Select Your Language

Notifications

webdunia
webdunia
webdunia
webdunia

'ಜಾಂಡೀಸ್‌‌'ಗೊಂದು ವಿಶಿಷ್ಟ ಚಿಕಿತ್ಸೆ

'ಜಾಂಡೀಸ್‌‌'ಗೊಂದು ವಿಶಿಷ್ಟ ಚಿಕಿತ್ಸೆ
, ಸೋಮವಾರ, 1 ಡಿಸೆಂಬರ್ 2008 (20:09 IST)
ಗುಣಪಡಿಸಲಾಗದ ಕಾಯಿಲೆಗಳಿಗಾಗಿ ಜನರು ಪೂಜೆ-ಪುನಸ್ಕಾರಗಳನ್ನು ಮಾಡುವ ಮೂಲಕ ದೇವರ ಮೊರೆ ಹೋಗುವುದು ಅಥವಾ ಭೂತಪ್ರೇತಗಳ ಉಚ್ಚಾಟನೆಯಂತಹ ಅಚರಣೆಗಳನ್ನು ನಡೆಸುವುದು ಸಾಮಾನ್ಯವಾಗಿ ನಾವೆಲ್ಲರೂ ತಿಳಿದಿರು ವಿಷಯ. ಆದರೆ ಈ ಬಾರಿಯ ನೀವು ನಂಬುವಿರಾ ಸರಣಿಯಲ್ಲಿ ಜಾಂಡೀಸ್(ಅರಸಿನ ಕಾಮಾಲೆ ರೋಗ) ಅನ್ನು ಗುಣಪಡಿಸುವ ವಿಶಿಷ್ಟ ವಿಧಾನವೊಂದನ್ನು ನಿಮಗೆ ಪರಿಚಯಿಸುತ್ತಿದ್ದೇವೆ.

ನಿಮ್ಮ ಕಣ್ಣಿಗೆ ಬೀಳುವ ಜಾಂಡೀಸ್ ರೋಗಿಗಳ ಉದ್ದನೆಯ ಸಾಲು ಡಾಕ್ಟರ್ ಕ್ಲಿನಿಕ್ ಮುಂದಲ್ಲ, ಮನ್‍ಜೀತ್ ಪಾಲ್ ಸಾಲುಜಾ ಎಂಬ ವ್ಯಕ್ತಿಯ ಮನೆಯ ಮುಂದೆ. ಇವರು ತಮ್ಮ ವಿಶಿಷ್ಟ ಶಕ್ತಿಯಿಂದ ಜಾಂಡೀಸ್ ಅನ್ನು ಗುಣಪಡಿಸುವುದಾಗಿ ಹೇಳುತ್ತಾರೆ. ಅವರು ಶಂಕಾಕಾರದ (ಕೋನ್) ಕಾಗದವನ್ನು ರೋಗಿಯ ಕಿವಿಯ ಬಳಿ ಇರಿಸುತ್ತಾರೆ ಮತ್ತು ನಂತರ ಕ್ಯಾಂಡಲ್ ಸಹಾಯದಿಂದ ಕಾಗದದ ಇನ್ನೊಂದು ತುದಿಯನ್ನು ಸುಡುತ್ತಾರೆ. ಈ ವೇಳೆ ಅವರು ನಿರಂತರವಾಗಿ ಗುರುಬಾನಿಯನ್ನು ಪಠಿಸುತ್ತಿರುತ್ತಾರೆ.
WD
ಮನ್‌‌‌ಜೀತ್ ಸರ್ದಾರ್ ಜನಾಂಗಕ್ಕೆ ಸೇರಿದವರಾದರೂ ಚಿಕಿತ್ಸೆ ಆರಂಭಿಸುವ ಮೊದಲು ವಿಘ್ನ ನಿವಾರಕ ಗಣೇಶನನ್ನು ಪೂಜಿಸುವುದನ್ನು ಎಂದೂ ಮರೆಯುವುದಿಲ್ಲ.

ಸುಡಲ್ಪಟ್ಟ (ಶಂಕಾಕೃತಿಯ)ಕಾಗದವನ್ನು ಕಿವಿಯಿಂದ ಸರಿಸಲಾಗುತ್ತದೆ, ಆಗ ಹಳದಿ ಬಣ್ಣದ ಪದಾರ್ಥ ಕಿವಿಯ ಸುತ್ತಲೂ ಶೇಖರಣೆಯಾಗಿರುವುದನ್ನು ನೋಡಬಹುದು. ಮನ್‌ಜೀತ್ ಅವರ ಪ್ರಕಾರ ಜಾಂಡೀಸ್‌ನ ಅರಸಿನ ಕೀವು ಕಿವಿಯ ಮೂಲಕ ಈ ರೀತಿ ಹೊರಬರುತ್ತದೆ.

ಇಲ್ಲಿಗೆ ಬರುವ ರೋಗಿಗಳೆಲ್ಲರೂ ಕಡ್ಡಾಯವಾಗಿ ಹೂವಿನ ಹಾರ, ಅಗರಬತ್ತಿ ಮತ್ತು ಒಂದು ತೆಂಗಿನಕಾಯಿಯನ್ನು ತರಬೇಕು. ಜನರು ತಾವು ಇಚ್ಚಿಸಿದಷ್ಟು ಕಾಣಿಕೆಯನ್ನು ನೀಡಬಹುದು. ಮನ್‌ಜೀತ್ ತಾವು ಉಚಿತವಾಗಿ ಚಿಕಿತ್ಸೆ ನೀಡುವುದಾಗಿ ಮತ್ತು ಈ ಕಾಣಿಕೆಗಳು ರೋಗಿಗಳ ಪ್ರೀತಿಯನ್ನು ಸೂಚಿಸುತ್ತದೆ ಎನ್ನುತ್ತಾರೆ.
webdunia
WD
ಈ ಸ್ಥಳಕ್ಕೆ ಭೇಟಿ ನೀಡುವ ಜನರು ಔಷಧಿ ಮತ್ತು ಔಷಧೀಯ ಚಿಕಿತ್ಸೆಗಳ ಜೊತೆಗೆ ಇಂತಹ ಕಾಯಿಲೆಗಳನ್ನು ಗುಣಪಡಿಸಲು ಪ್ರಾರ್ಥನೆಗಳು ಸಹ ಅಗತ್ಯ ಎನ್ನುತ್ತಾರೆ.

ಮನ್‌ಜೀತ್ ಹೇಳುವಂತೆ ಅರಸಿನ ಕಾಮಾಲೆ ರೋಗ ಗುಣಪಡಿಸುವ ಕೌಶಲ ಅವರ ಕುಟುಂಬದವರಿಗೆ ಭಗವಂತನ ವರದಾನವಂತೆ. ಮನ್ ಜೀತ್‌ರ ತಂದೆ ಮತ್ತು ಅಜ್ಜ ಸಹ ಈ ಚಿಕಿತ್ಸೆ ನೀಡುತ್ತಿದ್ದರು. ಮನ್‌ಜೀತ್ ಔಷಧೀಯ ಹನಿಗಳನ್ನು ಸಹ ಸೇವಿಸಲು ನೀಡುತ್ತಾರೆ ಇದು ಹೋಮಿಯೋಪಥಿಕ್ ಮತ್ತು ಆಯುರ್ವೇದ ಔಷಧಿಗಳ ಮಿಶ್ರಣವಾಗಿದೆ. ಸರಾಸರಿಯಾಗಿ ದಿನಕ್ಕೆ 80 ರಿಂದ 90 ಜನರಿಗೆ ಮನ್ಜೀತ್ ಚಿಕಿತ್ಸೆ ನೀಡುತ್ತಾರೆ. ರೋಗಿಯನ್ನು ನೋಡಿದ ತಕ್ಷಣವೇ ರೋಗವನ್ನು ಗುಣಪಡಿಸಲು ತಗಲುವ ಅವಧಿಯನ್ನು ನಿರ್ಧರಿಸಲು ತಮಗೆ ಸಾಧ್ಯವಾಗುತ್ತದೆ ಎಂದು ಅವರು ಹೇಳುತ್ತಾರೆ.
webdunia
WD
ಮನ ಜೀತ್ ಅವರು ಹೇಳುವಂತೆ ವೈದ್ಯರೇ ಕಳುಹುಸಿದ ಹಲವಾರು ರೋಗಿಗಳು ಅವರಲ್ಲಿಗೆ ಬರುತ್ತಾರೆ. ಅನೇಕ ವೈದ್ಯರೂ ಸಹ ತಮ್ಮ ರೋಗಿಗಳನ್ನು ಚಿಕಿತ್ಸೆಗಾಗಿ ಮನ್‌ಜೀತ್ ಬಳಿ ಕಳುಹಿಸುತ್ತಾರಂತೆ. ಇಂತಹ ಚಿಕಿತ್ಸೆ ನಿಜವಾಗಿಯೂ ವಿಶಿಷ್ಟ ಕೌಶಲವೇ ಅಥವಾ ಇದಕ್ಕೇನಾದರೂ ವೈಜ್ಞಾನಿಕ ಹಿನ್ನಲೆ ಇದ್ದೀತೇ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ತಿಳಿಸಿ.

Share this Story:

Follow Webdunia kannada