Webdunia - Bharat's app for daily news and videos

Install App

ಮುಸ್ಲಿಂ ಜಗತ್ತಿನ ಪವಿತ್ರ ತಾಣ - ಕರ್ಬಾಲ

ಮನೀಷಾ ಕೌಶಿಕ್
Shruthi AgarwalWD
ಮಧ್ಯಪ್ರದೇಶದ ಜಾವ್ರಾದಲ್ಲಿರುವ ಹುಸೇನ್ ಟೇಕ್ರಿ ಎಂಬ ತಾಣದಲ್ಲಿ ತಮ್ಮನ್ನು ಆವರಿಸಿದ ದೆವ್ವ ಭೂತಗಳನ್ನು ಹೊಡೆದೋಡಿಸಲು ಶ್ರದ್ಧಾಳುಗಳು ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತಾರೆ, ಇಲ್ಲಿನ ದರ್ಗಾವು ಕರ್ಬಾಲದ ಹಜರತ್ ಇಮಾಮ್ ಹುಸೇನ್ ದರ್ಗಾದ ಮಾದರಿಯಲ್ಲೇ ಇದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಕರ್ಬಾಲದ ಬಗೆಗೊಂದಿಷ್ಟು ಬೆಳಕು ಚೆಲ್ಲುವ ಪ್ರಯತ್ನವಿದು.

ಮುಸ್ಲಿಂ ಜಗತ್ತಿನಲ್ಲಿ ಕರ್ಬಾಲ ಎಂಬ ಊರು ತನ್ನದೇ ಆದ ಪ್ರಾಧಾನ್ಯತೆ ಹೊಂದಿದೆ. ಶತ ಶತಮಾನಗಳಿಂದಲೂ ಇದು ಮುಸಲ್ಮಾನ ಜನಾಂಗೀಯರ ನೆನಪಿನಲ್ಲುಳಿಯುವ, ಉಳಿಯುತ್ತಿರುವ ಊರು. ಇದು ಇರಾಕಿನಲ್ಲಿದೆ. ಈ ಊರನ್ನು ಇಸ್ಲಾಂ ಧರ್ಮಾನುಯಾಯಿಗಳು ದುಃಖದಿಂದ, ಬೇಸರದಿಂದ ನೆನಪಿಸಿಕೊಳ್ಳುತ್ತಾರೆ. ಶಾಂತಿ ದೂತ ಇಮಾಮ್ ಹುಸೇನ್ ಮತ್ತು ಅವರ ಕುಟುಂಬ ಸದಸ್ಯರು, ಮಿತ್ರರ ಅಪೂರ್ವ ತ್ಯಾಗ-ಬಲಿದಾನವು ಅವರ ನೆನಪಿನಾಗಸದಲ್ಲಿ ಸುಳಿದು ಹೋಗುತ್ತದೆ.

ಇವತ್ತಿಗೂ ವರ್ಷದ ಎಲ್ಲಾ ದಿನಗಳಲ್ಲಿ ಹುತಾತ್ಮ ಗುರು ಇಮಾಮ್ ಹುಸೇನರಿಗೆ ಗೌರವ ಅರ್ಪಿಸಲು ಶ್ರದ್ಧಾಳುಗಳು ಭಾರೀ ಸಂಖ್ಯೆಯಲ್ಲಿ ಈ ಪವಿತ್ರ ತಾಣವನ್ನು ಸಂದರ್ಶಿಸುತ್ತಿರುತ್ತಾರೆ. ಕರ್ಬಾಲಕ್ಕೆ ತಲುಪಲು ಎರಡು ಮುಖ್ಯ ಮಾರ್ಗಗಳಿವೆ. ಒಂದು- ಇರಾಕಿ ರಾಜಧಾನಿ ಬಾಗ್ದಾದಿನಿಂದ ಅಲ್ ಮುಸೈಲ್ಸ್ ಮೂಲಕ ಹಾಗೂ ಮತ್ತೊಂದು ಪವಿತ್ರ ಪಟ್ಟಣ ನಜಾಫ್ನಿಂದ. ಕರ್ಬಾಲಕ್ಕೆ ತಲುಪುತ್ತಿದ್ದಂತೆಯೇ, ತನ್ನ ಮಿನಾರುಗಳು ಮತ್ತು ಗುಮ್ಮಟಗಳು ದಯಾಮಯನಾದ ದೇವನ ಬೆಳಕಿನಿಂದ ಕಂಗೊಳಿಸುತ್ತಿದ್ದು, ಶ್ರದ್ಧಾಳುಗಳನ್ನು ಆಕರ್ಷಿಸುತ್ತವೆ.

ಕರ್ಬಾಲದಲ್ಲಿರುವ ಎರಡು ಅತ್ಯಂತ ಪವಿತ್ರ ಪ್ರಾರ್ಥನಾ ತಾಣಗಳೆಂದರೆ, ಇಮಾಮ್ ಹುಸೇನ್ ಮತ್ತು ಅವರ ಸಹೋದರ ಅಬುಲ್ ಫಜಲ್ ಅಲ್-ಅಬ್ಬಾಸ್ ಅವರದು. ಇಮಾಮ್ ಹುಸೇನ ದರ್ಗಾದ ಒಳಗೆ ಅವರ ಇಬ್ಬರು ಮಕ್ಕಳಾದ ಹಜರತ್ ಅಲಿ ಅಕ್ಬರ್ ಮತ್ತು ಹಜರತ್ ಅಲಿ ಅಸ್ಗರ್ ಹಾಗೂ ನಂಬಿಕಸ್ಥ ಮಿತ್ರ ಹಜರತ್ ಹಬೀಬ್ ಇಬ್ನ್-ಎ-ಮುಜಾಹಿರ್ ಅವರ ಗೋರಿಗಳಿವೆ.

ಒಳಭಾಗದ ಒಂದು ಮೂಲೆಯಲ್ಲಿ ಕರ್ಬಾಲದ ಎಲ್ಲಾ 72 ಹುತಾತ್ಮರು ದಫನ ಮಾಡಲಾದ ಗಂಜ್-ಎ-ಶುಹಾದಾ ಇದೆ. ದ್ವಾರಗಳಲ್ಲೊಂದರ ಸಮೀಪ, ಇಮಾಮ್ ಹುಸೇನರ ಬಲಿದಾನದ ಸ್ಥಳ ಬಾಬ್-ಉಲ್-ದಹಾಬ್ ಇದೆ. ಈ ಎಲ್ಲಾ ಗೋರಿಗಳು ಮತ್ತು ದರ್ಗಾಗಗಳು ಸ್ವರ್ಣ ಗವಾಕ್ಷಿಗಳು ಹಾಗೂ ಆಕರ್ಷಕ ದೀಪಾಲಂಕಾರದೊಂದಿಗೆ ಅತ್ಯಂತ ಸುಂದರವಾಗಿ ಅಲಂಕೃತವಾಗಿವೆ.

ಮೊದಲು ಕರ್ಬಾಲ ಎಂಬುದು ಫಲವತ್ತಾದ ಭೂಮಿ ಮತ್ತು ಉತ್ತಮ ನೀರಿನ ಸೌಕರ್ಯ ಹೊಂದಿದ್ದರೂ ನಿರ್ಜನ ಪ್ರದೇಶವಾಗಿತ್ತು ಮತ್ತು ಇಲ್ಲಿ ಯಾವುದೇ ನಿರ್ಮಾಣ ಕಾರ್ಯಗಳು ನಡೆದಿರಲಿಲ್ಲ. ಹತ್ತನೇ ಮುಹರ್ರಮ್ 61 ಅ.ಹ. (ಕ್ರಿ.ಶ.680)ರಲ್ಲಿ, ಇಮಾಮ್ ಹುಸೇನರ ಬಲಿದಾನವಾದ ಬಳಿಕ, ದೂರದೂರುಗಳಿಂದಲೂ ಸಮೀಪದ ಬುಡಕಟ್ಟು ನಿವಾಸಿಗಳೂ ಈ ಪವಿತ್ರ ತಾಣವನ್ನು ಸಂದರ್ಶಿಸತೊಡಗಿದರು. ಸಂದರ್ಶನಕ್ಕೆಂದು ಬಂದವರಲ್ಲಿ ಕೆಲವರು ಇಲ್ಲಿಯೇ ನೆಲೆ ನಿಂತರು ಮತ್ತು ತಮ್ಮನ್ನೂ ಇಲ್ಲೇ ದಫನ ಮಾಡುವಂತೆ ಬಂಧು/ಮಿತ್ರರು ಹಾಗೂ ಕುಟುಂಬಿಕರನ್ನು ಕೇಳಿಕೊಂಡರು.

ಅಲ್ ರಶೀದ್ ಮತ್ತು ಅಲ್ ಮುತಾವಕ್ಕಿಲ್ ಮುಂತಾದ ಆ ಪ್ರದೇಶದ ಆಡಳಿತಗಾರರು ಅಲ್ಲಿನ ಅಭಿವೃದ್ಧಿಯನ್ನು ನಿರ್ಬಂಧಿಸಿ ಮಾಡಿದ ಹಲವಾರು ಪ್ರಯತ್ನಗಳ ಹೊರತಾಗಿಯೂ, ಈ ನಿರ್ಜನ ತಾಣವು ಜಗತ್ತಿನ ಮುಸ್ಲಿಂ ಶ್ರದ್ಧಾಳುಗಳ ಪವಿತ್ರ ಪಟ್ಟಣವಾಗಿ ಬೆಳೆದು ನಿಂತಿದೆ.

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

Show comments