಲ್ಗೊಳ್ಳುತ್ತಾರೆ. ಆದರೆ ಶವದ ಪೂಜೆ ಮಾಡದೆ ಕೇವಲ ‘ಖೋಯಾ’ ಮಾತ್ರ ಸತ್ತ ವ್ಯಕ್ತಿಯ ದೇಹಕ್ಕೆ ಅರ್ಪಿಸುತ್ತಾರೆ. ಶಿವ ಸಾಧನೆಯಲ್ಲಿ ಮಾಂತ್ರಿಕನು ಶವದ ಮೇಲೆ ನಿಂತು ಅಗೋಚರ ಶಕ್ತಿಗಳನ್ನು ಆಹ್ವಾನಿಸುತ್ತಾನೆ. ಉಳಿದ ಇತರ ಕರ್ಮಗಳು ಶವ ಸಾಧನೆಯಂತೆ ನಡೆಯುತ್ತವೆ.

ಶವ ಸಾಧನೆಗಳು ಹೆಚ್ಚಾಗಿ ತಾರಾಪೀಠ ಸ್ಮಶಾನ, ಕಾಮಾಖ್ಯಪೀಠ ಸ್ಮಶಾನ, ತ್ರ್ಯಂಬಕೇಶ್ವರ ಸ್ಮಶಾನ ಮತ್ತು ಉಜ್ಜಯಿನಿಯ ಚಕ್ರತೀರ್ಥಗಳಲ್ಲಿ ನಡೆಯುತ್ತವೆ. ಇಲ್ಲಿ ಚರ್ಚಿಸಿ.

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

Show comments