Select Your Language

Notifications

webdunia
webdunia
webdunia
webdunia

ಮದಿರೆ ಸೇವಿಸೋ ಕಾಲಭೈರವ

ಮದಿರೆ ಸೇವಿಸೋ ಕಾಲಭೈರವ
Shruthi AgarwalWD
ಮದಿರೆ ಸೇವಿಸುವ ವಿಗ್ರಹವನ್ನು ಎಂದಾದರೂ ನೋಡಿದ್ದೀರಾ? ನೋಡಿಲ್ಲದಿರಬಹುದು. ಪ್ರತಿಮೆಯೊಂದು ಮದ್ಯ ಸೇವಿಸುವುದು ಸಾಧ್ಯವೇ? ವಿಗ್ರಹ ಎಂಬುದು ಜೀವವಿಲ್ಲದ ವಸ್ತು ಮತ್ತು ನಿರ್ಜೀವ ವಸ್ತುಗಳಿಗೆ ಹಸಿವು, ಬಾಯಾರಿಕೆಯ ಆಗಲಾರದು ಎಂಬುದು ನಮ್ಮ ಅನುಭವದಿಂದ ತಿಳಿದ ಸಂಗತಿ... ಆದರೆ... ಉಜ್ಜಯಿನಿಯ ಕಾಲಭೈರವನ ಪ್ರತಿಮೆಯು ಇದಕ್ಕೆ ಹೊರತಾದದ್ದು. ಭಕ್ತಾದಿಗಳು ಕಾಲಭೈರವನ ಪ್ರತಿಮೆಗೆ ವೈನ್ ಅರ್ಪಿಸುತ್ತಾರೆ ಮತ್ತು ಅವರ ಎದುರಲ್ಲೇ ಈ ಪ್ರತಿಮೆಯು ಈ ಮದ್ಯವನ್ನು ಸೇವಿಸುತ್ತದೆ!

"ನೀವು ನಂಬುವಿರಾ" ಎಂಬ ಸರಣಿಯ ಅಂಗವಾಗಿ, ಈ ನಿಗೂಢತೆಯ ಹಿಂದಿರುವ ನಿಜಾಂಶವನ್ನು ಪತ್ತೆ ಹಚ್ಚಲು ನಾವು ಪ್ರಯತ್ನಿಸಿದೆವು. ಈ ಕಥೆಯ ಹಿಂದಿರುವ ವಾಸ್ತವಿಕತೆಯನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ನಾವು ಮಹಾಕಾಲೇಶ್ವರನ (ಈಶ್ವರನ 12 ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲೊಂದು) ನಗರಿ ಉಜ್ಜಯಿನಿಯತ್ತ ಪಯಣ ಬೆಳೆಸಿದೆವು. ಇದಕ್ಕೆ ದೇವಾಲಯಗಳ ನಗರಿ ಎಂಬ ಖ್ಯಾತಿಯೂ ಇದೆ. ಆದರೆ ನಮ್ಮ ಗುರಿ ಇದ್ದುದು ಮಹಾಕಾಲೇಶ್ವರ ಮಂದಿರದಿಂದ 5 ಕಿ.ಮೀ. ದೂರದಲ್ಲಿರುವ ಕಾಲಭೈರವನ ಆಲಯ. ನಾವಾಗಲೇ ಮಂದಿರದ ಮುಖ್ಯದ್ವಾರ ತಲುಪಿದ್ದೆವು.

ವೈನ್ ಸೇವಿಸುವ ಕಾಲಭೈರವನ ಮಂದಿರದ ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

ಮಂದಿರದ ಹೊರಗೆ ವೈನ್ ಬಾಟಲಿಗಳು, ಹೂವುಗಳು ಮತ್ತು ಇತರ ಪೂಜಾ ಸಾಮಗ್ರಿಗಳನ್ನಿಟ್ಟಿರುವ ಹಲವು ಅಂಗಡಿಗಳು ಇದ್ದವು. ಕೆಲವು ಭಕ್ತರು ನಮ್ಮೆದುರೇ ಆ ಮಳಿಗೆಗಳಿಂದ ವೈನ್ ಬಾಟಲಿ ಖರೀದಿಸುತ್ತಿದ್ದರು.
webdunia
Shruthi AgarwalWD


ಈ ವಿಷಯದ ಬಗ್ಗೆ ಏನಾದರೂ ವಾಸ್ತವಾಂಶದ ಬಗ್ಗೆ ತಿಳಿದಿದೆಯೇ ಎಂದು ನಾವು ಅಂಗಡಿ ಮಾಲೀಕರಲ್ಲೊಬ್ಬನಾದ ರವಿ ವರ್ಮಾನನ್ನು ಕೇಳಿದೆವು. "ಭಗವಾನ್ ಭೈರವನ ಮಂದಿರಕ್ಕೆ ಬರುವ ಪ್ರತಿಯೊಬ್ಬ ಭಕ್ತರೂ ದೇವರಿಗೆ ವೈನ್ ಅರ್ಪಿಸುತ್ತಾರೆ. ವೈನ್ ತುಂಬಿದ ಪಾತ್ರೆಯನ್ನು ಭೈರವನ ಬಾಯಿಗೆ ಹಿಡಿದಾಗ, ವೈನ್ ಈ ಪಾತ್ರೆಯಿಂದ ಮಾಯವಾಗಲು ಆರಂಭವಾಗುತ್ತದೆ" ಎಂದು ಆತ ಉತ್ತರಿಸಿದ್ದಾನೆ.

ಇಂಥ ಆಚರಣೆ, ನಂಬಿಕೆಗಳ ಬಗ್ಗೆ ನಿಮಗೇನನ್ನಿಸುತ್ತದೆ? ಇಲ್ಲಿ ಚರ್ಚಿಸಿ.

webdunia
WDWD
ನಾವು ಮಂದಿರದೊಳಗೆ ಪ್ರವೇಶಿಸಿದೆವು. ಅಲ್ಲಿ ಭಕ್ತರ ಸಮೂಹವೇ ನೆರೆದಿತ್ತು. ಪ್ರತಿಯೊಬ್ಬರ ಕೈಯಲ್ಲೂ ಒಂದು ಬುಟ್ಟಿ ತುಂಬಾ ಹೂವು, ತೆಂಗಿನಕಾಯಿ ಮತ್ತು ಒಂದು ಬಾಟಲಿ ವೈನ್. ಭೈರವನ ಪ್ರತಿಮೆಯಿರುವ ಗರ್ಭಗೃಹದ ಒಂದು ಮೂಲೆಯಲ್ಲಿ ನಿಂತು ನಾವು ಭೈರವ ಭಗವಾನ್ ಯಾವ ರೀತಿ ಮದಿರೆ ಸೇವಿಸುತ್ತಾನಂತಾ ನೋಡುತ್ತಾ ಇದ್ದೆವು...

ಗರ್ಭ ಗೃಹದಲ್ಲಿನ ಒಟ್ಟಾರೆ ಪರಿಸ್ಥಿತಿಯೇ ತುಂಬಾ ವಿಚಿತ್ರವಾಗಿತ್ತು. ಅರ್ಚಕ ಗೋಪಾಲ್ ಮಹಾರಾಜ್ ಅವರು ಪ್ರತಿಮೆಯೆದುರು ಮಂತ್ರ ಪಠಿಸುತ್ತಾ, ವೈನ್ ತುಂಬಿದ್ದ ಪ್ಲೇಟ್ ಒಂದನ್ನು, ಕಾಲ ಭೈರವನ ಬಾಯಿಗೆ ತಾಗುವಂತೆ ಇರಿಸಿದರು.... ಅರೆ!!! ಒಂದೇ ಒಂದು ಹನಿಯೂ ಇಲ್ಲದಂತೆ ಮದ್ಯ ಖಾಲಿ!!!

ವೈನ್ ಸೇವಿಸುವ ಕಾಲಭೈರವನ ಮಂದಿರದ ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

webdunia
Shruthi AgarwalWD
ಇದೇ ರೀತಿ ಭಕ್ತರು ತಂದ ಮದ್ಯವನ್ನು ಪ್ಲೇಟಿನಲ್ಲಿರಿಸಿ ಕಾಲ ಭೈರವನಿಗೆ ಅರ್ಪಿಸುವುದು, ಅದು ಮಾಯವಾಗುವುದು ಮುಂದುವರಿದೇ ಇತ್ತು. ಇದೆಲ್ಲವೂ ನಮ್ಮ ಕಣ್ಣೆದುರಲ್ಲೇ ನಡೆಯುತ್ತಿತ್ತು... ಪ್ರತಿಮೆಯು ಅರ್ಚಕರ ಕೈಯ ಮೂಲಕ ವೈನ್ ಸೇವಿಸುತ್ತಿತ್ತು.

ನಾವು ಈ ವಿಷಯದ ಕುರಿತಾಗಿ ಅಲ್ಲೇ ಇದ್ದ ಶ್ರದ್ಧಾಳು ರಾಜೇಶ್ ಚತುರ್ವೇದಿ ಎಂಬವರ ಜತೆ ಚರ್ಚಿಸಿದೆವು. ಅವರು ಉಜ್ಜಯಿನಿ ನಿವಾಸಿಯಾಗಿದ್ದು, ಪ್ರತಿ ಭಾನುವಾರವೂ ಈ ಮಂದಿರಕ್ಕೆ ಭೇಟಿ ನೀಡುತ್ತಿದ್ದಾರಂತೆ. ಈ ವೈನ್ ಎಲ್ಲಿಗೆ ಹೋಗುತ್ತದೆ ಎಂಬುದನ್ನು ತಿಳಿಯಲು ಆರಂಭದಲ್ಲಿ ನನಗೂ ಆಸಕ್ತಿ ಇತ್ತು ಎನ್ನುವ ಅವರು, ಈಗ ಕಾಲ ಭೈರವನೇ ಪೂರ್ತಿಯಾಗಿ ವೈನ್ ಸೇವಿಸುತ್ತಾನೆ ಎಂಬುದನ್ನು ಬಲವಾಗಿ ನಂಬುತ್ತಾರಂತೆ.

ಇಂಥ ಆಚರಣೆ, ನಂಬಿಕೆಗಳ ಬಗ್ಗೆ ನಿಮಗೇನನ್ನಿಸುತ್ತದೆ? ಇಲ್ಲಿ ಚರ್ಚಿಸಿ.

webdunia
WDWD
ಕಾಲಭೈರವನ ಈ ಮಂದಿರಕ್ಕೆ ಸುಮಾರು 6000 ವರ್ಷಗಳ ಇತಿಹಾಸವಿದೆ. ಇದೊಂದು "ವಾಮ ಮಾರ್ಗಿ ತಾಂತ್ರಿಕ" ದೇವಾಲಯ. ಇಂತಹ ಮಂದಿರಗಳಲ್ಲಿ, ಮದ್ಯ, ಮಾಂಸ, ಹಣ ಇತ್ಯಾದಿಯನ್ನು ದೇವರಿಗೆ ಅರ್ಪಿಸಲಾಗುತ್ತದೆ. ಪುರಾತನ ಕಾಲದಲ್ಲಿ, ಮಾಟ-ಮಂತ್ರ ವಿದ್ಯಾ ಪರಿಣತರಿಗೆ ಮಾತ್ರವೇ ಈ ಆಲಯಕ್ಕೆ ಪ್ರವೇಶವಿತ್ತು. ಕಾಲ ಕಳೆದಂತೆ ಇದು ಎಲ್ಲಾ ಭಕ್ತರಿಗೂ ತೆರೆದುಕೊಂಡಿತು.

ಈ ನಿಗೂಢತೆಯ ಹಿಂದಿನ ಸತ್ಯಾಂಶವೇನು? ಹಲವಾರು ತರ್ಕಗಳನ್ನು ಮುಂದಿಡಲಾಗುತ್ತಿದೆ. ಅದೆಷ್ಟೋ ಚರ್ಚೆಗಳು ನಡೆದಿವೆ, ನೂರಾರು ಸಂಶೋಧನೆಗಳು ನಡೆದಿವೆ. ಆದರೆ ಯಾರಿಗೂ ಕೂಡ ಇದರ ಹಿಂದಿನ ರಹಸ್ಯವನ್ನು ಭೇದಿಸಲಾಗಲಿಲ್ಲ. ಬ್ರಿಟಿಷ್ ಆಡಳಿತಾವಧಿಯಲ್ಲೇ ಆಂಗ್ಲ ಅಧಿಕಾರಿಯೊಬ್ಬ ಇದರ ಹಿಂದಿನ ರಹಸ್ಯ ಬಯಲಿಗೆಳೆಯಲು ಯತ್ನಿಸಿದ್ದನಾದರೂ ಅದು ವಿಫಲವಾಗಿತ್ತು ಎಂದು ಕೆಲವರು ಹೇಳುತ್ತಾರೆ.

ವೈನ್ ಸೇವಿಸುವ ಕಾಲಭೈರವನ ಮಂದಿರದ ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

webdunia
Shruthi AgarwalWD
ನಾವು ಮಂದಿರದ ಒಳಗೆ ಮತ್ತು ಹೊರಗೆ ಪ್ರತಿಯೊಂದನ್ನೂ ಕೂಲಂಕಷವಾಗಿ ಪರಿಶೀಲಿಸಿದೆವು. ಹಲವಾರು ಮಂದಿಯೊಂದಿಗೆ ಈ ಕುರಿತು ಚರ್ಚಿಸಿದೆವು. ಆದರೆ ಕೊನೆಗೆ, ಕಾಲ ಭೈರವನೇ ಮದಿರೆ ಸೇವಿಸುತ್ತಾನೆ ಎಂಬುದನ್ನು ನಂಬಲೇಬೇಕಾಯಿತು.

ಈ ನಂಬಿಕೆಯ ಆರಂಭ: ಈ ಸಂಪ್ರದಾಯ ಎಷ್ಟು ಹಳೆಯದು ಎಂಬುದು ಯಾರಿಗೂ ತಿಳಿದಿಲ್ಲ... ಕೆಲವು ಭಕ್ತರ ಪ್ರಕಾರ, ಸಣ್ಣ ಪ್ರಾಯದಿಂದಲೂ ಅವರು ಇಲ್ಲಿಗೆ ಬರುತ್ತಿದ್ದರು ಮತ್ತು ಭೈರವ ದೇವನಿಗೆ ವೈನ್ ಅರ್ಪಿಸುತ್ತಿದ್ದರು. ಪುರಾತನ ಕಾಲದಲ್ಲಿ, ವೈನ್ ಜತೆಗೆ ಮಂದಿರ ಪರಿಸರದಲ್ಲಿ ಪ್ರಾಣಿ ಬಲಿಯನ್ನೂ ನೀಡಲಾಗುತ್ತಿತ್ತಂತೆ. ಈಗ ವೈನ್ ಅರ್ಪಣೆಗೆ ಮಾತ್ರವೇ ಈ ಸಂಪ್ರದಾಯ ಸೀಮಿತವಾಗಿದೆ. ಕೆಲವು ವಿಶೇಷ ಸಂದರ್ಭಗಳಲ್ಲಿ, ಮಂದಿರದ ಆಡಳಿತವು ಕೂಡ ಕಾಲಭೈರವನಿಗೆ ಮದಿರೆ ಅರ್ಪಿಸುತ್ತದೆ.

ಇಂಥ ಆಚರಣೆ, ನಂಬಿಕೆಗಳ ಬಗ್ಗೆ ನಿಮಗೇನನ್ನಿಸುತ್ತದೆ? ಇಲ್ಲಿ ಚರ್ಚಿಸಿ.

Share this Story:

Follow Webdunia kannada